ಆ್ಯಪ್ನಗರ

5 ಅಂಚೆ ಶಾಖೆಗಳಲ್ಲಿ ಐಪಿಪಿಬಿ ಸೇವೆ

ಪ್ರಧಾನ ಅಂಚೆ ಕಚೇರಿ, ರಾಮನಹಳ್ಳಿ ಉಪ ಅಂಚೆ ಕಚೇರಿ ಹಾಗೂ ಗ್ರಾಮಾಂತರ ಪ್ರದೇಶದ ಕಬ್ಬಿನಹಳ್ಳಿ, ಕರ್ತಿಕೆರೆ, ಮುಗುಳವಳ್ಳಿ ಅಂಚೆ ಕಚೇರಿಗಳಲ್ಲಿ ಸೆಪ್ಟೆಂಬರ್‌ 1 ರಿಂದ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಆರಂಭಗೊಳ್ಳಲಿವೆ ಎಂದು ಜಿಲ್ಲಾ ಅಂಚೆ ಅಧೀಕ್ಷಕ ಜಿ.ಸಿ.ಶ್ರೀನಿವಾಸ್‌ ಹೇಳಿದರು.

Vijaya Karnataka 29 Aug 2018, 5:00 am
ಚಿಕ್ಕಮಗಳೂರು : ಪ್ರಧಾನ ಅಂಚೆ ಕಚೇರಿ, ರಾಮನಹಳ್ಳಿ ಉಪ ಅಂಚೆ ಕಚೇರಿ ಹಾಗೂ ಗ್ರಾಮಾಂತರ ಪ್ರದೇಶದ ಕಬ್ಬಿನಹಳ್ಳಿ, ಕರ್ತಿಕೆರೆ, ಮುಗುಳವಳ್ಳಿ ಅಂಚೆ ಕಚೇರಿಗಳಲ್ಲಿ ಸೆಪ್ಟೆಂಬರ್‌ 1 ರಿಂದ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಆರಂಭಗೊಳ್ಳಲಿವೆ ಎಂದು ಜಿಲ್ಲಾ ಅಂಚೆ ಅಧೀಕ್ಷಕ ಜಿ.ಸಿ.ಶ್ರೀನಿವಾಸ್‌ ಹೇಳಿದರು.
Vijaya Karnataka Web ippb service at 5 postal branches
5 ಅಂಚೆ ಶಾಖೆಗಳಲ್ಲಿ ಐಪಿಪಿಬಿ ಸೇವೆ


ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಮಾನ್ಯ ನಾಗರಿಕರಿಗೆ ಎಟಕುವಂತೆ ಬ್ಯಾಂಕಿಂಗ್‌ ಸೇವೆ ಒದಗಿಸುವ ನಂಬಿಕಸ್ಥ ಶಾಖೆಯನ್ನು ಸಮರ್ಪಿಸುವ ಉದ್ದೇಶದೊಂದಿಗೆ ಐಪಿಪಿಬಿ ಆರಂಭವಾಗುತ್ತಿವೆ. ಉಳಿತಾಯ ಖಾತೆ, ಚಾಲ್ತಿ ಖಾತೆ, ಹಣ ಪಾವತಿ, ವರ್ಗಾವಣೆ, ಸಾಮಾಜಿಕ ಭದ್ರತಾ ಯೋಜನೆಗಳ ಭತ್ಯೆಗಳನ್ನು ಈ ಖಾತೆಗಳ ಮೂಲಕ ನಿರ್ವಹಣೆ ಮಾಡಬಹುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಎರಡು ಪ್ರಧಾನ ಅಂಚೆ ಕಚೇರಿ, 49 ಉಪ ಅಂಚೆ ಕಚೇರಿ, 249 ಗ್ರಾಮಾಂತರ ಅಂಚೆ ಕಚೇರಿಗಳಿವೆ. ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರ ಮನೆ ಬಾಗಿಲಿಗೆ ಪೋಸ್ಟ್‌ಮ್ಯಾನ್‌, ಗ್ರಾಮೀಣ ಅಂಚೆ ನೌಕರರ ಮೂಲಕ ಸೇವೆ ಒದಗಿಸಲಾಗುವುದು. ಬ್ಯಾಂಕಿಂಗ್‌ ಹಾಗೂ ಪಾವತಿ ವ್ಯವಹಾರಗಳನ್ನು ಸುಲಭಗೊಳಿಸಲಾಗಿದೆ ಎಂದು ತಿಳಿಸಿದರು.

ಆಧಾರ್‌ ಸಂಖ್ಯೆಯೊಂದಿಗೆ ಕೆಲವೇ ನಿಮಿಷಗಳಲ್ಲಿ ಕಾಗದ ರಹಿತ ಖಾತೆ ತೆರೆಯಲಾಗುವುದು. ಕ್ವಿಕ್‌ ರೆಸ್ಪಾನ್ಸ್‌ ಕಾರ್ಡ್‌, ಬಯೋಮೆಟ್ರಿಕ್‌ ಅಥೆಂಟಿಕೇಷನ್‌ನೊಂದಿಗೆ ತ್ವರಿತ ವ್ಯವಹಾರ ಲಭಿಸುತ್ತದೆ. ಮೊಬೈಲ್‌ ಬ್ಯಾಂಕಿಂಗ್‌ ಸೇವೆ ಇದ್ದು, ಸಂವಹನ ನಡೆಸಲು ಪ್ರತ್ಯೇಕವಾಗಿ ನೀಡಲಾದ ಸಹಾಯವಾಣಿ ಮೂಲಕ ಗ್ರಾಹಕರು ಮೊಬೈಲ್‌ ಸಂದೇಶ ರವಾನಿಸಿದರೆ ಅಂಚೆ ಪೇದೆ ಅವರ ಮನೆ ಬಾಗಿಲಿಗೆ ತೆರಳಿ ಠೇವಣಿ, ಪಾವತಿ, ವರ್ಗಾವಣೆ ಸೇವೆ ಒದಗಿಸುವರು ಎಂದು ಮಾಹಿತಿ ನೀಡಿದರು.

ಜಿಲ್ಲಾ ಸಹಾಯಕ ಅಂಚೆ ಅಧೀಕ್ಷಕ ಎಲ್‌.ರಮೇಶ್‌, ಮಾರುಕಟ್ಟೆ ಅಧಿಕಾರಿ ಎಚ್‌.ಟಿ.ದೊಡ್ಡೇಶ್‌ ಹಾಜರಿದ್ದರು.

--------------
ಸೆ.1ರಂದು ಚಾಲನೆ
ಐಪಿಪಿಬಿಗೆ ಸೆ.1ರಂದು ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಚಾಲನೆ ನೀಡುವರು. ಅದೇ ದಿನ ಕುವೆಂಪು ಕಲಾ ಮಂದಿರದಲ್ಲಿ ಮಧ್ಯಾಹ್ನ 2ಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಜಿಲ್ಲೆಯ ಐಪಿಪಿಬಿ ಸೇವೆಗೆ ಚಾಲನೆ ನೀಡುವರು. ಕಬ್ಬಿನಹಳ್ಳಿ, ಕರ್ತಿಕೆರೆ, ಮುಗುಳವಳ್ಳಿ ಶಾಖೆಗಳಲ್ಲೂ ಇದೇ ಸಮಯಕ್ಕೆ ಚಾಲನೆ ಸಿಕ್ಕಲಿದೆ.
------------------------
ಸೇವೆ ವಿಸ್ತರಣೆ
ಡಿಜಿಟಲ್‌ ಇಂಡಿಯಾದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಐಪಿಪಿಬಿ ಸೇವೆ ದೇಶದ ಪ್ರತಿ ಹಳ್ಳಿಗೂ ಬ್ಯಾಂಕಿಂಗ್‌ ಸೇವೆ ಒದಗಿಸುವ, ಪ್ರತಿ ಅಂಚೆ ಕಚೇರಿಯನ್ನು ಬ್ಯಾಂಕ್‌ ಆಗಿ ಪರಿವರ್ತಿಸುವ ಗುರಿ ಹೊಂದಿದೆ. ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 5 ಶಾಖೆಗಳಲ್ಲಿ ಕಾರಾರ‍ಯರಂಭ ಮಾಡುತ್ತಿದ್ದು ಹಂತ ಹಂತವಾಗಿ ಎಲ್ಲ ಅಂಚೆ ಕಚೇರಿಗಳಲ್ಲೂ ಈ ಸೇವೆ ವಿಸ್ತರಿಸಲಾಗುವುದು.
-ಜಿ.ಸಿ.ಶ್ರೀನಿವಾಸ್‌,

ಜಿಲ್ಲಾ ಅಂಚೆ ಅಧೀಕ್ಷಕ

---------------------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ