ಆ್ಯಪ್ನಗರ

ಎಲ್ಲ ಧರ್ಮಗಳ ಸತ್ಯ ತಿಳಿದರೆ ಬದುಕಿಗೆ ಶಾಂತಿ

ನಂಬಿಕೆಗಳ ಮೇಲೆ ನಂಬಿಕೆ ಇಟ್ಟಿರುವ, ಸಂಸ್ಕೃತಿ, ಪರಂಪರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಪಾರವಾದ ಶ್ರದ್ಧೆ ಹೊಂದಿರುವ ದೇಶ ನಮ್ಮದು ಎಂದು ಮಾಜಿ ಶಾಸಕ ಡಿ.ಎನ್‌.ಜೀವರಾಜ್‌ ಹೇಳಿದರು.

Vijaya Karnataka 27 Dec 2018, 5:00 am
ಬಾಳೆಹೊನ್ನೂರು :ನಂಬಿಕೆಗಳ ಮೇಲೆ ನಂಬಿಕೆ ಇಟ್ಟಿರುವ, ಸಂಸ್ಕೃತಿ, ಪರಂಪರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಪಾರವಾದ ಶ್ರದ್ಧೆ ಹೊಂದಿರುವ ದೇಶ ನಮ್ಮದು ಎಂದು ಮಾಜಿ ಶಾಸಕ ಡಿ.ಎನ್‌.ಜೀವರಾಜ್‌ ಹೇಳಿದರು.
Vijaya Karnataka Web CKM-26bhr1


ಅವರು ಬಿ.ಕಣಬೂರು ಗ್ರಾ.ಪಂ. ವ್ಯಾಪ್ತಿಯ ಅಯ್ಯಪ್ಪನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಮಂಡಲ ಪೂಜೆ, ದೀಪೋತ್ಸವ, ಅನ್ನದಾನ, ಶ್ರೀ ಅಯ್ಯಪ್ಪಸ್ವಾಮಿ ಭವ್ಯ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಸಂಸ್ಕಾರ ಹೊಂದುವ ಮೂಲಕ ಧರ್ಮವನ್ನು ಕಾಪಾಡಬೇಕು. ಧರ್ಮವನ್ನು ನಾವು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ. ಏಲ್ಲ ಧರ್ಮಗಳಲ್ಲಿರುವ ಪರಮ ಸತ್ಯವನ್ನು ತಿಳಿದು ಸಹಬಾಳ್ವೆಯಿಂದ ಹೆಜ್ಜೆ ಇಟ್ಟಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಲ್ಮಕ್ಕಿ ಉಮೇಶ್‌ ಮಾತನಾಡಿ, ಶ್ರೀ ಅಯ್ಯಪ್ಪ ಮಾಲಾಧಾರಿಗಳು ಕಠಿಣ ವೃತಾಚರಣೆ ಮಾಡಿ ಶಬರಿಮಲೆ ಯಾತ್ರೆ ಕೈಗೊಂಡು ತಮ್ಮ ಜೀವನದಲ್ಲಿ ಯಶಸ್ಸು ಕಾಣಲು ಈ ಮಹೋತ್ಸವ ಸಹಕಾರಿಯಾಗಿದೆ ಎಂದರು.

ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಕೆ.ಕೆ.ವೆಂಕಟೇಶ್‌ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಜಿ.ಪಂ.ಸದಸ್ಯೆ ಚಂದ್ರಮ್ಮ, ಭಾಸ್ಕರ್‌ ಗುರುಸ್ವಾಮಿ, ಪ್ರಣಸ್ವಿ ಪ್ರಭಾಕರ್‌, ಎ.ಕೆ.ಪಿ.ಕೃಷ್ಣಪುದುವಾಳ್‌, ವಿಶ್ವನಾಥ್‌, ಆಣ್ಣಪ್ಪ, ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಪ್ರಮೋದ್‌ ಹೆಗ್ಡೆ, ಬಿ.ಕಣಬೂರು ಗ್ರಾ.ಪಂ.ಮಾಜಿ ಅದ್ಯಕ್ಷ ಕೆ.ಟಿ.ಗೋವಿಂದೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಹೇರೂರಿನ ಸೀತಮ್ಮ ಚಂದ್ರಯ್ಯಹೆಗ್ಡೆ, ಹಾಗೂ ಮೆಣಸುಕುಡಿಗೆಯ ಶ್ರೀಲಕ್ಷ್ಮಿ ಶ್ರೀನಿವಾಸಗೌಡ ಅವರನ್ನು ಗೌರವಿಸಲಾಯಿತು. ಸಭೆಯ ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.

ಗಣೇಶ್‌ ಸ್ವಾಮಿ ಮತ್ತು ತಂಡದವರು ಪ್ರಾರ್ಥಿಸಿ, ಹಿರಿಯಣ್ಣ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ