ಆ್ಯಪ್ನಗರ

ಮಲೆನಾಡಲ್ಲಿಧಾರಾಕಾರ ಮಳೆ

ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳಲ್ಲಿಬುಧವಾರ ಧಾರಾಕಾರ ಮಳೆಯಾಗುತ್ತಿದೆ. ನದಿಗಳಲ್ಲಿನೀರಿನ ಹರಿವು ಏರಿಕೆಯಾಗುತ್ತಿದ್ದು, ಜನರಲ್ಲಿಮತ್ತೆ ಭೀತಿ ಆವರಿಸಿದೆ.

Vijaya Karnataka 5 Sep 2019, 5:00 am
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳಲ್ಲಿಬುಧವಾರ ಧಾರಾಕಾರ ಮಳೆಯಾಗುತ್ತಿದೆ. ನದಿಗಳಲ್ಲಿನೀರಿನ ಹರಿವು ಏರಿಕೆಯಾಗುತ್ತಿದ್ದು, ಜನರಲ್ಲಿಮತ್ತೆ ಭೀತಿ ಆವರಿಸಿದೆ. ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ.
Vijaya Karnataka Web havi rainfall in malenad
ಮಲೆನಾಡಲ್ಲಿಧಾರಾಕಾರ ಮಳೆ


ಬೆಳಗ್ಗೆ ಮತ್ತು ರಾತ್ರಿ ಸಮಯದಲ್ಲಿಭಾರಿ ಮಳೆಯಾಗುತ್ತಿದೆ. ಜಿಲ್ಲಾಡಳಿತ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಸದ್ಯಕ್ಕೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ. ಕಳೆದ ಆಗಸ್ಟ್‌ ತಿಂಗಳಲ್ಲಿಸುರಿದ ಭಾರಿ ಮಳೆ ಚೇತರಿಸಿಕೊಳ್ಳಲು ಆಗದಷ್ಟು ಅನಾಹುತ ಸೃಷ್ಟಿಸಿದ್ದು, ಜನ ಕಣ್ಣೀರಿಡುತ್ತಿದ್ದಾರೆ. ಮಳೆ ಸ್ವಲ್ಪ ಬಿಡುವು ನೀಡುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದ ಮಲೆನಾಡು ಭಾಗದ ಜನ ಮತ್ತೆ ಆರ್ಭಟ ತೋರುತ್ತಿರುವ ಮಳೆಯಿಂದ ಚಿಂತೆಗೀಡಾಗಿದ್ದಾರೆ. ಗುಡ್ಡ ಕುಸಿತದಿಂದ ಜರ್ಝರಿತವಾಗಿರುವ ಬಾಳೂರು ಮತ್ತು ಕಳಸ ಹೋಬಳಿಯ ವಿವಿಧ ಗ್ರಾಮಗಳ ಜನರು ಮಳೆಗೆ ಹೆದರಿ ಸುರಕ್ಷಿತ ಜಾಗಗಳತ್ತ ತೆರಳುತ್ತಿದ್ದಾರೆ. ಜಿಲ್ಲಾಡಳಿತ ತೆರೆದಿದ್ದ 27 ಕಾಳಜಿ ಕೇಂದ್ರಗಳಲ್ಲಿ1 ಕಾಳಜಿ ಕೇಂದ್ರ ಮಾತ್ರ ಚಾಲ್ತಿಯಲ್ಲಿದ್ದು, ಜನರಿಗೆ ಎಲ್ಲಿಹೋಗುವುದು ಎಂಬ ಪ್ರಶ್ನೆ ಎದುರಾಗಿದೆ. ಮಳೆ ನಿರಂತರವಾಗಿ ಮುಂದುವರಿದರೆ ನದಿಗಳಲ್ಲಿಮತ್ತೆ ಪ್ರವಾಹ ಕಾಣಿಸಿಕೊಳ್ಳತೊಡಗಿದೆ. ಮನೆ, ಜಮೀನು ಕಳೆದುಕೊಂಡವರು ಹೊಸ ಬದುಕು ಕಟ್ಟಿಕೊಳ್ಳುವ ಪ್ರಯತ್ನ ನಡೆಸುತ್ತಿರುವಾಗ ಮತ್ತೆ ಮಳೆ ಆರ್ಭಟಿಸುತ್ತಿರುವುದು ಆತಂಕ ಸೃಷ್ಟಿಸಿದೆ.

------------

ಎಲ್ಲಿಎಷ್ಟು ಮಳೆ?

ಮೂಡಿಗೆರೆ ತಾಲೂಕಿನ ಕಸಬಾ ಹೋಬಳಿಯಲ್ಲಿ45ಮಿ.ಮೀ, ಬಣಕಲ್‌-42, ಗೋಣಿಬೀಡು-61, ಕಳಸ-50, ಜಾವಳಿ-30. ಕೊಪ್ಪ-54, ಹರಿಹರಪುರ-58, ಮೇಗುಂದ-31. ಶೃಂಗೇರಿ-36, ಕಿಗ್ಗ-61, ನರಸಿಂಹರಾಜಪುರ-36, ಬಾಳೆಹೊನ್ನೂರು-21. ಚಿಕ್ಕಮಗಳೂರು-8, ಅಂಬಳೆ-3, ಆಲ್ದೂರು-14, ಸಂಗಮೇಶ್ವರಪೇಟೆ-14, ಕಳಸಾಪುರ-5, ಆವತಿ-11, ಜಾಗರ-19, ವಸ್ತಾರೆ-10ಮಿ.ಮೀ ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ