ಆ್ಯಪ್ನಗರ

ಜನೌಷಧ ಕೇಂದ್ರದಲ್ಲಿ ಉಚಿತ ಇಸಿಜಿ

ಪ್ರಧಾನಮಂತ್ರಿ ಜನೌಷಧ ಕೇಂದ್ರದಲ್ಲಿ ಇಸಿಜಿ ಯಂತ್ರ ಇಡಲಾಗಿದ್ದು, ಸಾರ್ವಜನಿಕರು ಇಲ್ಲಿ ಉಚಿತವಾಗಿ ಇಸಿಜಿ ತಪಾಸಣೆ ಮಾಡಿಸಿಕೊಳ್ಳಬಹುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Vijaya Karnataka 29 Nov 2018, 5:00 am
ಚಿಕ್ಕಮಗಳೂರು: ಪ್ರಧಾನಮಂತ್ರಿ ಜನೌಷಧ ಕೇಂದ್ರದಲ್ಲಿ ಇಸಿಜಿ ಯಂತ್ರ ಇಡಲಾಗಿದ್ದು, ಸಾರ್ವಜನಿಕರು ಇಲ್ಲಿ ಉಚಿತವಾಗಿ ಇಸಿಜಿ ತಪಾಸಣೆ ಮಾಡಿಸಿಕೊಳ್ಳಬಹುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
Vijaya Karnataka Web free ecg at janoushadha center
ಜನೌಷಧ ಕೇಂದ್ರದಲ್ಲಿ ಉಚಿತ ಇಸಿಜಿ


ನಗರದ ವಿಜಯಪುರ ರಸ್ತೆಯಲ್ಲಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಕ್ಕೆ ಮಂಗಳೂರಿನ ಕಸ್ತೂರಬಾ ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್‌ ಉಚಿತವಾಗಿ ನೀಡಿರುವ ಇಸಿಜಿ ಯಂತ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಕಾಯಕಲ್ಪ ಹೆಸರಿನಲ್ಲಿ ಉಚಿತವಾಗಿ ಇಸಿಜಿ ತಪಾಸಣೆ ನಡೆಸಲಾಗುತ್ತಿದೆ. ಎದೆನೋವು ಕಾಣಿಸಿಕೊಂಡಾಗ ಇಸಿಜಿ ಮಾಡಿಸಿಕೊಳ್ಳುವುದು ಅಗತ್ಯ. ಆಸ್ಪತ್ರೆಗಳಿಗೆ ತೆರಳಿ ಸರತಿಯಲ್ಲಿ ನಿಂತು ಇಸಿಜಿ ಮಾಡಿಸಿಕೊಳ್ಳುವುದರಿಂದ ಸಾಕಷ್ಟು ಸಮಯ, ಹಣ ಬೇಕಾಗುತ್ತದೆ. ಬಡವರಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಡಾ.ಪದ್ಮನಾಭ ಕಾಮತ್‌ ದಕ್ಷಿಣಕನ್ನಡ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜನೌಷಧ ಕೇಂದ್ರಗಳಿಗೆ ಇಸಿಜಿ ಯಂತ್ರಗಳನ್ನು ಉಚಿತವಾಗಿ ನೀಡಿದ್ದಾರೆ ಎಂದರು.

ಎದೆನೋವು ಕಾಣಿಸಿಕೊಂಡ ಯಾವುದೇ ವ್ಯಕ್ತಿಗೆ ಜನೌಷಧ ಕೇಂದ್ರದಲ್ಲಿ ತಕ್ಷಣ ಉಚಿತವಾಗಿ ಇಸಿಜಿ ಮಾಡಲಾಗುವುದು. ಕಾಯಕಲ್ಪ ಯೋಜನೆಯಲ್ಲಿ ಆ್ಯಪ್‌ ಆರಂಭಿಸಿದ್ದು, ಇದರಲ್ಲಿ 80 ವೈದ್ಯರು ಸೇರಿದ್ದಾರೆ. ಇಸಿಜಿ ವರದಿಯನ್ನು ಈ ಆ್ಯಪ್‌ಗೆ ಹಾಕಿದ ತಕ್ಷಣ ವೈದ್ಯರು ಇದನ್ನು ಪರಿಶೀಲಿಸಿ ಆ ವ್ಯಕ್ತಿ ಯಾವ ಔಷಧ ಪಡೆದುಕೊಳ್ಳಬೇಕು, ಮುಂದೆ ಏನು ಮಾಡಬೇಕು ಎಂಬುದನ್ನು ಆ್ಯಪ್‌ನಲ್ಲಿಯೇ ತಿಳಿಸುತ್ತಾರೆ. ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಇದುವರೆಗೆ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ ಕೊಡಲಾಗಿದೆ. ನಗರದ ಜನೌಷಧ ಕೇಂದ್ರಕ್ಕೆ ಇಂದು ಇಸಿಜಿ ಯಂತ್ರ ನೀಡಲಾಗಿದೆ. ಈ ಕೇಂದ್ರದಲ್ಲಿ ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ ಔಷಧಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜನೌಷಧ ಕೇಂದ್ರಕ್ಕೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚಾಗಿರುವುದರಿಂದ ಕೆಲವು ಔಷಧಗಳ ಕೊರತೆ ಕಂಡುಬರುತ್ತಿದೆ. ಈ ಬಗ್ಗೆ ಈಗಾಗಲೇ ಕೇಂದ್ರ ಸರಕಾರ ಗಮನಹರಿಸಿದ್ದು, ಮುಂದಿನ 2 ತಿಂಗಳಲ್ಲಿ ಎಲ್ಲ ಕೇಂದ್ರಗಳಿಗೆ ಅಗತ್ಯ ಪ್ರಮಾಣದ ಔಷಧಗಳು ದೊರೆಯಲಿವೆ ಎಂದರು.

ನಗರಸಭೆ ಸದಸ್ಯರಾದ ಎಚ್‌.ಡಿ.ತಮ್ಮಯ್ಯ, ರವೀಂದ್ರನಾಥ ಪ್ರಭು, ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ