ಆ್ಯಪ್ನಗರ

ಜ್ಞಾನಪೀಠ ಪುರಸ್ಕೃತರ ಬದುಕು,ಬರಹ ಉಪನ್ಯಾಸ ಮಾಲಿಕೆ

ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಬದುಕು,ಬರಹಗಳನ್ನು ಇಂದಿನ ಪೀಳಿಗೆ ಅಧ್ಯಯನ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ನಂಜಯ್ಯ ಹೇಳಿದರು.

Vijaya Karnataka 31 Aug 2019, 5:00 am
ಚಿಕ್ಕಮಗಳೂರು: ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಬದುಕು,ಬರಹಗಳನ್ನು ಇಂದಿನ ಪೀಳಿಗೆ ಅಧ್ಯಯನ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ನಂಜಯ್ಯ ಹೇಳಿದರು.
Vijaya Karnataka Web 30SHIVU-P5_35


ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿನಡೆದ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ ಮತ್ತು ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನ ಒಂದು ತಿಂಗಳು ಹಮ್ಮಿಕೊಂಡಿದ್ದ ಜ್ಞಾನಪೀಠ ಪುರಸ್ಕೃತರ ಬದುಕು-ಬರಹ ಸರಣಿ ಉಪನ್ಯಾಸ ಮಾಲಿಕೆಯ ಸಮಾರೋಪ ಸಮಾರಂಭದಲ್ಲಿಅವರು ಮಾತನಾಡಿದರು.ಬೇರೆ ಭಾಷೆಗಳಿಗಿಂತ ಹೆಚ್ಚು ಜ್ಞಾನಪೀಠ ಪಡೆದ ಹೆಗ್ಗಳಿಕೆ ಕನ್ನಡಕ್ಕಿದೆ. 8 ಹಿರಿಯ ಸಾಹಿತಿಗಳು ನಾಡಿಗೆ ಜ್ಞಾನಪೀಠ ತಂದು ಕೊಟ್ಟಿದ್ದಾರೆ. ಅವರ ಬದುಕು ಮತ್ತು ಬರಹಗಳನ್ನು ಅಧ್ಯಯನ ಮಾಡಿದರೆ ನೀವೂ ಸಹ ಭವಿಷ್ಯದಲ್ಲಿಕುವೆಂಪು, ಕಾರಂತ ಅಥವಾ ಕಂಬಾರರಾಗಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ ಬಗ್ಗೆ ಐಡಿಎಸ್‌ಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಚ್‌.ಎಂ.ಮಹೇಶ್‌ ಉಪನ್ಯಾಸ ನೀಡಿ, ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರಕಿಸಿ ಕೊಟ್ಟವರು ಅನಂತಮೂರ್ತಿಯವರು. ಅವರು ದೊಡ್ಡ ಪ್ರಜಾಪ್ರಭುತ್ವವಾದಿ, ಖಂಡಿತವಾದಿ, ಸುಧಾರಣಾವಾದಿ, ಪ್ರಗತಿಪರ ಮತ್ತು ಎಡಪಂಥೀಯ ಚಿಂತಕ ಎಂದರು.

ವಾಸವಿ ವಿದ್ಯಾ ಸಂಸ್ಥೆಯ ಸಹಕಾರ್ಯದರ್ಶಿ ಜಿ.ಎ.ದಿನೇಶ್‌ಗುಪ್ತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯನ್ನು ನಾವು ದೈನಂದಿನ ಬದುಕಿನಲ್ಲಿಬಳಸಿದರೆ ಮಾತ್ರ ಅದು ಉಳಿಯುತ್ತದೆ ಎಂದರು.

ಜಿಲ್ಲಾಕಸಾಪ ಅಧ್ಯಕ್ಷ ಕುಂದೂರು ಅಶೋಕ್‌ ಪ್ರಾಸ್ತಾವಿಕ ಮಾತನಾಡಿದರು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್‌ ಕುವೆಂಪು ವಿರಚಿತ ಗೀತೆ ಗಾಯನ ಮಾಡಿದರು. ಸಾಹಿತಿ ಡಾ.ಯು.ಆರ್‌.ಅನಂತಮೂರ್ತಿ ಅವರ ಬದುಕು-ಬರಹ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ಜರುಗಿತು. ಪ್ರಾಂಶುಪಾಲ ಬಿ.ಆರ್‌.ಕುಮಾರ್‌, ಜಿಲ್ಲಾಕಸಾಪ ಪ್ರಧಾನ ಸಂಚಾಲಕ ಎಂ.ಆರ್‌.ಪ್ರಕಾಶ್‌, ಸಂಘಟನಾ ಕಾರ್ಯದರ್ಶಿ ಚಂದ್ರಯ್ಯ, ಸಾಹಿತಿ ರವೀಶ್‌ ಕ್ಯಾತನಬೀಡು ಹಾಜರಿದ್ದರು.ಜಿಲ್ಲಾಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಪ್ರೊ. ಕೆ.ಎನ್‌.ಲಕ್ಷಿತ್ರ್ಮೕಕಾಂತ್‌ ಸ್ವಾಗತಿಸಿ, ಸಾಹಿತಿ ರಮೇಶ್‌ ಬೊಂಗಾಳೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ