ಆ್ಯಪ್ನಗರ

ಯುಗಮಾನೋತ್ಸವಕ್ಕೆ ಜಗದ್ಗುರುಗಳಿಗೆ ಆಹ್ವಾನ

ಬೆಂಗಳೂರು ಅರಮನೆ ಮೈದಾನದಲ್ಲಿ ಜುಲೈ 21ರಂದು ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭವನ್ನು ವೈಶಿಷ್ಟ ್ಯಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಪ್ರಶಾಂತ ಕಲ್ಲೂರ್‌ ಮತ್ತು ವೇದಿಕೆ ಪದಾಧಿಕಾರಿಗಳು ಶ್ರೀ ಪೀಠಕ್ಕೆ ಆಗಮಿಸಿ ರಂಭಾಪುರಿ ಜಗದ್ಗುರುಗಳವರನ್ನು ಆಮಂತ್ರಿಸಿ ಆಶೀರ್ವಾದ ಪಡೆದರು.

Vijaya Karnataka 20 Jun 2019, 5:00 am
ಬಾಳೆಹೊನ್ನೂರು : ಬೆಂಗಳೂರು ಅರಮನೆ ಮೈದಾನದಲ್ಲಿ ಜುಲೈ 21ರಂದು ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭವನ್ನು ವೈಶಿಷ್ಟ ್ಯಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಪ್ರಶಾಂತ ಕಲ್ಲೂರ್‌ ಮತ್ತು ವೇದಿಕೆ ಪದಾಧಿಕಾರಿಗಳು ಶ್ರೀ ಪೀಠಕ್ಕೆ ಆಗಮಿಸಿ ರಂಭಾಪುರಿ ಜಗದ್ಗುರುಗಳವರನ್ನು ಆಮಂತ್ರಿಸಿ ಆಶೀರ್ವಾದ ಪಡೆದರು.
Vijaya Karnataka Web CKM-19BHR1


ಈ ಸಂದರ್ಭದಲ್ಲಿ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಮಾತನಾಡಿ, ಬಹಳ ವರ್ಷಗಳ ನಂತರ ಬೆಂಗಳೂರು ಮಹಾನಗರದಲ್ಲಿ ಬೃಹತ್‌ ಸಮಾರಂಭ ಜರುಗಲಿರುವುದು ತಮಗೆ ಸಂತೋಷ ತಂದಿದೆ. ಜಾತಿ ಮತ ಪಂಥಗಳ ಗಡಿಮೀರಿ ಭಾವೈಕ್ಯತೆ ಮತ್ತು ಸಾಮರಸ್ಯಕ್ಕಾಗಿ ಜಗದ್ಗುರು ರೇಣುಕಾಚಾರ್ಯರು ಕೊಟ್ಟ ಕೊಡುಗೆ ಅಮೂಲ್ಯ. ಅವರ ವಿಶ್ವ ಬಂಧುತ್ವದ ಚಿಂತನೆಗಳು ಜನಮನವನ್ನು ಪರಿಶುದ್ಧಗೊಳಿಸಲು ಸಹಕಾರಿಯಾಗಿವೆ. ಇದೇ ದಾರಿಯಲ್ಲಿ ಶಿವ ಶರಣರು ನಡೆದು ಶಾಂತಿ ಸಾಮರಸ್ಯ ಬೆಳೆಸಿದ್ದಾರೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯ ಅತ್ಯಂತ ಯಶಸ್ವಿಯಾಗಿ ಜರುಗುತ್ತದೆ ಎಂದರು.

ಯುವ ವೇದಿಕೆ ಅಧ್ಯಕ್ಷ ಪ್ರಶಾಂತ ಕಲ್ಲೂರ ಮಾತನಾಡಿ, ಸಕಲ ಸದ್ಭಕ್ತರ ಸಹಕಾರದಿಂದ ಅತ್ಯಂತ ಅದ್ಧೂರಿಯಾಗಿ ಸಮಾರಂಭ ನಡೆಸಲು ಸಂಕಲ್ಪಿಸಿದ್ದೇವೆ. ವೀರಶೈವ ಧರ್ಮದ ಮೂಲ ಪ್ರಥಮಾಚಾರ್ಯರಾದ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳ ಅರಿವು ಮೂಡಿಸುವುದೇ ನಮ್ಮ ಗುರಿಯಾಗಿದೆ. ಸಮಾರಂಭದಲ್ಲಿ ರಂಭಾಪುರಿ ಜಗದ್ಗುರುಗಳ ಬೆಳ್ಳಿ ಅಡ್ಡ ಪಲ್ಲಕ್ಕಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ನಾಡಿನೆಲ್ಲೆಡೆಯಿಂದ ಧರ್ಮಾಭಿಮಾನಿಗಳು ಆಗಮಿಸಿ ಸಮಾರಂಭವನ್ನು ಯಶಸ್ವಿಗೊಳಿಸಿಕೊಡಬೇಕೆಂದು ವಿನಂತಿಸಿದರು.

ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮದ ಇತಿಹಾಸದಲ್ಲಿ ಅವಿಸ್ಮರಣೀಯ ಸಮಾರಂಭವಾಗಿ ಸಂಯೋಜನೆಗೊಳಿಸಲು ಶ್ರಮಿಸುತ್ತಿದ್ದೇವೆ. ತಮ್ಮೆಲ್ಲರ ಸಹಕಾರ ಯುವ ವೇದಿಕೆಯೊಂದಿಗೆ ಇರಲೆಂದು ಆಶಿಸಿದರು.

ಈ ಸಂದರ್ಭದಲ್ಲಿ ಅನ್ನದಾನಿ ಹಿರೇಮಠ, ಬಾಳಯ್ಯ ಇಂಡಿಮಠ, ಎಂ.ಎಸ್‌.ವಿರೂಪಾಕ್ಷ , ಎನ್‌.ಬಿ.ನಂಜೇಗೌಡ, ಎಂ.ಎಸ್‌.ಆನಂದ್‌, ಎಸ್‌.ಲಿಂಗರಾಜು ಮೊದಲಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ