ಆ್ಯಪ್ನಗರ

ಅರಣ್ಯ ಸಿಬ್ಬಂದಿ ದೌರ್ಜನ್ಯ, ಪ್ರತಿಭಟನೆ ಎಚ್ಚರಿಕೆ

ಅರಣ್ಯ ಇಲಾಖೆ ಸಿಬ್ಬಂದಿಯ ದೌರ್ಜನ್ಯ ವಿರೋಧಿಸಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲು ಸಿದ್ಧತೆ ಮಾಡಲಾಗುತ್ತಿದೆ ಎಂದು ತಾಲೂಕಿನ ಶಾನುವಳ್ಳಿ ಗ್ರಾ.ಪಂ.ವ್ಯಾಪ್ತಿಯ ಮೇಲು ಹುಲುಗಾರು ಗ್ರಾಮದ ಪರಿಶಿಷ್ಟ ಪಂಗಡದ ಗ್ರಾಮಸ್ಥರು ತಿಳಿಸಿದರು.

Vijaya Karnataka 29 Mar 2019, 5:00 am
ಕೊಪ್ಪ: ಅರಣ್ಯ ಇಲಾಖೆ ಸಿಬ್ಬಂದಿಯ ದೌರ್ಜನ್ಯ ವಿರೋಧಿಸಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲು ಸಿದ್ಧತೆ ಮಾಡಲಾಗುತ್ತಿದೆ ಎಂದು ತಾಲೂಕಿನ ಶಾನುವಳ್ಳಿ ಗ್ರಾ.ಪಂ.ವ್ಯಾಪ್ತಿಯ ಮೇಲು ಹುಲುಗಾರು ಗ್ರಾಮದ ಪರಿಶಿಷ್ಟ ಪಂಗಡದ ಗ್ರಾಮಸ್ಥರು ತಿಳಿಸಿದರು.
Vijaya Karnataka Web CKM-28KPH1


ಘಟನೆ ವಿವರ:

ಮೇಲು ಹುಲುಗಾರು ಗ್ರಾಮದಲ್ಲಿ ಹಲವು ತಲೆಮಾರಿನಿಂದ ಕೃಷಿ ಮಾಡಿಕೊಂಡು ವಾಸಿಸುತ್ತಿರುವ ಅವಿಭಕ್ತ ಕುಟುಂಬದ ಸದಸ್ಯ ಚಂದ್ರಶೇಖರ್‌, ಇತ್ತೀಚೆಗೆ ತಮ್ಮ ಜಮೀನು ಸಮೀಪದ ಸ್ಥಳವೊಂದರಲ್ಲಿ ಗುಡಿಸಲು ಕಟ್ಟಿಕೊಂಡಿದ್ದರು. ಆದರೆ ಬುಧವಾರ ಗಾರ್ಡ್‌ ರಾಜು ಮತ್ತು ಫಾರೆಸ್ಟರ್‌ ಸುಬ್ರಹ್ಮಣ್ಯ ಆಗಮಿಸಿ, ಇದು ಸೆಕ್ಷ ನ್‌ 4 ಎಂದು ನಮೂದಿಸಲಾದ ಜಾಗವಾಗಿದೆ ಎಂದು ಅಬ್ಬರಿಸಿ, ಅವರ ಮನೆಯನ್ನು ಬೀಳಿಸಿ, ಸೂರಿನ ಶೀಟ್‌ ಒಡೆದು ಪುಡಿಮಾಡಿ, ಅವಾಚ್ಯವಾಗಿ ನಿಂದಿಸಿ ದೌರ್ಜನ್ಯ ಎಸೆಗಿದ್ದಾರೆ. ಅಲ್ಲದೆ ತಮ್ಮ ವಿರುದ್ಧ ಬೆಂಗಳೂರಿನ ನ್ಯಾಯಾಲಯಕ್ಕೆ ದೂರು ನೀಡಿ, ಅಲ್ಲಿಗೆ ಅಲೆಯುವಂತೆ ಮಾಡಿ, ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಶೇಖರ್‌ ಪತ್ರಿಕೆಗೆ ತಿಳಿಸಿದರು.

ಎದುರಿಗೆ ಸುಮಾರು ಹತ್ತಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿ ಬೇಲಿ ಹಾಕಿದೆ. ಅದನ್ನು ಮುಟ್ಟದ ಇಲಾಖೆಯವರು, ಕೇವಲ ಒಂದು ಗುಡಿಸಲಿನ ಜಾಗಕ್ಕೆ ಇಷ್ಟು ರಾದ್ಧಾಂತ ಮಾಡಿರುವುದು ಎಷ್ಟು ಸಮಂಜಸ? ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯವೆ ಎಂದು ಪ್ರಶ್ನಿಸಿದರು.

ಸಂತ್ರಸ್ತರ ಪರವಾಗಿ ಗ್ರಾಮದ ಎಲ್ಲ ಗಿರಿಜನ ಕುಟುಂಬದ ಸದಸ್ಯರು ಸೇರಿ ಇಲಾಖೆ ದೌರ್ಜನ್ಯದ ವಿರುದ್ಧ ಹೋರಾಟ ರೂಪಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಚಂದ್ರಶೇಖರ್‌ ಅವರಿಗೆ ಆಗಿರುವ ನಷ್ಟವನ್ನು ಸಿಬ್ಬಂದಿಯ ವೇತನದಲ್ಲಿ ಕೊಡಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ