ಆ್ಯಪ್ನಗರ

ಉತ್ತಮ ಕೆಲಸದಿಂದ ಸದಾ ಹೆಸರು

ಮನುಷ್ಯ ಬದುಕಿದ್ದಾಗ ಒಂದಷ್ಟು ಒಳ್ಳೆಯ ಕೆಲಸ ಮಾಡಿದರೆ ಸತ್ತಾಗ ಉಸಿರಿಲ್ಲದಿದ್ದರೂ ಹೆಸರಿರುತ್ತದೆ ಎಂದು ಸಿವಿಲ್‌ ಎಂಜಿನಿಯರ್ಸ್ ಅಸೋಸಿಯೇಷನ್‌ ನೂತನ ಅಧ್ಯಕ್ಷ ಬಿ.ಎನ್‌.ಮಲ್ಲೇಶ್‌ ಹೇಳಿದರು.

Vijaya Karnataka 9 Sep 2019, 5:00 am
ಚಿಕ್ಕಮಗಳೂರು: ಮನುಷ್ಯ ಬದುಕಿದ್ದಾಗ ಒಂದಷ್ಟು ಒಳ್ಳೆಯ ಕೆಲಸ ಮಾಡಿದರೆ ಸತ್ತಾಗ ಉಸಿರಿಲ್ಲದಿದ್ದರೂ ಹೆಸರಿರುತ್ತದೆ ಎಂದು ಸಿವಿಲ್‌ ಎಂಜಿನಿಯರ್ಸ್ ಅಸೋಸಿಯೇಷನ್‌ ನೂತನ ಅಧ್ಯಕ್ಷ ಬಿ.ಎನ್‌.ಮಲ್ಲೇಶ್‌ ಹೇಳಿದರು.
Vijaya Karnataka Web 8SHIVU-P2_35


ನಗರದ ಲಯನ್ಸ್‌ ಸೇವಾ ಭವನದಲ್ಲಿಶನಿವಾರ ಏರ್ಪಡಿಸಿದ್ದ ಚಿಕ್ಕಮಗಳೂರು ಜಿಲ್ಲಾಸಿವಿಲ್‌ ಎಂಜಿನಿಯರ್ಸ್ ಅಸೋಸಿಯೇಷನ್‌ ಸರ್ವಸದಸ್ಯರ ವಿಶೇಷ ಸಾಮಾನ್ಯಸಭೆಯಲ್ಲಿಅವರು ಮಾತನಾಡಿದರು.

ಮನುಷ್ಯ ಹುಟ್ಟಿದಾಗ ಉಸಿರಿರುತ್ತದೆ ಹೆಸರಿರುವುದಿಲ್ಲ. ಒಂದಷ್ಟು ಒಳ್ಳೆಯ ಕೆಲಸ ಮಾಡಿ ಉಳಿಸಿದರೆ ಮಾತ್ರ ಸತ್ತಾಗ ಉಸಿರಿಲ್ಲದಿದ್ದರೂ ಹೆಸರಿರುತ್ತದೆ. ಸಂಘದ ರಥವನ್ನು ಮುನ್ನಡೆಸಲು ಎಲ್ಲಪದಾಧಿಕಾರಿಗಳು, ಸದಸ್ಯರು ಹಾಗೂ ಎಲ್ಲಕುಟುಂಬವರ್ಗ ಕೈಜೋಡಿಸಿದಾಗ ಜಾತ್ರೆ ಕಳೆಗಟ್ಟುತ್ತದೆ ಎಂದ ಅವರು ಸಂಘದ ನೂತನ ಕಟ್ಟಡಕ್ಕೆ ಬೇಕಾದ ಜಲ್ಲಿ, ಮರಳು, ಕಲ್ಲನ್ನು ಉಚಿತವಾಗಿ ಕೊಡುವುದಾಗಿ ಭರವಸೆ ನೀಡಿದರು. 2019-20ನೆಯ ಸಾಲಿನ ನೂತನ ಅಧ್ಯಕ್ಷರಾಗಿ ಬಿ.ಎನ್‌.ಮಲ್ಲೇಶ್‌, ಕಾರ‍್ಯದರ್ಶಿ ಬಿ.ಎಂ.ಪ್ರಕಾಶ್‌ ಮತ್ತು ಖಜಾಂಚಿ ನಂದೀಶ್‌ ತಂಡ ಆಯ್ಕೆಗೊಂಡು ಪ್ರಮಾಣವಚನ ಸ್ವೀಕರಿಸಿತು.

ನಿರ್ಗಮಿತ ಅಧ್ಯಕ್ಷ ಬಿ.ಎಸ್‌.ಹರೀಶ್‌ ಮಾತನಾಡಿ, ವರ್ಷದ ಅವಧಿಯಲ್ಲಿವಿವಿಧ ಪ್ರವಾಸಗಳನ್ನು ಕುಟುಂಬದ ಸದಸ್ಯರೊಂದಿಗೆ ಆಯೋಜಿಸಿದ್ದರಿಂದ ಸಂಘದ ಕಾರ‍್ಯ ಚಟುವಟಿಕೆಗಳಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಮೂಡಿಗೆರೆ ತಾಲೂಕಿನ ನೆರೆಸಂತ್ರಸ್ತರಿಗೆ 1.3ಲಕ್ಷರೂ.ಗಳನ್ನು ನೆರವು, ಪಾಲಿಟೆಕ್ನಿಕ್‌ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಶುದ್ಧಕುಡಿಯುವ ನೀರಿನ ಘಟಕ, ಅರ್ಥಪೂರ್ಣ ಎಂಜಿನಿಯರ್‌ ದಿನಾಚರಣೆ ಸ್ಮರಣೀಯ ಕಾರ‍್ಯಕ್ರಮಗಳಾಗಿತ್ತು ಎಂದರು. ಮಾಜಿ ಅಧ್ಯಕ್ಷ ಎಂ.ಎಸ್‌.ಮಹೇಶ್‌ ಅಭಿನಂದಿಸಿ ಮಾತನಾಡಿದರು. ಕಾರ‍್ಯದರ್ಶಿ ಬಿ.ಕೆ.ಗುರುಮೂರ್ತಿ ವರದಿ ಮಂಡಿಸಿದರು. ಖಜಾಂಚಿ ಜಿ.ಎಸ್‌.ಶಶಿಧರ್‌ ಲೆಕ್ಕಪತ್ರ ಮಂಡಿಸಿದ್ದು, ಮಹಾಸಭೆ ಅನುಮೋದನೆ ನೀಡಿತು. ಎಂಜಿನಿಯರ್‌ ಎಂ.ಎ.ನಾಗೇಂದ್ರ, ಮಾಜಿ ಅಧ್ಯಕ್ಷ ಎನ್‌.ಎಸ್‌.ನಾಗೇಂದ್ರ, ಎಂಜಿನಿಯರ್‌ಗಳಾದ ಲಿಂಗರಾಜು, ಕಾರ‍್ಯದರ್ಶಿ ಬಿ.ಎಂ.ಪ್ರಕಾಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ