ಆ್ಯಪ್ನಗರ

ಆಲ್ದೂರು ಸುತ್ತಮುತ್ತ ಭಾರೀ ಮಳೆ, ಧರೆಗುರುಳಿದ ಮರ

ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದು ಆಲ್ದೂರು ಸುತ್ತ ಮುತ್ತ ಮಂಗಳವಾರ ರಾತ್ರಿಯಿಂದ ಉತ್ತಮ ಮಳೆಯಾಗುತ್ತಿದೆ.

Vijaya Karnataka 13 Jun 2019, 5:00 am
ಆಲ್ದೂರು : ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದು ಆಲ್ದೂರು ಸುತ್ತ ಮುತ್ತ ಮಂಗಳವಾರ ರಾತ್ರಿಯಿಂದ ಉತ್ತಮ ಮಳೆಯಾಗುತ್ತಿದೆ.
Vijaya Karnataka Web heavy rain dense tree around aldoorur
ಆಲ್ದೂರು ಸುತ್ತಮುತ್ತ ಭಾರೀ ಮಳೆ, ಧರೆಗುರುಳಿದ ಮರ


ಸಮೀಪದ ಕಣತಿ ಗ್ರಾಮದ ಬಳಿ ಬಾರಿ ಗಾತ್ರದ ಮರವೊಂದು ಬುಧವಾರ ಬೆಳಗ್ಗೆ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಬಾಳೆಹೊನ್ನೂರು - ಚಿಕ್ಕಮಗಳೂರು ರಸ್ತೆಯಲ್ಲಿ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ ಜಾಂ ಉಂಟಾಗಿತ್ತು. ಸಂಸದ ತೇಜಸ್ವಿ ಸೂರ್ಯ ಅವರು ಬೇಲೂರು ಪ್ಲಾಂಟರ್ಸ್‌ ಕ್ಲಬ್‌ನಲ್ಲಿ ಬುಧವಾರ ನಡೆದ ಕಾಫಿ ಹಾಗೂ ಹಾಗೂ ಕಾಳು ಮೆಣಸಿನ ಸಮಸ್ಯೆ ಬಗ್ಗೆ ಬೆಳೆಗಾರರ ಜತೆಗಿನ ಸಂವಾದಕ್ಕೆ ಶೃಂಗೇರಿಯಿಂದ ತೆರಳುವ ಮಾರ್ಗ ಮಧ್ಯೆ ಕಣತಿ ಸಮೀಪ ಮರ ಬಿದ್ದಿದ್ದರ ಪರಿಣಾಮ ಟ್ರಾಫಿಕ್‌ ಜಾಂನಲ್ಲಿ ಸಿಲುಕಿದರು. ನಂತರ ತಾವೇ ಸ್ಥಳದಲ್ಲಿ ನಿಂತು ಮರವನ್ನು ತೆರವು ಮಾಡಿಸಿದರು. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮರವನ್ನು ಕತ್ತರಿಸಿ ತೆರವು ಮಾಡಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.ಬುಧವಾರ ದಿನಪೂರ್ತಿ ಮಳೆಯಾಗಿದ್ದು ಮಳೆಯ ವಾತಾವರಣ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ