ಆ್ಯಪ್ನಗರ

ಹಾತೂರು-ಹೊನ್ನೇಕೊಪ್ಪ ಕಾಡಿನಲ್ಲಿ ಬೆಂಕಿ

ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿಗೆ ಸೇರಿದ ಹಾತೂರು,ಹೊನ್ನೇಕೊಪ್ಪ,ಖಂಡುಕ,ಕಾರಬೈಲು,ಕಿಕ್ಕೇರಿ ಕುಣಿಹಡಲು,ಕಂಕಳೆ ಕಾಡಿನಲ್ಲಿ ಸೋಮವಾರ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿ ಮಂಗಳವಾರವೂ ಮುಂದುವರಿದಿತ್ತು.

Vijaya Karnataka 24 Apr 2019, 5:00 am
ನರಸಿಂಹರಾಜಪುರ: ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿಗೆ ಸೇರಿದ ಹಾತೂರು,ಹೊನ್ನೇಕೊಪ್ಪ,ಖಂಡುಕ,ಕಾರಬೈಲು,ಕಿಕ್ಕೇರಿ ಕುಣಿಹಡಲು,ಕಂಕಳೆ ಕಾಡಿನಲ್ಲಿ ಸೋಮವಾರ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿ ಮಂಗಳವಾರವೂ ಮುಂದುವರಿದಿತ್ತು.
Vijaya Karnataka Web CKM-23nrp1


ಸೋಮವಾರ ಮಧ್ಯಾಹ್ನ ಹೊತ್ತಿಗೆ ವಿದ್ಯುತ್‌ ತಂತಿಯಿಂದ ಉಂಟಾದ ಶಾರ್ಟ್‌ ಸಕ್ಯೂಟ್‌ನಿಂದಾಗಿ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿಯುತ್ತಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.ಆದರೆ, ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಬೆಂಕಿಯ ಜ್ವಾಲೆ ಜಾಸ್ತಿಯಾಗಿದೆ.ಈ ಮಧೆæ್ಯ ಒಣಗಿದ ಬಿದಿರಿಗೆ ಹೊತ್ತಿದ ಬೆಂಕಿ ಮತ್ತಷ್ಟು ವಿಸ್ತರಣೆಗೆ ಕಾರಣವಾಗಿದೆ.ಬೆಂಕಿ ನಂದಿಸಲು ನರಸಿಂಹರಾಜಪುರ ಅಗ್ನಿಶ್ಯಾಮಕ ದಳ ಬಂದು ಬೆಂಕಿ ನಂದಿಸಿ ವಾಪಾಸು ಹೋಗಿದ್ದರು.ಆದರೆ, ಸಂಜೆಯ ಹೊತ್ತಿಗೆ ಮತ್ತೆ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಗ್ನಿಶ್ಯಾಮಕದಳದವರು ಬಂದು ಬೆಂಕಿ ನಂದಿಸಿ ವಾಪಾಸು ಹೋಗಿದ್ದರು.

ಮತ್ತೆ ಕಾಣಿಸಿಕೊಂಡ ಬೆಂಕಿ : ಆದರೆ,ಮಧ್ಯಾಹ್ನದ ಹೊತ್ತಿಗೆ ಮತ್ತೆ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಬೆಂಕಿನ ನಂದಿಸಲು ಸಾದ್ಯವಾಗದೆ ಇರುವುದರಿಂದ ಕೊಪ್ಪ ಹಾಗೂ ನರಸಿಂಹರಾಜಪುರಕ್ಕೆ ಸೇರಿದ ಎರಡು ಅಗ್ನಿಶ್ಯಾಮಕ ದಳದವರು ಬಂದು ಕಾರ್ಯಾಚರಣೆ ಮಾಡಿ ಬೆಂಕಿ ನಂದಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ