ಆ್ಯಪ್ನಗರ

ಅನುದಾನ ಕಡಿತ: ಅಕಾಡೆಮಿಗಳಿಗೆ ಹೊಡೆತ

ಸರಕಾರ ಇತ್ತೀಚೆಗೆ ಅಕಾಡೆಮಿಗಳಿಗೆ ಅನುದಾನ ಕಡಿತಗೊಳಿಸಿರುವುದಕ್ಕೆ ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

Vijaya Karnataka 1 Jun 2019, 5:00 am
ಅಜ್ಜಂಪುರ : ಸರಕಾರ ಇತ್ತೀಚೆಗೆ ಅಕಾಡೆಮಿಗಳಿಗೆ ಅನುದಾನ ಕಡಿತಗೊಳಿಸಿರುವುದಕ್ಕೆ ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
Vijaya Karnataka Web grant reduction smashing to academies
ಅನುದಾನ ಕಡಿತ: ಅಕಾಡೆಮಿಗಳಿಗೆ ಹೊಡೆತ


ಶ್ರೀಗಳು ಪತ್ರಿಕಾ ಹೇಳಿಕೆ ನೀಡಿ, ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ರಂಗಭೂಮಿಯಲ್ಲಿ ಸೇವೆ ಸಲ್ಲಿಸುವ ವಿವಿಧ ರಂಗ ಸಂಸ್ಥೆಗಳಿಗೆ ಸರಕಾರ ಮಾರ್ಚ್‌ ಅಂತ್ಯದೊಳಗೆ ಹಣ ಬಿಡುಗಡೆ ಮಾಡಬೇಕಾಗಿತ್ತು.ಆದರೆ ಈಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಕೆಲವು ಫೇಕ್‌ ಸಂಸ್ಥೆಗಳಿರುವ ಕಾರಣ ಅನುದಾನದ ಹಣವನ್ನು ವಾಪಾಸ್‌ ಕಳುಹಿಸಿರುವುದಾಗಿ ಈ ಹಿಂದೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ ಅನೇಕ ಸಂಸ್ಥೆಗಳು ಪ್ರಾಮಾಣಿಕತೆಯಿಂದ ರಂಗಸೇವೆಯಲ್ಲಿವೆ ಇಲಾಖೆಗೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಿವೆ. ಜತೆಗೆ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುಮೋದನೆ ಪರಿಗಣಿಸಿಯೇ ಮಂಜೂರಾತಿ ನೀಡುವ ಪದ್ಧತಿ ಇದೆ. ಹೀಗಿರುವಾಗ ಫೇಕ್‌ ಸಂಸ್ಥೆಗಳಿವೆ ಎಂದರೆ ಅದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದೇ ಅರ್ಥವಾಗುತ್ತದೆ. ಹೀಗಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಅಂಥ ಸಂಸ್ಥೆಗಳ ಅನುದಾನ ತಡೆಹಿಡಿದು ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಿ.ಇದಕ್ಕೆ ಯಾರ ಆಕ್ಷೇಪಣೆಯೂ ಇಲ್ಲ. ಅದನ್ನು ಬಿಟ್ಟು ಎಲ್ಲ ಸಂಘಟನೆಗಳ ಅನುದಾನವನ್ನು ಸಾರಾಸಗಟಾಗಿ ತಡೆಹಿಡಿಯುವುದು ಸಂಸ್ಕೃತಿ ಕಟ್ಟುವ ಕಾರ್ಯವಲ್ಲ. ಈ ಮಧ್ಯೆ ಚುನಾವಣೆಯ ನೀತಿಸಂಹಿತೆಯೇ ನೆಪವಾಗಿ ಇಡೀ ಪ್ರಕ್ರಿಯೆಯೇ ಸುಮಾರು ಮೂರು ತಿಂಗಳ ಕಾಲ ನಿಂತು ಹೋಯಿತು. ಚಿಕ್ಕ-ಪುಟ್ಟ ಸಂಸ್ಥೆಗಳು ಎಲ್ಲೆಲ್ಲೋ ಸಾಲ ಮಾಡಿ ರಂಗ ಸೇವೆ ಮಾಡಿವೆ. ಈಗ ಅವರು ಅತ್ತ ಸಾಲ ತೀರಿಸಲೂ ಆಗದೆ ಇತ್ತ ಕಲಾರಾಧನೆಯಲ್ಲೂ ತೊಡಗಿಕೊಳ್ಳದೆ ಕೈಸುಟ್ಟುಕೊಳ್ಳುವ ಸ್ಥಿತಿ ಬಂದಿದೆ. ಹೀಗೇ ಆದರೆ ರಂಗಭೂಮಿ, ಕಲಾಸೇವೆ ಎಂದರೆ ನೈಜ ಕಲಾರಾಧಕರು ದೂರ ಉಳಿಯುವ ಸಾಧ್ಯತೆಯೇ ಹೆಚ್ಚು. ಇದರಿಂದ ಸರಕಾರದ ಮೇಲೆ ಯಾವ ದುಷ್ಪರಿಣಾಮವೂ ಆಗದು. ಆದರೆ ಕನ್ನಡ ಮತ್ತು ಸಂಸ್ಕೃತಿಯ ಮೇಲೆ ಖಂಡಿತಾ ದುಷ್ಪರಿಣಾಮ ಬೀರದೇ ಇರದು. ಈ ಸೂಕ್ಷ ್ಮವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಈ ಕೂಡಲೇ ಹಿಂದಿನಂತೆ ಅನುದಾನ ಬಿಡುಗಡೆ ಮಾಡಬೇಕು.

ಸಾಣೇಹಳ್ಳಿಯ ನಮ್ಮ ಶಿವಕುಮಾರ ಕಲಾಸಂಘವೇ ಪ್ರತಿವರ್ಷ ರಂಗಭೂಮಿಗಾಗಿ ಸುಮಾರು ಒಂದು ಕೋಟಿ ರೂ.ಖರ್ಚು ಮಾಡುತ್ತಿದೆ. ಹೀಗಿರುವಾಗ ಕರ್ನಾಟಕ ನಾಟಕ ಅಕಾಡೆಮಿಯ ಚಟುವಟಿಕೆಗಳನ್ನು ಕೇವಲ 80 ಲಕ್ಷ ಕ್ಕೆ ಸೀಮಿತಗೊಳಿಸಿರುವುದು ರಂಗಭೂಮಿಯ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಯೋಚಿಸಿ ಎಲ್ಲ ತಂಡಗಳಿಗೆ ಮೊದಲಿನಂತೆ ಅನುದಾನ ಬಿಡುಗಡೆ ಮಾಡುವ ಮತ್ತು ಅಕಾಡೆಮಿಯ ಅನುದಾನ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಇತ್ತೀಚೆಗೆ ಅಕಾಡೆಮಿಗಳ ಅನುದಾನದಲ್ಲಿ ಸುಮಾರು ಶೇ. 35ರಷ್ಟು ಕಡಿತಗೊಳಿಸಲಾಗಿದೆ. ಉಳಿದ ಹಣದಲ್ಲಿ ಅರ್ಧದಷ್ಟು ನೌಕರರ ವೇತನಕ್ಕಾಗಿಯೇ ಹೋಗುತ್ತಿದೆಯಂತೆ. ಇನ್ನುಳಿದ ಶೇ. 35ರಷ್ಟು ಹಣದಲ್ಲಿ ಅಕಾಡೆಮಿಗಳು ಕರ್ನಾಟಕದಾದ್ಯಂತ ಕೆಲಸ ಮಾಡುವುದಾದರೂ ಹೇಗೆ? ವಾಸ್ತವವಾಗಿ ಪ್ರತಿವರ್ಷ ಅನುದಾನವನ್ನು ಕನಿಷ್ಟ ಶೇ. 10ರಷ್ಟು ಏರಿಸಬೇಕಿತ್ತು. ಅದನ್ನು ಬಿಟ್ಟು ಹೀಗೆ ಇದ್ದಕ್ಕಿದ್ದ ಹಾಗೆ ಅನುದಾನ ಕಡಿತಗೊಳಿಸುವುದು ಯಾವ ನ್ಯಾಯ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ