ಆ್ಯಪ್ನಗರ

‘ಪೌಷ್ಟಿಕ ಆಹಾರ ಜಾಗೃತಿ ಹೆಚ್ಚಬೇಕು’

ಆಹಾರ ಪದಾರ್ಥಗಳಲ್ಲಿರಾಸಾಯನಿಕ ಬಳಕೆ ವಿರುದ್ಧ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಇಲ್ಲಿನ ಶಾಂತಿನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಗುರುವಾರ ಸ್ವತಃ ತಯಾರಿಸಿ ಪ್ರದರ್ಶಿಸಿದ ಪೌಷ್ಟಿಕ ಆಹಾರಗಳು ಸಾರ್ವಜನಿಕರ ಗಮನ ಸೆಳೆದವು.

Vijaya Karnataka 3 Jan 2020, 5:00 am
ಚಿಕ್ಕಮಗಳೂರು: ಆಹಾರ ಪದಾರ್ಥಗಳಲ್ಲಿರಾಸಾಯನಿಕ ಬಳಕೆ ವಿರುದ್ಧ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಇಲ್ಲಿನ ಶಾಂತಿನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಗುರುವಾರ ಸ್ವತಃ ತಯಾರಿಸಿ ಪ್ರದರ್ಶಿಸಿದ ಪೌಷ್ಟಿಕ ಆಹಾರಗಳು ಸಾರ್ವಜನಿಕರ ಗಮನ ಸೆಳೆದವು.
Vijaya Karnataka Web increase nutritional awareness
‘ಪೌಷ್ಟಿಕ ಆಹಾರ ಜಾಗೃತಿ ಹೆಚ್ಚಬೇಕು’


ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳು ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳನ್ನು ಬಳಸಿ ಪೌಷ್ಟಿಕಾಂಶಯುಕ್ತ ಆಹಾರ ತಯಾರಿಸಿ ಪ್ರದರ್ಶಿಸುವುದರ ಜತೆಗೆ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಬಳಕೆಯ ಅಗತ್ಯವನ್ನು ಸಾರ್ವಜನಿಕರಿಗೆ ವಿವರಿಸಿದರು.

ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಸುಕುಮಾರಿ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಬಳಕೆ ಬಗ್ಗೆ ಗ್ರಾಮೀಣ ಜನರಲ್ಲಿಅರಿವು ಮೂಡಿಸುವ ಉದ್ದೇಶದಿಂದ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.

ಮಲ್ಲಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚೇತನಾ, ಗ್ರಾಮೀಣ ಜನರಲ್ಲಿಪೌಷ್ಟಿಕಾಂಶಯುಕ್ತ ಆಹಾರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಪ್ರದರ್ಶನಗಳನ್ನು ಹಳ್ಳಿಗಳಲ್ಲಿಹೆಚ್ಚು ಆಯೋಜಿಸಬೇಕು ಎಂದು ಸಲಹೆ ಮಾಡಿದರು.

=============
ಬರ್ಫಿ, ಹಲ್ವಾ, ಜ್ಯೂಸ್‌...
ತಯಾರಿಸಿ ಪ್ರದರ್ಶಿಸಿದ ನುಗ್ಗೆಸೊಪ್ಪಿನ ಬರ್ಫಿ, ಬಾಳೆಹಣ್ಣಿನ ಹಲ್ವಾ, ಗೋಧಿಹಿಟ್ಟಿನ ಬರ್ಫಿ, ಆಲೂಗೆಡ್ಡೆಯಿಂದ ತಯಾರಿಸಲಾದ ಪರೋಟ, ಬೀಟ್‌ರೂಟ್‌ ಹಲ್ವಾ, ಅಗಸೇ ಸೊಪ್ಪಿನ ಪತ್ರೊಡೆ, ಶೇಂಗಾಬೀಜದಿಂದ ತಯಾರಿಸಲಾದ ಹಾಲು, ಮೂಲಂಗಿಯ ರಾಯಿತ, ಹೆಸರುಬೇಳೆ ಜ್ಯೂಸ್‌, ಹೆಸರುಕಾಳಿನ ಉಂಡೆ, ಬೀಟ್‌ರೂಟ್‌ ಚಪಾತಿ ಸೇರಿದಂತೆ ಪ್ರದರ್ಶನದಲ್ಲಿದ್ದ ಹಲವು ಆಹಾರ ಪದಾರ್ಥಗಳು ನೋಡುಗರ ಬಾಯಲ್ಲಿನೀರೂರಿಸಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ