ಆ್ಯಪ್ನಗರ

ಗ್ಯಾಸ್‌ ಸಿಲಿಂಡರ್‌ ದರ ಹೆಚ್ಚು ಪಡೆದರೆ ಕ್ರಮ

ಕೇಂದ್ರ ಸರಕಾರ ನಿಗದಿಪಡಿಸಿರುವ ಗ್ಯಾಸ್‌ ಸಿಲಿಂಡರ್‌ ದರಕ್ಕಿಂತ ಅಧಿಕ ಹಣ ಪಡೆದರೆ ಅಂತಹ ಏಜೆನ್ಸಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Vijaya Karnataka 28 May 2019, 5:00 am
ಚಿಕ್ಕಮಗಳೂರು: ಕೇಂದ್ರ ಸರಕಾರ ನಿಗದಿಪಡಿಸಿರುವ ಗ್ಯಾಸ್‌ ಸಿಲಿಂಡರ್‌ ದರಕ್ಕಿಂತ ಅಧಿಕ ಹಣ ಪಡೆದರೆ ಅಂತಹ ಏಜೆನ್ಸಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Vijaya Karnataka Web if the gas cylinder rate is high then action will be taken
ಗ್ಯಾಸ್‌ ಸಿಲಿಂಡರ್‌ ದರ ಹೆಚ್ಚು ಪಡೆದರೆ ಕ್ರಮ


ಅಡುಗೆ ಅನಿಲ ವಿತರಕರು ಗ್ಯಾಸ್‌ ಸಂಪರ್ಕ ನೀಡುವಾಗ ಅಳವಡಿಕೆಯ ವೆಚ್ಚ ಮತ್ತು ರಿಫೀಲ್‌ ಗ್ಯಾಸ್‌ ಸಿಲಿಂಡರ್‌ ನೀಡುವಾಗ ಸಾಗಣೆ ವೆಚ್ಚದ ಹೆಸರಿನಲ್ಲಿ ಗ್ರಾಹಕರಿಂದ ಹೆಚ್ಚು ಹಣ ಪಡೆದು ಶೋಷಣೆ ಮಾಡುತ್ತಿರುವ ಬಗ್ಗೆ ಅನೇಕ ದೂರುಗಳು ಬರುತ್ತಿವೆ.

ಅನಿಲ ವಿತರಕರು ಗ್ಯಾಸ್‌ ಸಂಪರ್ಕ ನೀಡಲು, ರಿಫೀಲ್‌ ಸಿಲಿಂಡರ್‌ ಸರಬರಾಜು ಮಾಡಲು ಸಾಗಣೆ ವೆಚ್ಚವೆಂದು ಸರಕಾರ ನಿಗದಿಪಡಿಸಿದ ದರಕ್ಕಿಂತ ಗ್ರಾಹಕರಿಂದ ಹೆಚ್ಚಿನ ಹಣ ಪಡೆಯುವುದು ಲಿಕ್ವಿಪೈಡ್‌ ಆಫ್‌ ಪೆಟ್ರೋಲಿಯಂ ಗ್ಯಾಸ್‌(ರೆಗ್ಯೂಲೇಷನ್‌ ಆಫ್‌ ಸಪ್ಲೈಸ್‌ ಅಂಡ್‌ಡಿಸ್ಟ್ರೀಬ್ಯೂಷನ್‌) ಆರ್ಡರ್‌ 2000ರ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಯಾವುದೇ ಗ್ಯಾಸ್‌ ಏಜೆನ್ಸಿಯವರು ಗ್ರಾಹಕರಿಂದ ಹೆಚ್ಚಿನ ಹಣ ಪಡೆಯದೆ ನಿಗದಿಪಡಿಸಿದ ದರಕ್ಕೆ ಗ್ಯಾಸ್‌ ಸರಬರಾಜು ಮಾಡಬೇಕು. ತಪ್ಪಿದಲ್ಲಿ ಅಂತಹ ಗ್ಯಾಸ್‌ ಏಜೆನ್ಸಿಗಳ ವಿರುದ್ಧ ಪ್ರಕರಣ ದಾಖಲು ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ