ಆ್ಯಪ್ನಗರ

ಕುತೂಹಲ ತಂದ ವಿಮಾನ ಹಾರಾಟ

ತಾಲೂಕಿನ ದೇವನೂರನ್ನು ಕೇಂದ್ರವಾಗಿರಿಸಿಕೊಂಡು ಸುತ್ತಮುತ್ತ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಿಮಾನವೊಂದು ಕೆಳ ಮಟ್ಟದಲ್ಲಿ ಹಾರಾಡಿದ ಪ್ರಸಂಗ ಗುರುವಾರ ನಡೆದಿದೆ.

Vijaya Karnataka 6 Apr 2018, 9:45 pm
ಕಡೂರು : ತಾಲೂಕಿನ ದೇವನೂರನ್ನು ಕೇಂದ್ರವಾಗಿರಿಸಿಕೊಂಡು ಸುತ್ತಮುತ್ತ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಿಮಾನವೊಂದು ಕೆಳ ಮಟ್ಟದಲ್ಲಿ ಹಾರಾಡಿದ ಪ್ರಸಂಗ ಗುರುವಾರ ನಡೆದಿದೆ.
Vijaya Karnataka Web interesting flight flight
ಕುತೂಹಲ ತಂದ ವಿಮಾನ ಹಾರಾಟ


ವಿಮಾನ ಹಾರಾಟದಿಂದ ಉಂಟಾದ ಶಬ್ಧಕ್ಕೆ ಹೆದರಿದ ಜನ ತಮ್ಮ ಮನೆಗಳಿಂದ ಹೊರಬಂದು ಹಾರಾಟವನ್ನು ಆತಂಕದಲ್ಲಿ ವೀಕ್ಷಿಸಿದರಲ್ಲದೆ ಕುತೂಹಲದಿಂದ ತಮಗೆ ತಿಳಿದಂತೆ ಮಾತನಾಡಿಕೊಂಡರು. ಹೊಲ, ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಜನರು, ಆಶ್ಚರ್ಯದಿಂದ ತಲೆ ಎತ್ತಿ ನೋಡಿದರು. ಮಕ್ಕಳು ಆತಂಕ ಮಿಶ್ರಿತ ಕುತೂಹಲದಿಂದ ವಿಮಾನ ನೋಡುತ್ತಿದ್ದರೆ, ಯಾವುದಾದರೂ ಸರ್ವೆ ಕಾರ್ಯ ನಡೆಯುತ್ತಿರಬಹುದೇ ಎಂಬ ಸಂಶಯವನ್ನು ಕೆಲ ಗ್ರಾಮಸ್ತರು ವ್ಯಕ್ತಪಡಿಸಿದರು.

ಬೆಳಗ್ಗೆ 12-30ರ ಸುಮಾರಿಗೆ ಪೂರ್ವ ದಿಕ್ಕಿನಿಂದ ಆಗಮಿಸಿದ ವಿಮಾನವು ಅತ್ಯಂತ ಕೆಳ ಮಟ್ಟದಲ್ಲಿ ದೇವನೂರು ಗ್ರಾಮದಲ್ಲಿ ಹಾರಾಡಿ ಎರಡು ಸುತ್ತು ಹಾಕಿದ್ದಲ್ಲದೆ ಬಳಿಕ ದಕ್ಷಿಣ ದಿಕ್ಕಿನತ್ತ ಹೊರಟುಹೋಯಿತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ