ಆ್ಯಪ್ನಗರ

ಸಂತ್ರಸ್ತರಿಗೆ ನಿಗದಿತ ಪರಿಹಾರ ನೀಡಲು ಸೂಚನೆ

ಜಿಲ್ಲೆಯಲ್ಲಿ ಅತೀವ್ಟೃಯಿಂದ ಆಗಿರುವ ಹಾನಿಯನ್ನು ಅಂದಾಜು ಮಾಡಿ ನಿಗÜದಿತ ಪ್ರಮಾಣದ ಪರಿಹಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್‌ಚಾವ್ಲ ಅಧಿಕಾರಿಗಳಿಗೆ ಸೂಚಿಸಿದರು.

Vijaya Karnataka 17 Aug 2019, 10:13 pm
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅತೀವ್ಟೃಯಿಂದ ಆಗಿರುವ ಹಾನಿಯನ್ನು ಅಂದಾಜು ಮಾಡಿ ನಿಗÜದಿತ ಪ್ರಮಾಣದ ಪರಿಹಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್‌ಚಾವ್ಲ ಅಧಿಕಾರಿಗಳಿಗೆ ಸೂಚಿಸಿದರು.
Vijaya Karnataka Web CKM-16SHIVU-P7


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ ಭಾಗಶಃ ಹಾಗೂ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿರುವ ಮನೆಗಳನ್ನು ಸಮೀಕ್ಷೆಮಾಡಿ ಸರಕಾರ ನಿಗದಿಪಡಿಸಿರುವ ಪರಿಹಾರ ನೀಡಬೇಕು. ಮೂಡಿಗೆರೆ, ಕೊಪ್ಪ, ಎನ್‌.ಆರ್‌.ಪುರ. ಶೃಂಗೇರಿ ತಾಲೂಕುಗಳನ್ನು ರಾಜ್ಯ ಸರಕಾರ ಅತೀವೃಷ್ಟಿ ಪೀಡಿತ ಪ್ರದೇಶ ಎಂದು ಘೋಷಿಸಿದ್ದು, ಚಿಕ್ಕಮಗಳೂರು ತಾಲೂಕನ್ನು ಸಹ ಅತೀವೃಷ್ಟಿ ಪ್ರದೇಶ ಎಂದು ಘೋಷಿಸಬೇಕು ಎಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಆಲೇಖಾನ್‌ ಹೊರಟ್ಟಿ, ಮಧುಗುಂಡಿ ಹಾಗೂ ಮಲೇಮನೆ ಗ್ರಾಮಸ್ಥರು ತಮ್ಮ ಜಮೀನು ಮತ್ತು ಜಾಗವನ್ನು ತೆಗೆದುಕೊಂಡು ಬೇರೆ ಕಡೆ ಜಾಗ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದಾರೆ ಎಂದರು.

ಡಿಸಿ ಡಾ.ಬಗಾದಿ ಗೌತಮ್‌ ಮಾಹಿತಿ ನೀಡಿ ಜಿಲ್ಲೆಯಲ್ಲಿಅಧಿಕ ಮಳೆಯಿಂದ 9 ಜನ ಮೃತಪಟ್ಟಿದ್ದು, 26 ಗಂಜಿ ಕೇಂದ್ರ ತೆರೆಯಲಾಗಿದೆ. ಮೂಡಿಗೆರೆ ತಾಲೂಕಿನಲ್ಲಿ 1332, ಎನ್‌.ಆರ್‌.ಪುರದಲ್ಲಿ 120, ಚಿಕ್ಕಮಗಳೂರು ತಾಲೂಕಿನಲ್ಲಿ 179 ಒಟ್ಟು 1631 ಮಂದಿ ಬಾಧಿತರಿದ್ದು, ಇವರಿಗೆ ಬಟ್ಟೆ, ಪಾತ್ರೆ ಮತ್ತಿತರೆ ಸಾಮಾಗ್ರಿ ಖರೀದಿಗಾಗಿ ಈವರೆಗೆ 33.17 ಲಕ್ಷ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಧಿಕ ಮಳೆಯಿಂದ ಧರೆಗುರುಳಿರುವ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿ, ಹೊಸ ಕಂಬ ಅಳವಡಿಸಿ ವಿದ್ಯುತ್‌ ಸಂಪರ್ಕಕಲ್ಪಿಸುವ ವ್ಯವಸ್ಥೆಯನ್ನು ತುರ್ತಾಗಿ ಮಾಡಬೇಕು ಎಂದು ಮೆಸ್ಕಾಂ ಎಂಜಿನಿಯರಿಗೆ ಸೂಚಿಸಿದರು.

ಮಳೆಯಿಂದ 1,454 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಮನೆ ನೆಲಸಮವಾಗಿರುವವರಿಗೆ ಮನೆಕಟ್ಟಿಕೊಳ್ಳುವವರೆಗೆ 5 ಸಾವಿರ ರೂ. ಬಾಡಿಗೆ ನೀಡುವುದಾಗಿ ಮುಖ್ಯಮಂತಿತಿಳಿಸಿದ್ದಾರೆ. ಆದೇಶ ಬಂದತಕ್ಷ ಣ ಕ್ರಮವಹಿಸಲಾಗುವುದು ಎಂದು ಸಭೆಗೆ ತಿಳಿಸಿದರು.ಚಾರ್ಮಾಡಿಘಾಟ್‌ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸೆಪ್ಟೆಂಬರ್‌ 14 ರವರೆಗೆ ನಿಷೇಧಿಸಲಾಗಿದೆ. ಚಾರ್ಮಾಡಿಘಾಟ್‌ರಸ್ತೆಯ 60 ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. 20 ಕಡೆ ದೊಡ್ಡ ಮಟ್ಟದಲ್ಲಿ, 40 ಕಡೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದ್ದು, ರಸ್ತೆ ದುರಸ್ಥಿ ಕೆಲಸ ನಡೆಯುತ್ತಿದೆ ಎಂದು ಹೇಳಿದರು. ಮುಳ್ಳಯ್ಯನಗಿರಿ, ಮಾಣಿಕ್ಯಧಾರ, ಬಾಬಾ ಬುಡನಗಿರಿ ಸೇರಿದಂತೆಗಿರಿ ಪ್ರದೇಶದ ಹಲವೆಡೆ ಭೂ ಕುಸಿದಿದ್ದು, ಇಲ್ಲಿನರಸ್ತೆ ತಿರುವುಗಳಿಂದ ಕೂಡಿರುವುದರಿಂದ ಆಗಸ್ಟ್‌ಅಂತ್ಯದವರೆಗೆ ಪ್ರವಾಸಿಗರ ವಾಹನ ಸಂಚಾರವನ್ನು ನಿಷೇಧಿಸಲಾಗಿದೆಎಂದರು. ಅಪರ ಜಿಲ್ಲಾಧಿಕಾರಿಡಾ.ಕುಮಾರ್‌, ಜಿ.ಪಂ ಉಪಕಾರ್ಯದರ್ಶಿ ರಾಜಗೋಪಾಲ್‌, ಉಪ ವಿಭಾಗಾಧಿಕಾರಿ ಶಿವಕುಮಾರ್‌ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ