ಆ್ಯಪ್ನಗರ

ವಿವೇಕ, ಧರ್ಮಪ್ರಜ್ಞೆಯಿಂದ ಮಾನವ ವಿಭಿನ್ನ

ಹಸಿವು, ತೃಷೆ, ಕಾಮನೆ, ನೋವು ಇವೆಲ್ಲವೂ ಪ್ರಾಣಿ ಸಹಜ ಗುಣಗಳಾದರೂ, ತನ್ನಲ್ಲಿರುವ ವಿವೇಕ ಮತ್ತು ಧರ್ಮಪ್ರಜ್ಞೆಯ ಕಾರಣದಿಂದ ಮನುಷ್ಯ ಸಕಲ ಜೀವರಾಶಿಗಳಿಗಿಂತ ವಿಭಿನ್ನವಾಗಿದ್ದಾನೆ ಎಂದು ಸಾಹಿತಿ ಚಟ್ನಹಳ್ಳಿ ಮಹೇಶ್‌ ತಿಳಿಸಿದರು.

Vijaya Karnataka 21 Feb 2019, 5:00 am
ಸಖರಾಯಪಟ್ಟಣ: ಹಸಿವು, ತೃಷೆ, ಕಾಮನೆ, ನೋವು ಇವೆಲ್ಲವೂ ಪ್ರಾಣಿ ಸಹಜ ಗುಣಗಳಾದರೂ, ತನ್ನಲ್ಲಿರುವ ವಿವೇಕ ಮತ್ತು ಧರ್ಮಪ್ರಜ್ಞೆಯ ಕಾರಣದಿಂದ ಮನುಷ್ಯ ಸಕಲ ಜೀವರಾಶಿಗಳಿಗಿಂತ ವಿಭಿನ್ನವಾಗಿದ್ದಾನೆ ಎಂದು ಸಾಹಿತಿ ಚಟ್ನಹಳ್ಳಿ ಮಹೇಶ್‌ ತಿಳಿಸಿದರು.
Vijaya Karnataka Web CKM-20onkar1


ಪಟ್ಟಣ ಸಮೀಪದ ಸಿಂದಿಗೆರೆಯ ಶ್ರೀ ಕರಡಿಗವಿ ಮಠದಲ್ಲಿ ಸೋಮವಾರ ನಡೆದ ಲಿಂಗೈಕ್ಯ ಅಜ್ಜಯ್ಯ ಶ್ರೀ ಹಾಗೂ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಯವರು ಪುಣ್ಯಾರಾಧನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳ ಇತಿಹಾಸ ಸಂಸ್ಕೃತಿ, ಪರಂಪರೆ ಹೊಂದಿರುವ ನಮ್ಮ ನೆಲದ ಜೀವದಾತುವೇ ಸಾಧು ಸಂತರ, ಋುಷಿ-ಮುನಿಗಳ ತ್ಯಾಗ ಮತ್ತು ತಪ ಶಕ್ತಿಯ ಫಲ. ಮಾನವೀಯ ಮೌಲ್ಯಗಳನ್ನು ಉಳಿಸಿ, ಬೆಳೆಸುತ್ತಿರುವ ಮಠ-ಮಂದಿರಗಳÜ ಕಾರ್ಯಕ್ಕೆ ಎಲ್ಲರೂ ಋುಣಿಯಾಗಿÃಬೇÜಕು. ಕೋಟಿ ಕೋಟಿ ಭಕ್ತರಿಗೆ ಅನ್ನ ಮತ್ತು ಜ್ಞಾನ ದಾಸೊಹವನ್ನು ಕರುಣಿಸಿದ ಸಿದ್ಧಗಂಗಾ ಶ್ರೀಗಳು ಈ ನಾಡು ಕಂಡ ನಡೆ ಮತ್ತು ನುಡಿ ದೇವರು ಎಂದರು.

ಶಾಸಕ ಸಿ ಟಿ ರವಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ನೋವಿನ ಬದುಕಿನಲ್ಲಿ ಬೆಳಕು ತೋರುವ ದೈವಿಕ ಶಕ್ತಿ ಗುರು ಪರಂಪರೆಗೆ ಇದ್ದು, ಗುರು ತೋರಿದ ಮಾರ್ಗದಲ್ಲಿ ನಡೆದಾಗ ಮಾತ್ರ ಬದುಕು ಸಾರ್ಥಕ. ಅದೇ ರೀತಿ ಗುರು-ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಮನೆಯೂ ಮತ್ತು ಮನವೂ ಶಾಂತವಾಗಿರುತ್ತದೆ ಎಂದರು.

ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ ಮಾತಣಾಡಿ, ಹರ ಮುನಿದರೆ ಗುರುಕಾಯ್ವನು ಎಂಬ ವಾಣಿಯಂತೆ, ಮಾನವರ ತಪ್ಪನ್ನು ತಿದ್ದಿ ತೀಡಿ, ಈ ಲೋಕದ ನೆಮ್ಮದಿಗೆ ಸೇವೆ ಸಲ್ಲಿಸುತ್ತಿರುವ ಆಧ್ಯಾತ್ಮಿಕ ಗುರು ಪರಂಪರೆಯೊಂದಿಗಿರುವುದು ನಮ್ಮೆಲ್ಲರ ಭಾಗ್ಯ ಎಂದರು.

ಕರಡಿ ಗವಿ ಮಠದ ಶಂಕರಾ®ಂದ ಸ್ವಾಮೀಜಿ ಮಾತನಾಡಿದರು.

ಈ ಸಂದರ್ಭ ಜಿ.ಪಂ. ಸದಸ್ಯರಾದ ಬೆಳವಾಡಿ ರವೀಂದ್ರ, ವಿಜಯಕುಮಾರ್‌, ಮಾಜಿ ಜಿ.ಪಂ. ಅಧ್ಯಕ್ಷ ಕಲ್ಮರುಡಪ್ಪ, ನಿರಂಜನ್‌, ತಾ.ಪಂ.ಅಧ್ಯಕ್ಷ ನೆಟ್ಟಿಕೆರೆಹಳ್ಳಿ ಜಯಣ್ಣ, ಸದಸ್ಯ ಈಶ್ವರಳ್ಳಿ ಮಹೇಶ್‌, ಕೆರೆಗೋಡಿ ಶ್ರೀಗಳು, ಕೊಡ್ಲಿ ಪೇಟೆ, ತೆರೆನೂರು , ಮಾಡಾಳು, ಸಂಕ್ಲಾಪುರ ಶ್ರೀಗಳು ಹಾಜರಿದ್ದರು. ಚಿಕ್ಕದೇವನೂರು ರವಿ ಸ್ವಾಗತಿಸಿ , ಪರಮೇಶ್‌ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ