ಆ್ಯಪ್ನಗರ

ಚಿಕ್ಕಮಗಳೂರಿನಲ್ಲಿ ಮುಂಗಾರು ಮಳೆ ಚುರುಕು

ತಾಲೂಕಾದ್ಯಂತ ಮುಂಗಾರು ಮಳೆ ಚುರುಕಾಗಿದ್ದು, ಬುಧವಾರ ಪುನರ್ವಸು ಅರ್ಭಟ ಹೆಚ್ಚಾಗಿದೆ. ಕಳೆದ ನಾಲ್ಕು ದಿನದಿಂದ ಮಳೆ ಕುಂಠಿತವಾಗಿದ್ದ ಮಳೆ ಮತ್ತೆ ರಂಗುಪಡೆದಿದೆ.

Vijaya Karnataka Web 16 Jul 2020, 9:28 am
ಶೃಂಗೇರಿ: ತಾಲೂಕಾದ್ಯಂತ ಮುಂಗಾರು ಮಳೆ ಚುರುಕಾಗಿದ್ದು, ಬುಧವಾರ ಪುನರ್ವಸು ಅರ್ಭಟ ಹೆಚ್ಚಾಗಿದೆ. ಕಳೆದ ನಾಲ್ಕು ದಿನದಿಂದ ಮಳೆ ಕುಂಠಿತವಾಗಿದ್ದ ಮಳೆ ಮತ್ತೆ ರಂಗುಪಡೆದಿದೆ. ಬೆಳಗ್ಗೆಯಿಂದ ಜಡಿ ಮಳೆಯಾಗುತ್ತಿದ್ದು, ಮಧ್ಯಾಹ್ನದ ನಂತರ ಒಂದೆರಡು ಬಾರಿ ರಭಸವಾಗಿ ಸುರಿದಿದೆ. ಸತತ ಮಳೆಯಿಂದ ಜನಜೀವನಕ್ಕೆ ಅಲ್ಪ ಮಟ್ಟಿನ ತೊಂದರೆಯುಂಟಾಗಿತ್ತು. ತುಂಗಾ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ.
Vijaya Karnataka Web ಸಾಂದರ್ಭಿಕ


ಕೃಷಿ ಚಟುವಟಿಕೆ ಎಂದಿನಂತೆ ಇದ್ದರೂ, ಅಡಕೆ ತೋಟಕ್ಕೆ ಬೋರ್ಡೋ ಸಿಂಪಡಣೆ ಸಾಧ್ಯವಾಗಲಿಲ್ಲ. ರೈತರು ಎರಡನೇ ಅವಧಿಯ ಬೋರ್ಡೋ ಸಿಂಪಡಣೆಗೆ ಮುಂದಾಗಿದ್ದಾರೆ. ಭತ್ತದ ಬಿತ್ತನೆ ಕಾರ್ಯವೂ ಚುರುಕಾಗಿದ್ದು, ಜುಲೈ ಅಂತ್ಯದ ವೇಳೆಗೆ ನಾಟಿ ಕಾರ್ಯ ಆರಂಭವಾಗುತ್ತದೆ.

ಈಗಾಗಲೇ ಶೇ.80ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. ಹೈಬ್ರೀಡ್‌ ತಳಿ ಬಿತ್ತನೆ ಮಾಡಲು ಇನ್ನೂ ಅವಕಾಶವಿದೆ. ಯಾಂತ್ರೀಕೃತ, ಸಾಂಪ್ರದಾಯಿಕ ನಾಟಿ ಕಾರ್ಯ ಆರಂಭವಾಗಿದೆ.

ಕೃಷಿಯತ್ತ ಒಲವು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಿವಿಧ ಉದ್ಯೋಗಕ್ಕೆ ತೆರಳಿದ್ದ ಯುವಕ, ಯುವತಿಯರು ಇದೀಗ ಮನೆಗೆ ಮರಳಿದ್ದು, ನಾಟಿ ಮಾಡದೇ ಇದ್ದ ಭತ್ತದ ಗದ್ದೆ ಸಾಗುವಳಿ ಮಾಡಲು ಮುಂದಾಗಿದ್ದಾರೆ. ಹೊನ್ನವಳ್ಳಿ ಗ್ರಾಮದಲ್ಲಿ ಗುಂಪು ರೈತರು ಒಟ್ಟಾಗಿ ಭತ್ತದ ಸಾಗುವಳಿ ಮಾಡಲು 30 ಎಕರೆ ಜಾಗ ಸಿದ್ಧಪಡಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ