ಆ್ಯಪ್ನಗರ

ಪೃಥ್ವಿಯನ್ನು ಸ್ವಚ್ಛವಾಗಿ ಹಸ್ತಾಂತರಿಸಿ

ಪರಿಸರ ಕಾಪಾಡುವುದರೊಂದಿಗೆ ಗಿಡ ಮರಗಳನ್ನು ಕಡಿಯದೆ ಉಳಿಸಿ-ಬೆಳೆಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಶ್ರೀದೇವಿ ಗುರುಕುಲದ ಸಂಸ್ಥಾಪಕ ಡಾ.ಜಿ.ದಯಾನಂದಮೂರ್ತಿ ಶಾಸ್ತ್ರಿ ಹೇಳಿದರು.

Vijaya Karnataka 8 Jun 2019, 5:00 am
ಚಿಕ್ಕಮಗಳೂರು : ಪರಿಸರ ಕಾಪಾಡುವುದರೊಂದಿಗೆ ಗಿಡ ಮರಗಳನ್ನು ಕಡಿಯದೆ ಉಳಿಸಿ-ಬೆಳೆಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಶ್ರೀದೇವಿ ಗುರುಕುಲದ ಸಂಸ್ಥಾಪಕ ಡಾ.ಜಿ.ದಯಾನಂದಮೂರ್ತಿ ಶಾಸ್ತ್ರಿ ಹೇಳಿದರು.
Vijaya Karnataka Web CKM-7RUDRAP3


ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಶ್ರೀ ಪಾರ್ವತಿ ಮಹಿಳಾ ಮಂಡಳಿ, ಶ್ರೀ ದೇವಿ ಗುರುಕುಲ ಸಹಯೋಗದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಪರಿಸರ ದಿನ'ವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಾಡನ್ನು ನಾಶ ಮಾಡುವುದರಿಂದ ಬಿಸಿಲಿನ ತಾಪ ಹೆಚ್ಚಾಗಿ ಮಳೆ, ಬೆಳೆ ಇಲ್ಲದೆ ಜನರು ಪರದಾಡುವ ಸಂದರ್ಭ ಬಂದಿದೆ. ನಮ್ಮ ಮುಂದಿನ ಪೀಳಿಗೆಗೆ ಕೊಡುಗೆ ಎಂದರೆ ಪೃಥ್ವಿಯನ್ನು ಸ್ವಚ್ಛವಾಗಿ ಹಸ್ತಾಂತರಿಸುವುದು. ಮಹಿಳೆಯರು ಮತ್ತು ಮಕ್ಕಳಲ್ಲಿ ವಿಶೇಷವಾಗಿ ಪರಿಸರ ಜಾಗೃತಿ ಮೂಡಿಸುವುದರ ಜತೆಗೆ ಗಿಡ, ಮರಗಳ ಪ್ರೀತಿಯನÜು್ನ ಬೆಳೆಸಬೇಕಾಗಿದೆ. ಪ್ರತಿಯೊಬ್ಬರೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಿಜವಾದ ದೇಶಸೇವೆ ಎಂದರು.

ಶ್ರೀಪಾರ್ವತಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಮಿತ್ರಾ ಶಾಸ್ತ್ರಿ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಕಳೆದ ಮೂರು ವರ್ಷದಿಂದ ಪರಿಸರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಭೂಮಿ ತಂಪಾಗಲು ಗಿಡ, ಮರಗಳನ್ನು ಬೆಳೆಸುವುದರೊಂದಿಗೆ ನೀರು ಮತ್ತು ಗಾಳಿಯನ್ನೊಳಗೊಂಡಂತೆ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಕಾಳಜಿ ವಹಿಸುವುದು ಅತಿ ಮುಖ್ಯ ಎಂದರು.

ಕಾರ‍್ಯದರ್ಶಿ ಭವಾನಿ ವಿಜಯಾನಂದ, ಉಪಾಧ್ಯಕ್ಷೆ ಸುಶೀಲಮ್ಮ ಮಾತನಾಡಿದರು. ಪದಾಧಿಕಾರಿಗಳಾದ ಸ್ವಪ್ನಾ ಸ್ವಾಗತಿಸಿ, ಪಾರ್ವತಿ ಬಸವರಾಜ್‌ ವಂದಿಸಿದರು. ಗುರುಕುಲದ ಕಾರ‍್ಯದರ್ಶಿ ವೇದಮೂರ್ತಿ, ಸುಧಾ, ನಂದಿನಿ, ಪೂರ್ಣಿಮಾ, ಚಂಪಾ, ಲೀಲಾವಿಜಯಾ, ರೇಖಾ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ