ಆ್ಯಪ್ನಗರ

ಪುರಾತತ್ವ ಸಂರಕ್ಷಣಾ ಯೋಜನೆಯಡಿ ದೇವಾಲಯಗಳ ಪುನರುತ್ಥಾನಕ್ಕೆ ಅನುದಾನ

ಐತಿಹಾಸಿಕ ದೇಗುಲಗಳು ಗತಕಾಲದ ವೈಭವಕ್ಕೆ ಮರಳಬೇಕೆಂಬ ನಿಟ್ಟಿನಲ್ಲಿಪುರಾತತ್ವ ಸಂರಕ್ಷಣಾ ಯೋಜನೆಯಡಿ ಪುನರುತ್ಥಾನಕ್ಕೆ ಅನುದಾನ ಒದಗಿಸಲಾಗುವುದು ಎಂದು ಜಿಲ್ಲಾಉಸ್ತುವಾರಿ ಮತ್ತು ಪ್ರವಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

Vijaya Karnataka 7 Jul 2020, 5:00 am
ಕಡೂರು : ಐತಿಹಾಸಿಕ ದೇಗುಲಗಳು ಗತಕಾಲದ ವೈಭವಕ್ಕೆ ಮರಳಬೇಕೆಂಬ ನಿಟ್ಟಿನಲ್ಲಿಪುರಾತತ್ವ ಸಂರಕ್ಷಣಾ ಯೋಜನೆಯಡಿ ಪುನರುತ್ಥಾನಕ್ಕೆ ಅನುದಾನ ಒದಗಿಸಲಾಗುವುದು ಎಂದು ಜಿಲ್ಲಾಉಸ್ತುವಾರಿ ಮತ್ತು ಪ್ರವಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
Vijaya Karnataka Web grants for the resurrection of temples
ಪುರಾತತ್ವ ಸಂರಕ್ಷಣಾ ಯೋಜನೆಯಡಿ ದೇವಾಲಯಗಳ ಪುನರುತ್ಥಾನಕ್ಕೆ ಅನುದಾನ


ತಾಲೂಕಿನ ಮಚ್ಚೇರಿಯ ಐತಿಹಾಸಿಕ ಶ್ರೀ ಕಲ್ಲೇಶ್ವರಸ್ವಾಮಿ ಮತ್ತು ಹಿರೇನಲ್ಲೂರಿನ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಗಳಿಗೆ ಸೋಮವಾರ ಪ್ರವಾಸೋದ್ಯಮ ಅಭಿವೃದ್ದಿ ನಿಟ್ಟಿನಲ್ಲಿಭೇಟಿ ನೀಡಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದೇವಾಲಯಗಳ ಅಭಿವೃದ್ದಿಗೆ ಅನುದಾನ ಎಷ್ಟು ಬೇಕೆಂಬ ಸಂಬಂಧ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ವರದಿ ತಯಾರಿಸಲು ಹಾಗೂ ಈ ಹಿಂದೆ ಈ ದೇಗುಲಗಳಿಗೆ ಭೂಮಿ ಕಾಣಿಕೆ ಮತ್ತು ದತ್ತಿ ನೀಡಿರುವದರ ವಿವರ ಹಾಗೂ ಪ್ರಸ್ತುತ ಭೂಮಿಯ ಸ್ಥಿತಿ ಬಗ್ಗೆಯೂ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪುರಾತತ್ವ ಸ್ಮಾರಕಗಳ ಪುನರುತ್ಥಾನಕ್ಕೆ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್‌ ಜತೆ ಸಮಾಲೋಚನೆ ನಡೆಸಲಾಗಿದೆ. ಟ್ರಸ್ಟ್‌ ಸಹಯೋಗದಲ್ಲಿಈಗಾಗಲೇ ಸಖರಾಯಪಟ್ಟಣ, ಕಳಸಾಪುರ ಮುಂತಾದೆಡೆ ಪ್ರಾಚೀನ ದೇಗುಲಗಳ ಜೀರ್ಣೋದ್ಧಾರ ಕಾರ್ಯ ಕೂಡ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಶಾಸಕ ಬೆಳ್ಳಿಪ್ರಕಾಶ್‌, ತರೀಕೆರೆ ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್‌, ಜಿಲ್ಲಾಪಂಚಾಯಿತಿ ಸದಸ್ಯ ಕೆ.ಆರ್‌.ಮಹೇಶ್‌ಒಡೆಯರ್‌, ಸುನೀತಾಜಗದೀಶ್‌, ಪುರಾತತ್ವ ಇಲಾಖೆಯ ಅಧಿಕಾರಿಗಳು ಇದ್ದರು.

*****************
ಜಿಲ್ಲೆಯಲ್ಲಿಕೊರೊನಾ ನಿಯಂತ್ರಣದಲ್ಲಿದೆ. ಆಸ್ಪತ್ರೆಗಳಲ್ಲಿಸುಮಾರು 600 ಹಾಸಿಗೆಗಳು ಲಭ್ಯವಿದೆ. ಸರಕಾರ ಕೈಚೆಲ್ಲಿಕುಳಿತಿಲ್ಲ. ಸಮರ್ಥವಾಗಿ ಕೊರೊನಾ ನಿಯಂತ್ರಣಕ್ಕೆ ಬೇಕಾದ ಎಲ್ಲಾಕ್ರಮಗಳನ್ನೂ ಕೈಗೊಂಡಿದೆ. ಸರಕಾರದ ಪ್ರಯತ್ನಕ್ಕಿಂತ ಜನರು ತಮ್ಮ ಸ್ವರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕು. ಅಂತರ ಕಾಪಾಡಿಕೊಂಡು ಆರೋಗ್ಯ ಉಳಿಸಿಕೊಳ್ಳಬೇಕು.
-ಸಿ.ಟಿ.ರವಿ, ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ