ಆ್ಯಪ್ನಗರ

ಅಕ್ರಮ ಆಸ್ತಿ :ಎಸಿಬಿ ಪರಿಶೀಲನೆ

ಮಂಗಳೂರಿನ ಸರಕಾರಿ ಶಿಕ್ಷ ಕರ ಮಹಾವಿದ್ಯಾಲಯದಲ್ಲಿ ಪ್ರವಾಚಕರಾಗಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣದ ಡಿ.ಮಂಜುನಾಥಯ್ಯ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ಮಾಹಿತಿ ಆದರಿಸಿ ಎಸಿಬಿ ಅಧಿಕಾರಿಗಳು ಬೀರೂರಿನ ತಮ್ಮನ ನಿವಾಸಕ್ಕೆ ದಾಳಿನಡೆಸಿ ದಾಖಲಾತಿಗಳ ಪರಿಶೀಲನೆ ನಡೆಸಿದರು.

Vijaya Karnataka 29 Dec 2018, 5:00 am
ಬೀರೂರು :ಮಂಗಳೂರಿನ ಸರಕಾರಿ ಶಿಕ್ಷ ಕರ ಮಹಾವಿದ್ಯಾಲಯದಲ್ಲಿ ಪ್ರವಾಚಕರಾಗಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣದ ಡಿ.ಮಂಜುನಾಥಯ್ಯ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ಮಾಹಿತಿ ಆದರಿಸಿ ಎಸಿಬಿ ಅಧಿಕಾರಿಗಳು ಬೀರೂರಿನ ತಮ್ಮನ ನಿವಾಸಕ್ಕೆ ದಾಳಿನಡೆಸಿ ದಾಖಲಾತಿಗಳ ಪರಿಶೀಲನೆ ನಡೆಸಿದರು.
Vijaya Karnataka Web CKM-28BRR1


ಪಟ್ಟಣದ ಅಜ್ಜಂಪುರ ರಸ್ತೆಯಲ್ಲಿನ ರಾಮಬನಶಂಕರಿ ಬಡಾವಣೆಯ ನಿವಾಸಕ್ಕೆ ಶುಕ್ರವಾರ ಬೆಳ್ಳಂಬೆಳಿಗ್ಗೆ ಆಗಮಿಸಿದ 10ಕ್ಕೂ ಹೆಚ್ಚಿನ ಅಧಿಕಾರಿಗಳ ತಂಡ ಡಿ.ಮಂಜುನಾಥಯ್ಯ ಅವರ ಆಸ್ತಿಯ ಮಾಹಿತಿ ಕಲೆಹಾಕಿದ್ದಾರೆ.ಅಲ್ಲದೇ ಏಕಕಾಲದಲ್ಲಿ ಮಂಗಳೂರಿನ ಫ್ಲಾಟ್‌, ಕಚೇರಿ ಹಾಗೂ ಉಡುಪಿಯ ಮನೆಯ ಮೇಲೆ ಸಹ ದಾಳಿ ನಡೆಸಿದ್ದಾರೆ.

ಪಟ್ಟಣದ ಡಿ.ಮಂಜುನಾಥಯ್ಯ ಮನೆಯ ಮೇಲೆ ದಾಳಿ ನಡೆಸಿದ ಡಿವೈಎಸ್‌ಪಿ ನಾಗೇಶ್‌ಶೆಟ್ಟಿ ಹಾಗೂ ಉಡುಪಿ ಎಸಿಬಿ ಇನ್ಸ್‌ಪೆಕ್ಟರ್‌ ಜಯರಾಮೇಗೌಡ ನೇತೃತ್ವದ ತಂಡದಿಂದ ದಾಖಲೆಗಳ ಪರಿಶೀಲನೆ ನಡೆದಿದೆ. ಡಿ.ಮಂಜುನಾಥಯ್ಯ ಈ ಹಿಂದೆ ಸಾಗರದಲ್ಲಿ ಕ್ಷೇತ್ರ ಶಿಕ್ಷ ಣಾಧಿಕಾರಿಯಾಗಿ, ಉಡುಪಿಯಲ್ಲಿ ಎರಡುವರೆ ವರ್ಷಗಳ ಕಾಲ ಮುನ್ಸಿಪಲ್‌ ಕಮೀಷನರ್‌ ಮತ್ತು ಅರ್ಬನ್‌ ಡೆವæಲಪ್‌ಮೆಂಟ್‌ ಕಮಿಷನರ್‌ ಆಗಿ ಸಹ ಕಾರ್ಯನಿರ್ವಹಿಸಿದ್ದರು. ಮಂಗಳೂರು ಎಸಿಬಿ ಎಸ್ಪಿ ನೀಡಿರುವ ಮಾಹಿತಿಯಂತೆ ಮಣಿಪಾಲದಲ್ಲಿ ಎರಡು ಖಾಲಿ ನಿವೇಶನ, ಒಂದು ಮನೆ,ಎರಡು ಪ್ಲಾಟ್‌,ಎರಡು ಕಾರು,ಎರಡು ಬೈಕ್‌, ಬ್ಯಾಂಕಿನಲ್ಲಿ 10.5ಲಕ್ಷ ಡಿಪಾಸಿಟ್‌, ಮನೆಯಲ್ಲಿ 1.5ಲಕ್ಷ ನಗದು ಹಾಗೂ 443ಗ್ರಾಂ ಚಿನ್ನ ಮತ್ತು 1ಕೆಜಿ ಬೆಳ್ಳಿ ದೊರೆತಿದೆ ಆದರೆ ಬೀರೂರಿನ ತಮ್ಮನ ನಿವಾಸದಲ್ಲಿ ತನಿಖೆಗೆ ಬೇಕಾದ ಯಾವುದೇ ದಾಖಲೆ ದೊರೆತಿಲ್ಲ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ