ಆ್ಯಪ್ನಗರ

ಗಿಡಮರಗಳಿದ್ದರೆ ನೆಮ್ಮದಿ ಬದುಕು

ನಾವು ನೆಮ್ಮದಿಯ ಬದುಕು ನಡೆಸಬೇಕಾದರೆ ಗಿಡ ಮರಗಳು ನಮ್ಮೊಂದಿಗೆ ಇರಬೇಕು ಎಂದು ರೋಟರಿ ಕ್ಲಬ್‌ ಅಧ್ಯಕ್ಷ ಡಾ.ನಿರಂಜನಕುಮಾರ್‌ ಹೇಳಿದರು.

Vijaya Karnataka 29 Jul 2019, 5:00 am
ಶೃಂಗೇರಿ : ನಾವು ನೆಮ್ಮದಿಯ ಬದುಕು ನಡೆಸಬೇಕಾದರೆ ಗಿಡ ಮರಗಳು ನಮ್ಮೊಂದಿಗೆ ಇರಬೇಕು ಎಂದು ರೋಟರಿ ಕ್ಲಬ್‌ ಅಧ್ಯಕ್ಷ ಡಾ.ನಿರಂಜನಕುಮಾರ್‌ ಹೇಳಿದರು.
Vijaya Karnataka Web CKM-28SRI1


ಪಟ್ಟಣದ ಗಾಂಧಿ ಮೈದಾನದಲ್ಲಿ ಭಾನುವಾರ ರೋಟರಿ ಕ್ಲಬ್‌ ಏರ್ಪಡಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.

ಭೂಮಿ ಮೇಲಿರುವ ಎಲ್ಲಾ ಜೀವಿಗಳಿಗೂ ವೃಕ್ಷ ಗಳು ಅವಿಭಾಜ್ಯ ಅಂಗವಾಗಿದೆ. ಸ್ವಚ್ಛ ಶೃಂಗೇರಿ, ಹಸಿರು ಶೃಂಗೇರಿ ರೋಟರಿಯ ಧ್ಯೇಯವಾಗಿದೆ. ಗಿಡ ನೆಟ್ಟು ಪೋಷಿಸಿ, ಹಸಿರು ಕ್ರಾಂತಿಗೆ ಸ್ಥಳೀಯ ರೋಟರಿ ಹಿಂದಿನಿಂದಲೂ ಅಮೂಲ್ಯ ಕೊಡುಗೆ ನೀಡಿದೆ. ಇದೊಂದು ನಿರಂತರ ಕಾರ್ಯಕ್ರಮವಾಗಿದ್ದು, ಮರದಿಂದ ಪಕ್ಷಿ ಸಂಕುಲಗಳಿಗೆ ಆಶ್ರಯ, ಕಾಡು ಪ್ರಾಣಿಗಳಿಗೆ ಹಣ್ಣು ದೊರಕುತ್ತದೆ. ಗಾಂಧಿ ಮೈದಾನದಲ್ಲಿ 15 ವರ್ಷದ ಹಿಂದೆ ಒಂದು ಎಕರೆ ಜಾಗದಲ್ಲಿ ನಿರ್ಮಿಸಿದ ರೋಟರಿ ವನ ಇದೀಗ ನೂರಾರು ಜನರಿಗೆ ನೆರಳು ನೀಡುತ್ತಿದೆ. ವಾಹನಗಳು ಮರದಡಿ ಆಶ್ರಯ ಪಡೆಯುತ್ತಿದ್ದು, ಇದರ ಅಭಿವೃದ್ಧಿಗೆ ಪ.ಪಂ. ಸಹಕಾರ ನೀಡಿದೆ ಎಂದರು.

ರೋಟರಿ ಕ್ಲಬ್‌ ನಾಗೇಶ್‌ ಕಾಮತ್‌ ಮಾತನಾಡಿ, ರೋಟರಿ ಜಿಲ್ಲೆ 3182ರಿಂದ ನೀಡುತ್ತಿರುವ ಬೀಜದುಂಡೆಯನ್ನು ಸಹ ತಾಲೂಕಿನ ವಿವಿಧ ಭಾಗದಲ್ಲಿ ಹಾಕಲಾಗುತ್ತಿದೆ. ಹಸಿರು ನಮ್ಮ ಉಸಿರಾಗಿದ್ದು, ಸ್ವಚ್ಛ ಶೃಂಗೇರಿಗೆ ನಾವೆಲ್ಲರೂ ಕೈಜೊಡಿಸಬೇಕು ಎಂದರು.

ರೋಟರಿ ಕ್ಲಬ್‌ ಸದಸ್ಯರಾದ ಡಾ.ವೀರಪ್ಪಗೌಡ, ಪ್ರಜ್ಞಾ ಇಂಜಿತ್‌ಕುಮಾರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ