ಆ್ಯಪ್ನಗರ

ಮಾನವ ಜನ್ಮ ಸದುಪಯೋಗವಾಗಲಿ

ಮಲೆನಾಡು ಭಾಗದ ಜನರು ದೇವರು ಮತ್ತು ದೈವ ಭಕ್ತಿಗೆ ಹೆಚ್ಚಿನ ಒಲವು ತೋರುವವರಾಗಿದ್ದು, ಗುರುಗಳನ್ನೂ ದೇವರಂತೆ ಭಕ್ತಿ ಗೌರವಗಳಿಂದ ಕಾಣುವ ಮನಸ್ಸನ್ನು ಹೊಂದಿದ್ದಾರೆ ಎಂದು ಹುಣಸಘಟ್ಟ ಶ್ರೀ ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Vijaya Karnataka 24 Apr 2019, 5:00 am
ತರೀಕೆರೆ ಗ್ರಾಮಾಂತರ: ಮಲೆನಾಡು ಭಾಗದ ಜನರು ದೇವರು ಮತ್ತು ದೈವ ಭಕ್ತಿಗೆ ಹೆಚ್ಚಿನ ಒಲವು ತೋರುವವರಾಗಿದ್ದು, ಗುರುಗಳನ್ನೂ ದೇವರಂತೆ ಭಕ್ತಿ ಗೌರವಗಳಿಂದ ಕಾಣುವ ಮನಸ್ಸನ್ನು ಹೊಂದಿದ್ದಾರೆ ಎಂದು ಹುಣಸಘಟ್ಟ ಶ್ರೀ ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Vijaya Karnataka Web CKM-23sid1


ಲಿಂಗದಹಳ್ಳಿ ಹೋಬಳಿಯ ರೋಪ್‌ಲೈನ್‌ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಪಚ್ಚಮ್ಮ ಕರುಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ಸೋಮವಾರ ಕಳಸಾರೋಹಣ ನೆರವೇರಿಸಿ ನಂತರ ನಡೆದ ಧಾರ್ಮಿಕ ಸಭೆ ಉದ್ದೇಶಿಸಿ ಮಾತನಾಡಿದರು.

ಮಾನವ ಜನ್ಮದಲ್ಲಿ ಹುಟ್ಟಿಬರಲು ಅನೇಕ ಜನ್ಮಾಂತರಗಳನ್ನೇ ಕಳೆಯಬೇಕಿದ್ದು, ಈ ಜನ್ಮದಲ್ಲಿ ಪ್ರಾಣಿ, ಪಕ್ಷಿ, ಪ್ರಕೃತಿ ಸೇರಿದಂತೆ ಮಾನವ ಮಾನವನನ್ನು ಗೌರವಿಸುವುದನ್ನು ಕಲಿಯಬೇಕಿದೆ ಎಂದರು.

ಮುಖಂಡ ಕೆ.ಎಂ.ಶಶಿಧರ್‌ ಮಾತನಾಡಿ, ತಾವು ಕಳೆದ ಕೆಲ ತಿಂಗಳುಗಳಿಂದ ರೋಪ್‌ಲೈನ್‌ ಗ್ರಾಮದ ಶ್ರೀ ಅಯ್ಯಪ್ಪಸ್ವಾಮಿ ಮತ್ತು ಶ್ರೀ ಪಚ್ಚಮ್ಮ ಕರುಮಾರಿಯಮ್ಮ ದೇವಿಯವರ ದೇವಾಲಯಗಳ ಕಳಸಾರೋಹಣ ಕಾರ್ಯಕ್ರಮಗಳನ್ನು ಗುರುಗಳ ಸಾನಿಧ್ಯದಲ್ಲಿ ನೆರವೇರಿಸಲಾಗಿದೆ. ನಾವೆಲ್ಲರೂ ಶ್ರೀಗಳ ಮಾರ್ಗದರ್ಶನದಲ್ಲಿ ಮುನ್ನಡೆಯೋಣ ಎಂದು ಹೇಳಿದರು.

ಗ್ರಾಮದ ಮುಖಂಡ ಮನ್ನಾರ್‌ ಧಾರ್ಮಿಕ ಸಮಾರಂಭದ ಅಧ್ಯಕ್ಷ ತೆ ವಹಿಸಿದ್ದರು. ಮುಖಂಡರಾದ ರಾಧಾಕೃಷ್ಣ, ಪಿ.ಮಂಜುನಾಥ್‌, ಕೆ.ಎಂ.ಶಶಿಧರ್‌, ರಾಮುಕುಟ್ಟಿ, ತಾಂಡವರಾಯ, ಸೇರಿದಂತೆ ರೋಪ್‌ಲೈನ್‌, ವರ್ತೆಗುಂಡಿ, ತಣಿಗೇಬೈಲು ಮತ್ತಿತರ ಗ್ರಾಮಗಳ ಭಕ್ತರು ಹಾಜರಿದ್ದು ದೇವಿಯ ಕೃಪೆಗೆ ಪಾತ್ರರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ