ಆ್ಯಪ್ನಗರ

ಶೃಂಗೇರಿಯಲ್ಲಿಸಂಭ್ರಮದ ಗೌರಿಗಣೇಶ ಹಬ್ಬ

ಪಟ್ಟಣ ಹಾಗೂ ತಾಲೂಕಿನ ಕಸಬಾ ಮತ್ತು ಕಿಗ್ಗಾ ಹೋಬಳಿಗಳಲ್ಲಿಸ್ವರ್ಣ ಗೌರಿ ಹಬ್ಬ ಹಾಗೂ ಗಣಪತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

Vijaya Karnataka 4 Sep 2019, 5:00 am
ಶೃಂಗೇರಿ: ಪಟ್ಟಣ ಹಾಗೂ ತಾಲೂಕಿನ ಕಸಬಾ ಮತ್ತು ಕಿಗ್ಗಾ ಹೋಬಳಿಗಳಲ್ಲಿಸ್ವರ್ಣ ಗೌರಿ ಹಬ್ಬ ಹಾಗೂ ಗಣಪತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
Vijaya Karnataka Web gowri ganesh celebrations in sringeri
ಶೃಂಗೇರಿಯಲ್ಲಿಸಂಭ್ರಮದ ಗೌರಿಗಣೇಶ ಹಬ್ಬ


ಶ್ರೀ ಮಠದ ಪ್ರವಚನ ಮಂದಿರದಲ್ಲಿನೂರಾರು ಮಹಿಳೆಯರು ಸಾಮೂಹಿಕವಾಗಿ ಸ್ವರ್ಣ ಗೌರಿ ವ್ರತ ಆಚರಿಸಿದರು. ಆನೆಗುಂದ ಶ್ರೀ ವೇಣುಗೋಪಾಲಕೃಷ್ಣ ಸ್ವಾಮಿ, ಕಿಗ್ಗಾ ಋುಷ್ಯಶೃಂಗೇಶ್ವರ ಸ್ವಾಮಿ, ನೆಮ್ಮಾರಿನ ಸರ್ವೇಶ್ವರ ದೇವಸ್ಥಾನ, ಕಾವಡಿ ಉಮಾಮಹೇಶ್ವರ, ದೊಡ್ಡಾನೆ, ಶಿಡ್ಲೆಗಣಪತಿ ದೇವಸ್ಥಾನದಲ್ಲಿವ್ರತವನ್ನು ಸಾಮೂಹಿಕವಾಗಿ ಆಚರಿಸಿದರು.

ಗಣೇಶನ ಹಬ್ಬ: ಮನೆಮನೆ ಹಾಗೂ ಸಾಮೂಹಿಕವಾಗಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಶ್ರದ್ಧಾ ಭಕ್ತಿಯಿಂದ ಪೂಜಿಸಲಾಯಿತು.

ಶ್ರೀ ಮಠದ ಪ್ರವಚನ ಮಂದಿರದಲ್ಲಿಶ್ರೀ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀ ಮಠದ ಗುರುಭವನದಲ್ಲಿಚಾತುರ್ಮಾಸ್ಯ ವ್ರತದಲ್ಲಿರುವ ಜಗದ್ಗುರುಗಳು ರತ್ನಗರ್ಭ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ಗಣೇಶ ಚೌತಿ ಅಂಗವಾಗಿ ಗಣ ಹೋಮ,ಕಲ್ಪೋಕ್ತ ಪೂಜೆ ನೆರವೇರಿಸಿದರು..ಇದೇ ಸಂದರ್ಭ ಶ್ರೀ ಭಾರತೀತೀರ್ಥ ಸ್ವಾಮಿಗಳ ಉಪಸ್ಥಿತಿಯಲ್ಲಿವಿದ್ವಾಂಸರ ಸಂಸ್ಕೃತ ವಾಕ್ಯಾರ್ಥ ಸಭೆ ಆರಂಭಗೊಂಡಿತು.

ಪಪಂ ಎದುರು ಸಾರ್ವಜನಿಕ ಶ್ರೀ ಮಹಾಗಣಪತಿ ಸೇವಾ ಸಮಿತಿಯಿಂದ 60ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ನಡæಯಿತು. 15 ದಿನ ಕಾಲ ನಡೆಯುವ ಉತ್ಸವದಲ್ಲಿಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಇಲ್ಲಿನ ಗಣೇಶ ಮೂರ್ತಿಯನ್ನು ಸ್ಥಳಿಯ ಕಲಾವಿದ ಹರೀಶ್‌ ವಿ.ಡೋಂಗ್ರೆ ರಚಿಸಿದ್ದಾರೆ.

ಪಟ್ಟಣದ ಹೊರವಲಯದ ಕಾಂಚಿನಗರ ಸರಕಾರಿ ಶಾಲೆಯಲ್ಲಿಕಳೆದ 31 ವರ್ಷದಿಂದ ಸಾರ್ವಜನಿಕ ಗಣಪತಿ ಸೇವಾ ಸಮಿತಿಯಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ. ಇಲ್ಲಿನ 8 ಅಡಿ ಎತ್ತರದ ಗಣಪತಿಯನ್ನು ಸ್ಥಳೀಯ ಕಲಾವಿದ ಸಂದೇಶ್‌ ನಿರ್ಮಿಸಿದ್ದಾರೆ.

ಕುಂಚೆಬೈಲಿನಲ್ಲಿರುವ ಗಿಣಕಲ್‌ ಗ್ರಾಮದ ಜ್ಞಾನಜ್ಯೋತಿ ಮಂದಿರದಲ್ಲೂಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಐದು ದಿನ ಕಾರ್ಯಕ್ರಮ ಆಯೋಜಿಸಲಾಗಿದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ