ಆ್ಯಪ್ನಗರ

ಜಾನುವಾರು ಕಳವು ಮಾಡುತ್ತಿದ್ದ ನಾಲ್ವರ ಬಂಧನ

ನಾನಾಕಡೆ ಜಾನುವಾರು ಕಳವು ಮಾಡುತ್ತಿದ್ದ ನಾಲ್ವರನ್ನು ಪಟ್ಟಣದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Vijaya Karnataka 31 Aug 2018, 5:00 am
ಕಡೂರು : ನಾನಾಕಡೆ ಜಾನುವಾರು ಕಳವು ಮಾಡುತ್ತಿದ್ದ ನಾಲ್ವರನ್ನು ಪಟ್ಟಣದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web CKM-30KDR1


ಸೊಕ್ಕೆತಿಮ್ಮಾಪುರದ ಮಂಜುನಾಥ(20), ಸಾಣೇಹಳ್ಳಿಯ ರಾಜಪ್ಪ(36), ಬೀರೂರು ಹೋಬಳಿ ಹೋರಿತಿಮ್ಮಾಪುರದ ವಿನೋದ್‌(21) ಮತ್ತು ಬೀರೂರು ಹೋಬಳಿ ಬಿ.ಕೋಡಿಹಳ್ಳಿಯ ಶಿವಕುಮಾರ್‌(23) ಬಂಧಿತ ಆರೋಪಿಗಳು. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ವಿ.ಯರದಕೆರೆ ಗೋಪಿ ಮತ್ತು ಕುಮಾರ್‌ ನಾಪತ್ತೆಯಾಗಿದ್ದಾರೆ.

ಪಟ್ಟಣದ ಠಾಣೆ ಪಿಎಸ್‌ಐ ವಿಶ್ವನಾಥ್‌ ಮತ್ತು ಸಿಬ್ಬಂದಿ ಬುಧವಾರ ರಾತ್ರಿ ಹೆದ್ದಾರಿ ಗಸ್ತಿನಲ್ಲಿದ್ದಾಗ ಅರಸಿಕರೆ ಮಾರ್ಗದಲ್ಲಿರುವ ಕುಪ್ಪಾಳು ಗ್ರಾಮದ ಮೊರಾರ್ಜಿ ವಸತಿ ಶಾಲೆ ಬಳಿ ದುಷ್ಕರ್ಮಿಗಳು ಲಗೇಜು ವಾಹನ ನಿಲ್ಲಿಸಿಕೊಂಡು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ದರೋಡೆಗೆ ಹೊಂಚು ಹಾಕುತ್ತಿದ್ದರು.

ಕೂಡಲೇ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಕಡೂರು ತಾಲೂಕು ಸೂರಾಪುರದಲ್ಲಿ 2 ಎತ್ತು, ಕುಪ್ಪಾಳು ಸಮೀಪದ ಬಾಬಾ ಎಸ್ಟೇಟ್‌ ಬಳಿ 3 ಸಿಂಧಿ ಹಸು, 2 ಕರು, ಬೀರೂರಿನಲ್ಲಿ 2 ಹಸು ಹಾಗೂ ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 1 ಜತೆ ಎತ್ತುಗಳನ್ನು ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ.

ಕಳವು ಮಾಡಿದ ಜಾನುವಾರುಗಳಲ್ಲಿ ಬಂಧಿತ ರಾಜಪ್ಪನ ಮನೆಯಲ್ಲಿ 3 ಸಿಂಧಿ ಹಸು, 2 ನಾಟಿ ಹಸು ಹಾಗೂ 2 ಕರು ಮತ್ತು ಮಂಜುನಾಥ್‌ ಮನೆಯಲ್ಲಿ 1 ಜತೆ ಎತ್ತು ಪೊಲೀಸರಿಗೆ ಪತ್ತೆಯಾಗಿವೆ. ಉಳಿದ ಜಾನುವಾರುಗಳನ್ನು ಆರೋಪಿಗಳು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ಸಿಪಿಐ ಕೆ.ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ವಿಶ್ವನಾಥ್‌, ಸಿಬ್ಬಂದಿ ಅಂಜನಿ, ಕೃಷ್ಣಮೂರ್ತಿ, ಮಲ್ಲಪ್ಪ, ಮಧುಕುಮಾರ್‌, ಚಿದಾನಂದ, ಮಂಜುನಾಥ್‌, ಜೀಪ್‌ ಚಾಲಕ ನವೀನ್‌ ಪ್ರಕರಣ ಭೇದಿಸಿದ್ದಾರೆ. ಆರೋಪಿಗಳಿಂದ 15 ಸಾವಿರ ರೂ. ನಗದು, 2 ಟಾಟಾ ಲಗೇಜ್‌ ಸಾಗಿಸುವ ವಾಹನಗಳು ಹಾಗೂ ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರಿಂದ ಮೇವು ನೀರು

ಜಾನುವಾರುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವವರೆಗೆ ಕಡೂರು ಠಾಣೆಯಲ್ಲಿಯೇ ಅವುಗಳನ್ನು ಒಂದೆಡೆ ಕಟ್ಟಿ ಅವುಗಳಿಗೆ ಮೇವು, ನೀರು ನೀಡುವ ಕೆಲಸವನ್ನು ಪೊಲೀಸರು ನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ