ಆ್ಯಪ್ನಗರ

ಭಾರತೀಯರು ರಾಷ್ಟ್ರ ರಕ್ಷಣೆಗೆ ಸದಾ ಸಜ್ಜು

ರಕ್ತ ದಾನ ಮಾಡುವ ಮೂಲಕ ಮತ್ತೊಬ್ಬ ವ್ಯಕ್ತಿಯ ಜೀವಕ್ಕೆ ಹೊಸ ಚೈತನ್ಯ ತುಂಬುವ ಮಹತ್ವದ ಕಾರ್ಯ ಮಾಡಿದಂತಾಗುತ್ತದೆ. ನೀವು ಮಾಡುವ ರಕ್ತ ದಾನದಿಂದ ಅತ ಮತ್ತೊಮ್ಮೆ ಆರೋಗ್ಯವಂತನಾಗಿ ಜೀವಿಸುವ ಅವಕಾಶ ವಾಗಲಿದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು.

Vijaya Karnataka 20 Mar 2019, 5:00 am
ಬಾಳೆಹೊನ್ನೂರು: ರಕ್ತ ದಾನ ಮಾಡುವ ಮೂಲಕ ಮತ್ತೊಬ್ಬ ವ್ಯಕ್ತಿಯ ಜೀವಕ್ಕೆ ಹೊಸ ಚೈತನ್ಯ ತುಂಬುವ ಮಹತ್ವದ ಕಾರ್ಯ ಮಾಡಿದಂತಾಗುತ್ತದೆ. ನೀವು ಮಾಡುವ ರಕ್ತ ದಾನದಿಂದ ಅತ ಮತ್ತೊಮ್ಮೆ ಆರೋಗ್ಯವಂತನಾಗಿ ಜೀವಿಸುವ ಅವಕಾಶ ವಾಗಲಿದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಹೇಳಿದರು.
Vijaya Karnataka Web CKM-19bhr5


ಅವರು ಮಂಗಳವಾರ ಪಟ್ಟಣದ ಶ್ರೀ ರಂಭಾಪುರಿ ಪೀಠದಲ್ಲಿ ಜರುಗುತ್ತಿರುವ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಅಂಗವಾಗಿ ಜಗದ್ಗುರು ರೇಣುಕಾಚಾರ್ಯ ಕೃಪಾ ಪೋಷಿತ ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಸೇವಾದೀಪ ಟ್ರಸ್ಟ್‌, ಸ್ವಿಸ್‌ ಲ್ಯಾಂಡ್‌ ಆಪ್ಟಿಕಲ್ಸ್‌ ಮತ್ತು ಚಿಕ್ಕಮಗಳೂರಿನ ಹೊಲಿ ಕ್ರಾಸ್‌ ಆಸ್ಪತ್ರೆ ಸಹಯೋಗದಲ್ಲಿ ವೀರ ಸೈನಿಕರಿಗೆ ನಮನ ಕಾರ್ಯಕ್ರಮದ ಪ್ರಯುಕ್ತ ರಕ್ತದಾನ ಶಿಬಿರ, ಕಣ್ಣಿನ ಉಚಿತ ತಪಾಸಣೆ, ಚಿಕಿತ್ಸಾ ಶಿಬಿರದ ಉದ್ಘಾಟಿಸಿ, ಶ್ರೀ ರಂಭಾಪುರಿ ಪೀಠದ ಜಾತ್ರಾ ಮಹೋತ್ಸವದ 'ವಿಜಯ ಕರ್ನಾಟಕ' ವಿಷೇಶ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ರಾಷ್ಟ್ರ ರಕ್ಷ ಣೆಯಲ್ಲಿ ಭಾರತೀಯರು ಸದಾ ಸಿದ್ಧ, ಸೇನೆಯೊಂದಿಗೆ ಸಹಕರಿಸಲು ಸದಾ ಬದ್ಧರಾಗಿದ್ದಾರೆ. ರಾಷ್ಟ್ರ ರಕ್ಷ ಣೆಯಲ್ಲಿ ತಮ್ಮ ಜೀವದ ಹಂಗು ತೊರೆದು ತಮ್ಮನ್ನು ತಾವು ತೊಡಗಿಸಿಕೊಳ್ಳುವ ವೀರ ಸೈನಿಕರಿಗಾಗಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಇದೇ ರೀತಿ ಎಲ್ಲ ಯುವ ಜನತೆಯಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರ ಭಕ್ತಿ ಬೆಳೆಯಬೇಕೆಂದರು.

ಕಾರ್ಯಕ್ರಮದಲ್ಲಿ ಶ್ರೀ ರಂಭಾಪುರಿ ಪೀಠದ ಜಾತ್ರಾ ಮಹೋತ್ಸವದ 'ವಿಜಯ ಕರ್ನಾಟಕ ವಿಷೇಶ ಸಂಚಿಕೆಯನ್ನು ಬಿಡುಗಡೆಮಾಡಿ ಭಕ್ತರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ದಾನಿಗಳಾದ ಬೆಂಗಳೂರಿನ ಶಿವಾನಂದಯ್ಯ, ಚಂದ್ರಶೇಖರ್‌, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಗಿರೀಶ್‌, ಸುನಿಲ್‌ ರಾಜ್‌ಭಂಡಾರಿ, ಬಿ.ಸಿ.ಸಂತೋಷ್‌ಕುಮಾರ್‌, ಪುಟ್ನಂಜ, ಹೆಮಲತಾ, ಶಶಿಕಲಾ, ಮಾಲತಿ, ಮಹೇಶಾಚಾರ್‌, ನಾಗರಾಜ್‌ ಎಲಿಗಾರ್‌, ಮಾಗೋಡು ರವಿಗೌಡ, ಲಿಯೋ ಡಿಸೋಜಾ, ಜಗದೀಶ್‌, ಇಲಿಯಾಸ್‌ ಮುಜಾಹೀದ್‌, ಚನ್ನವೀರಯ್ಯ ಚಿಗರೀಮಠ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ