ಆ್ಯಪ್ನಗರ

ವೈಭವದ ಅಯ್ಯಪ್ಪಸ್ವಾಮಿ ಮೆರವಣಿಗೆ

ಕಳೆದ 4 ದಿನದಿಂದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ ಶ್ರೀ ಅಯ್ಯಪ್ಪಸ್ವಾಮಿ ಪೂಜಾ ಸಮಿತಿಯು ಬುಧವಾರ ಶ್ರೀ ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿಯನ್ನು ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿತು.

Vijaya Karnataka 3 Jan 2019, 5:00 am
ಚಿಕ್ಕಮಗಳೂರು : ಕಳೆದ 4 ದಿನದಿಂದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ ಶ್ರೀ ಅಯ್ಯಪ್ಪಸ್ವಾಮಿ ಪೂಜಾ ಸಮಿತಿಯು ಬುಧವಾರ ಶ್ರೀ ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿಯನ್ನು ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿತು.
Vijaya Karnataka Web CKM-2rudrap4


ಅಲಂಕೃತ ಸಂಚಾರಿ ರಥದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿಯನ್ನು ಕೂರಿಸಿ ತಾಲಪ್ಪೊಲಿ, ಚಂಡೆ, ನಾದಸ್ವರ ವಾದನ, ಪಾಂಡಿಮೇಳ, ತಾಯಂಬಕ, ಸಿಂಗಾರಿ ಮೇಳ, ಪಂಚವಾದ್ಯ ಮತ್ತಿತರೆ ಸಾಂಸ್ಕೃತಿಕ ತಂಡದೊಂದಿಗೆ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಪೂಜಾ ಸಮಿತಿಯ ಗೌರವ ಅಧ್ಯಕ್ಷ ಎ.ಪಿ.ದಿನೇಶ್‌ಪೊದುವಾಳ್‌ ಅವರು ತೆಂಗಿನಕಾಯಿ ಒಡೆಯುವ ಮೂಲಕ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು.

ಶ್ರೀ ಅಯ್ಯಪ್ಪಸ್ವಾಮಿ ಪೂಜಾ ಸಮಿತಿಯ ಅಧ್ಯಕ್ಷ ನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ ಅಶೋಕ್‌ ಸಚ್ಚ್‌ದೇವ್‌, ಖಜಾಂಚಿ ಸಾರಥಿ ಮಂಜುನಾಥ್‌, ಉಪಾಧ್ಯಕ್ಷ ಜೀವನ್‌.ಕೆ.ಶೆಟ್ಟಿ, ಗೋಪಿ, ಯಶವಂತ್‌, ಕುಮಾರ್‌, ಉಮೇಶ್‌, ವೆಂಕಟೇಶ್‌, ಲಕ್ಷ್ಮೀ ಕಾಂತ್‌, ನಟರಾಜ್‌, ಸತೀಶ್‌, ಚನ್ನಕೇಶವ, ಮನೋಹರ್‌, ಅಣ್ಣಯ್ಯ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ