ಆ್ಯಪ್ನಗರ

ಮತದಾರರಿಗೆ ನೀಡಿದ ಆಶ್ವಾಸನೆ ಈಡೇರಿಸಿ

ಲೋಕಸಭೆ ಚುನಾವಣೆ ನಂತರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನ ಪಡೆಯುವ ಮೂಲಕ ಕಾಂಗ್ರೆಸ್‌ ಪಕ್ಷದ ಬಗ್ಗೆ ಜನರಲ್ಲಿ ಒಲವಿದೆ ಎನ್ನುವುದನ್ನು ಮತದಾರರು ಸಾಬೀತು ಮಾಡಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷ ದ ವೀಕ್ಷ ಕ ಬಿ.ಎಂ.ಸಂದೀಪ್‌ ಹೇಳಿದರು.

Vijaya Karnataka 23 Jun 2019, 5:00 am
ನರಸಿಂಹರಾಜಪುರ : ಲೋಕಸಭೆ ಚುನಾವಣೆ ನಂತರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನ ಪಡೆಯುವ ಮೂಲಕ ಕಾಂಗ್ರೆಸ್‌ ಪಕ್ಷದ ಬಗ್ಗೆ ಜನರಲ್ಲಿ ಒಲವಿದೆ ಎನ್ನುವುದನ್ನು ಮತದಾರರು ಸಾಬೀತು ಮಾಡಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷ ದ ವೀಕ್ಷ ಕ ಬಿ.ಎಂ.ಸಂದೀಪ್‌ ಹೇಳಿದರು.
Vijaya Karnataka Web CKM-22NRP3


ತಾಲೂಕಿನ ಬಿ.ಎಚ್‌.ಕೈಮರದ ನಾರಾಯಣಗುರು ಸಮುದಾಯ ಭವನದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಹಾಗೂ ಪಟ್ಟಣ ಪಂಚಾಯಿತಿಯ ನೂತನ ಸದಸ್ಯರಿಗೆ ಅಭಿನಂದಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್‌ 509, ಬಿಜೆಪಿ 365 ಹಾಗೂ ಜೆಡಿಎಸ್‌ ಪಕ್ಷ 176 ಸ್ಥಾನ ಗಳಿಸಿದೆ. ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 11 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ಶಾಸಕ ಟಿ.ಡಿ.ರಾಜೇಗೌಡ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌ ಅವರ ತಂಡ ಉತ್ತಮ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೂತನ ಪಟ್ಟಣ ಪಂಚಾಯಿತಿ ಸದಸ್ಯರನ್ನು ಅಭಿನಂದಿಸಿದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಜನರು ಹಲವು ನಿರೀಕ್ಷೆ ಇಟ್ಟುಕೊಂಡು ಪಕ್ಷ ಕ್ಕೆ ಮತ ನೀಡಿದ್ದಾರೆ. ಮತದಾರರಿಗೆ ನೀಡಿದ ಆಶ್ವಾಸನೆ ಈಡೇರಿಸಬೇಕಾಗಿದೆ. ಕುಡಿಯುವ ನೀರು, ವೃದ್ದಾಪ್ಯ ವೇತನ, ವಿಧವಾ ವೇತನ, ವಿಶೇಷಚೇತನರ ವೇತನ, ಅನಾರೋಗ್ಯ ಪೀಡಿತರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹಾಯ ಮಾಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಈ ವಾರದಲ್ಲಿ ಕೊಪ್ಪ, ನರಸಿಂಹರಾಜಪುರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದೇವೆ. ನಾಮಿನಿ ಸದಸ್ಯರ ನೇಮಕ, ವಿವಿಧ ಸಮಿತಿಗಳನ್ನು ರಚಿಸಲಾಗುವುದು ಎಂದರು.

ಸಭೆ ಅಧ್ಯಕ್ಷ ತೆ ವಹಿಸಿದ್ದ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌ ಮಾತನಾಡಿ, ನೂತನ ಸದಸ್ಯರು ಚುನಾವಣೆ ಸಂದರ್ಭ ನೀಡಿದ ಆಶ್ವಾಸನೆಯನ್ನು ಈಡೇರಿಸಿ ಪಕ್ಷ ಕ್ಕೆ ಗೌರವ ತರಬೇಕು. ಪಕ್ಷ ದ ಸಂಘಟನೆ ಅತಿ ಮುಖ್ಯ. ಶೀಘ್ರದಲ್ಲೇ ಪಂಚಾಯಿತಿ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ನಡೆಸಲಾಗುವುದು. ಪ್ರತಿ 2ನೇ ಶನಿವಾರ ಶಾಸಕರು ಕಾಂಗ್ರೆಸ್‌ ಪಕ್ಷ ದ ಕಾರ್ಯಕರ್ತರೊಡನೆ ಚರ್ಚೆ ನಡೆಸಲಿದ್ದಾರೆ ಎಂದರು.

ಜಿ.ಪಂ. ಸದಸ್ಯ ಆರ್‌.ಸದಾಶಿವ ಮಾತನಾಡಿದರು. ಸಭೆಯಲ್ಲಿ ಕಾಂಗ್ರೆಸ್‌ ಪಕ್ಷ ದ ಮುಖಂಡರಾದ ಅಂಜುಂ, ವನಮಾಲಮ್ಮ, ಬಿ.ಎಸ್‌.ಸುಬ್ರಮಣ್ಯ, ಇ.ಸಿ.ಜೋಯಿ, ಎಚ್‌.ಬಿ.ರಘುವೀರ್‌, ಬಿ.ವಿ.ಉಪೇಂದ್ರ, ಸಾದಿಕ್‌ ಭಾಷಾ, ವಿನಾಯಕ, ರಾಮಚಂದ್ರ, ಮೀನಾಕ್ಷಿ ಕಾಂತರಾಜ್‌, ಲಲಿತ, ಮೇಘರಾಜ್‌, ಕಿರಣ್‌, ಬೆನ್ನಿ, ಸುಂದರೇಶ್‌ ಉಪಸ್ಥಿತರಿದ್ದರು.

ಇದೇ ಸಂದರ್ಭ ನೂತನ ಪಟ್ಟಣ ಪಂಚಾಯಿತಿ ಸದಸ್ಯರಾದ ಜುಬೇದ, ಪ್ರಶಾಂತ್‌, ಮುನಾವರ್‌ ಪಾಷಾ, ಉಮಾ, ಸೋಜ, ಮುಕುಂದ, ಕುಮಾರಸ್ವಾಮಿ, ಸುರೈಯಾಬಾನು, ವಾಸಿಂ ಹಾಗೂ ಪರಾಜಿತಗೊಂಡ ಅಭ್ಯರ್ಥಿಗಳಾದ ಶೀಲಸುಂದರೇಶ್‌, ಸುಮಿತ್ರ ಅವರನ್ನು ಶಾಸಕ ಟಿ.ಡಿ.ರಾಜೇಗೌಡ ಹಾಗೂ ಕಾಂಗ್ರೆಸ್‌ ಮುಖಂಡರು ಸನ್ಮಾನಿಸಿದರು.

ಎಲ್ದೋಸ್‌ ಸ್ವಾಗತಿಸಿ, ಕೆ.ಎಂ.ಸುಂದರೇಶ್‌ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ