ಆ್ಯಪ್ನಗರ

ರೋಗಿಗಳ ಚಿಕಿತ್ಸೆ ವೈದ್ಯರ ಕರ್ತವ್ಯ

ಅನಾರೋಗ್ಯದಿಂದ ವೈದ್ಯರ ಬಳಿ ಬರುವ ರೋಗಿಗಳಿಗೆ ಯಾವುದೇ ಅಂಜಿಕೆ, ಅಳುಕು ಇಲ್ಲದೇ ಉಪಚರಿಸಿ ಚಿಕಿತ್ಸೆ ನೀಡಬೇಕಾಗಿರುವುದು ವೈದ್ಯಕೀಯ ಲೋಕದ ಕರ್ತವ್ಯ ಎಂದು ದಂತ ವೈದ್ಯೆ ಡಾ.ಮೇಘಾ ಪದ್ಮನಾಭ ಹೇಳಿದರು.

Vijaya Karnataka 2 Jul 2019, 5:00 am
ಮೂಡಿಗೆರೆ : ಅನಾರೋಗ್ಯದಿಂದ ವೈದ್ಯರ ಬಳಿ ಬರುವ ರೋಗಿಗಳಿಗೆ ಯಾವುದೇ ಅಂಜಿಕೆ, ಅಳುಕು ಇಲ್ಲದೇ ಉಪಚರಿಸಿ ಚಿಕಿತ್ಸೆ ನೀಡಬೇಕಾಗಿರುವುದು ವೈದ್ಯಕೀಯ ಲೋಕದ ಕರ್ತವ್ಯ ಎಂದು ದಂತ ವೈದ್ಯೆ ಡಾ.ಮೇಘಾ ಪದ್ಮನಾಭ ಹೇಳಿದರು.
Vijaya Karnataka Web CKM-1mdg-p2


ಅವರು ಜೇಸಿಐ ಭವನದಲ್ಲಿ ಸೋಮವಾರ ಜೇಸಿಐ ಸಂಸ್ಥೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಲಕ್ಷ್ಮೀ ಡಯಾಗ್ನೋಸ್ಟಿಕ್‌ ಲ್ಯಾಬೋರೇಟರಿ ಹಾಗೂ ಆರೋಗ್ಯ ಇಲಾಖೆ ಆಶ್ರಯದಲ್ಲಿ ಡಾಕ್ಟರ್ಸ್‌ ಡೇ ಅಂಗವಾಗಿ ಉಚಿತ ಮಧುಮೇಹ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವೈದ್ಯರಿಗೆ ದಿನದ 24 ಗಂಟೆಯೂ ದೊಡ್ಡ ಮಟ್ಟದ ಜವಾಬ್ದಾರಿಯಿದೆ. ಹಾಗಾಗಿ ವರ್ಷದಲ್ಲೊಮ್ಮೆ ಕೆಲ ಗಂಟೆಗಳು ಮಾತ್ರ ತಮ್ಮ ವೃತ್ತಿಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ಜೇಸಿ ಸಂಸ್ಥೆ ಅಧ್ಯಕ್ಷ ಎಚ್‌.ಕೆ.ಯೋಗೇಶ್‌ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಸಾರ್ವಜನಿಕರು ಹಲವು ಉಪಯುಕ್ತ ಮಾಹಿತಿಗಳನ್ನು ಪಡೆಯುವ ಮೂಲಕ ಆರೋಗ್ಯ, ಶಿಕ್ಷ ಣ, ನ್ಯಾಯಾಂಗ ಸಹಿತ ವಿವಿಧ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಇದರಿಂದ ನೆಮ್ಮದಿ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಸುಂದರೇಶ್‌, ಲಕ್ಷ್ಮೀ ಡಯಾಗ್ನೋಸ್ಟಿಕ್‌ ಲ್ಯಾಬೋರೇಟರಿಯ ಪ್ರಶಾಂತ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವಿಠಲ್‌ ಪೂಜಾರಿ, ಸಮನ್ವಯ ಅಧಿಕಾರಿ ಪಲ್ಲವಿ, ವಿN್ನೕಶ್‌, ಜೇಸಿ ಕಾರ್ಯದರ್ಶಿ ಜಿ.ಟಿ.ರಾಜೇಶ್‌, ಜೇಸಿರೇಟ್‌ ಅಧ್ಯಕ್ಷೆ ಗೀತಾ ಯೋಗೇಶ್‌, ವಿದ್ಯಾರಾಜು, ಚಂದ್ರಶೇಖರ್‌, ಪ್ರಸನ್ನ ಗೌಡಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ