ಆ್ಯಪ್ನಗರ

ಸಾವಯವ ಕೃಷಿ ಪದ್ಧತಿಯಿಂದ ಉತ್ತಮ ಇಳುವರಿ

ಸಾವಯವ ಕೃಷಿ ಪದ್ಧತಿಯಿಂದ ಇಳುವರಿ ಕಡಿಮೆ ಎಂಬ ಕಲ್ಪನೆ ತಪ್ಪು. ಭೂಮಿಗೆ ಸಾವಯವ ಗೊಬ್ಬರ ಹಾಕಿ ಕ್ರಮಬದ್ಧವಾಗಿ ಬೆಳೆ ಬೆಳೆದರೆ ನಿರೀಕ್ಷೆಗೂ ಮೀರಿ ಫಸಲು ತೆಗೆಯಬಹುದು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ ಹೇಳಿದರು.

Vijaya Karnataka 12 Jul 2019, 5:00 am
ಚಿಕ್ಕಮಗಳೂರು: ಸಾವಯವ ಕೃಷಿ ಪದ್ಧತಿಯಿಂದ ಇಳುವರಿ ಕಡಿಮೆ ಎಂಬ ಕಲ್ಪನೆ ತಪ್ಪು. ಭೂಮಿಗೆ ಸಾವಯವ ಗೊಬ್ಬರ ಹಾಕಿ ಕ್ರಮಬದ್ಧವಾಗಿ ಬೆಳೆ ಬೆಳೆದರೆ ನಿರೀಕ್ಷೆಗೂ ಮೀರಿ ಫಸಲು ತೆಗೆಯಬಹುದು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ ಹೇಳಿದರು.
Vijaya Karnataka Web CKM-11RUDRAP2


ಕೃಷಿ, ತೋಟಗಾರಕೆ, ಅರಣ್ಯ, ಪಶುಸಂಗೋಪನೆ ಹಾಗೂ ಕಂದಾಯ ಇಲಾಖೆ ಆಶ್ರಯದಲ್ಲಿ ಜಾಗರ ಹೋಬಳಿ ಸಿರವಾಸೆಯ ಬಿ.ಕೆ.ಸುಂದರೇಶ್‌ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಸಾಯನಿಕ ಸುರಿದು ಭೂಮಿಯ ಫಲವತ್ತತೆ ಹಾಳು ಮಾಡಬಾರದು. ಇದರಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಉತ್ತಮ ಪರಿಸರ, ಆರೋಗ್ಯ ಹಾಗೂ ಆಹಾರಕ್ಕಾಗಿ ಇಂದು ಸಾವಯವ ಕೃಷಿ ಪದ್ಧತಿ ಮೊರೆ ಹೋಗಬೇಕಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಾ ಅನಿಲ್‌ ಮಾತನಾಡಿ, ಎಲ್ಲ ಇಲಾಖೆಗಳ ಸವಲತ್ತನ್ನು ಅಧಿಕಾರಿಗಳು ಜನರಿಗೆ ತಲುಪಿಸಬೇಕು. ಕಾಲಕಾಲಕ್ಕೆ ರೈತರಿಗೆ ಸೂಕ್ತ ಸಲಹೆ ಮಾಹಿತಿ ಒದಗಿಸಬೇಕು. ಸಾವಯವ ಕೃಷಿ ಪದ್ಧತಿಯೊಂದಿಗೆ ಸಮಗ್ರ ಕೃಷಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಸಿರವಾಸೆ ಗ್ರಾಮಪಂಚಾಯಿತಿ ಅಧ್ಯಕ್ಷೆ ರೂಪ, ತಾಲೂಕು ಪಂಚಾಯಿತಿ ಸದಸ್ಯ ರಮೇಶ್‌ ಅವರು ಕೃಷಿ ಹಸ್ತಪ್ರತಿ ಬಿಡುಗಡೆ ಮಾಡಿದರು. ಸಾವಯವ ಕೃಷಿಕ ಚಂದ್ರಶೇಖರ ನಾರಣಾಪುರ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಚ್‌.ಕುಮಾರಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್‌ಚವಾಣ್‌, ಪ್ರವೀಣ್‌, ಕಿರಣ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ