ಆ್ಯಪ್ನಗರ

ಗುರುವಿಗೆ ಗೌರವಿಸಿದರೆ ಉಜ್ವಲ ಭವಿಷ್ಯ

ಗುರುವನ್ನು ಗೌರವಿಸುವುದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಜಿಲ್ಲಾ ಪæäಲೀಸ್‌ ಹೆಚ್ಚುವರಿ ಮುಖ್ಯಾಧಿಕಾರಿ ಶೃತಿ ಹೇಳಿದರು.

Vijaya Karnataka 22 Jul 2019, 5:00 am
ಚಿಕ್ಕಮಗಳೂರು : ಗುರುವನ್ನು ಗೌರವಿಸುವುದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಜಿಲ್ಲಾ ಪæäಲೀಸ್‌ ಹೆಚ್ಚುವರಿ ಮುಖ್ಯಾಧಿಕಾರಿ ಶೃತಿ ಹೇಳಿದರು.
Vijaya Karnataka Web CKM-21shivu-p2


ನಗರದ ಶ್ರೀ ಭುವನೇಂದ್ರ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ 'ಗುರು ಪೂರ್ಣಿಮಾ' ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಅತ್ಯಂತ ಮಹತ್ವದ ಸ್ಥಾನ ನೀಡಲಾಗಿದೆ. ಗುರುವನ್ನು ಸದಾ ಗೌರವಿಸುವ, ಆಧರಿಸುವ ಮನೋಭಾವ ಬೆಳೆಸಿಕೊಂಡರೆ ಬದುಕು ಉಜ್ವಲವಾಗುತ್ತದೆ. ಶಾಲಾದಿನಗಳಲ್ಲಿ ಗುರುವಿನ ಮಾತಿಗೆ ವ್ಯತಿರಿಕ್ತವಾಗಿ ನಡೆದವರಿಗೆ ಏಳಿಗೆ ಇಲ್ಲ ಎಂದು ಹೇಳಿದ ಶೃತಿ, ಗುರುಬಲವೇ ದೊಡ್ಡಬಲವಾಗಿ ನಮ್ಮನ್ನು ಕಾಪಾಡುತ್ತದೆ ಎಂದರು.

ಗ್ರಹಬಲಕ್ಕಿಂತ ಗುರುಬಲ ಮೇಲು ಎಂದು ಹಿರಿಯರು ಹೇಳಿದ್ದಾರೆ. ಗುರುವಿನ ಗುಲಾಮನಾಗುವ ತನಕ ದೊರಕದಯ್ಯ ಮುಕುತಿ ಎಂಬ ಮಾತೂ ಇದೆ. ವಿನಮ್ರತೆ ಗುರುವಿನ ಸ್ವತ್ತಾದರೆ, ಅಹಂಕಾರ ಅಜ್ಞಾನಿಯ ಸ್ವತ್ತು ಎಂದ ಅವರು, ಗುರಿ ಮುಂದೆ ಗುರು ಹಿಂದೆ ಇದ್ದಾಗ ಜೀವನದಲ್ಲಿ ಏನಾದರೂ ಸಾಧಿಸಬಹುದು ಎಂದರು.

ಶಾಲಾಮಕ್ಕಳು ಎಲ್ಲ ಶಿಕ್ಷ ಕರಿಗೆ ಗುರುವಂದನೆ ಸಲ್ಲಿಸಿ ಹೂವಿನಗಿಡ ಉಡುಗೊರೆ ನೀಡಿ ಆಶೀರ್ವಾದ ಪಡೆದರು. ಇದೇ ಸಂದರ್ಭ ನಿವೃತ್ತ ಶಿಕ್ಷ ಕಿ ಜಯಾತಿಲಕಂ ಅವರನ್ನು ಶಾಲೆಯಿಂದ ಸನ್ಮಾನಿಸಲಾಯಿತು.

ಶ್ರೀ ಭುವನೇಂದ್ರ ವಿದ್ಯಾಸಂಸ್ಥೆ ಉಪಾಧ್ಯಕ್ಷ ಬಿ.ಎಚ್‌.ನರೇಂದ್ರಪೈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಲಾಗಿದೆ. ಆದಿಗುರು ವ್ಯಾಸರ ಸ್ಮರಣೆಗಾಗಿ ದೇಶಾದ್ಯಂತ 'ಗುರುಪೂರ್ಣಿಮೆ' ಆಚರಿಸಿ ಗುರುಗಳಿಗೆ ಗೌರವಸಲ್ಲಿಸುವ ಪದ್ಧತಿ ಅನೂಚಾನವಾಗಿ ನಡೆದು ಬಂದಿದೆ ಎಂದರು.

ಎಸ್‌ಬಿವಿಎಸ್‌ ವಿಶ್ವಸ್ಥ ದೇವದಾಸ ಹೆಗ್ಡೆ ಮಾತನಾಡಿ, ಗುರು, ಹಿರಿಯರನ್ನು ಗೌರವಿಸುವುದರಿಂದ ನಮ್ಮ ಸಂಸ್ಕೃತಿಯನ್ನು ಗೌರವಿಸಿದಂತಾಗುವುದು ಎಂದರು.

ವಿದ್ಯಾರ್ಥಿಗಳಾದ ಅಂಕಿತಾ ಮತ್ತು ಮೋಕ್ಷಾ ಮಾತನಾಡಿದರು. ಪ್ರಾಂಶುಪಾಲ ಕೆ.ಪಿ.ದೇವರಾಜ್‌ ಸ್ವಾಗತಿಸಿ, ಸಂಯೋಜಕಿ ಕೌಸರಿಬೇಗಂ ವಂದಿಸಿದರು. ಪ್ರೌಢಶಾಲೆ ಸಂಯೋಜಕಿ ಶೈಲಜಾ ಪ್ರಾಸ್ತಾವಿಸಿ, ಮಮತಾ ಪ್ರಾರ್ಥಿಸಿದರು. ನಿಶಾದ್‌ಅಂಜಮ್‌ ನಿರೂಪಿಸಿದರು.

ಇದೇ ಸಂದರ್ಭ ವಿದ್ಯಾರ್ಥಿ ಸಂಘವನ್ನು ಎಎಸ್ಪಿ ಶೃತಿ ಉದ್ಘಾಟಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ