ಆ್ಯಪ್ನಗರ

ಕ್ಷ ಯ ರೋಗ ಮುಕ್ತ ಭಾರತಕ್ಕೆ ಕೈಜೋಡಿಸಿ

ಕ್ಷಯರೋಗದಿಂದ ದೇಶವನ್ನು ಮುಕ್ತಗೊಳಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಬಸವರಾಜ ಚೇಂಗಟಿ ಹೇಳಿದರು.

Vijaya Karnataka 26 Mar 2019, 5:00 am
ಚಿಕ್ಕಮಗಳೂರು : ಕ್ಷಯರೋಗದಿಂದ ದೇಶವನ್ನು ಮುಕ್ತಗೊಳಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಬಸವರಾಜ ಚೇಂಗಟಿ ಹೇಳಿದರು.
Vijaya Karnataka Web ckm-25rudrap8


ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷ ಯರೋಗ ನಿಯಂತ್ರಣ ಕೇಂದ್ರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸೋಮವಾರ ಏರ್ಪಡಿಸಿದ್ದ ವಿಶ್ವ ಕ್ಷ ಯರೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ದೇಶ ಅಭಿವೃದ್ಧಿ ಜತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ಮೊದಲು ಅರಣ್ಯ ಮತ್ತು ನೀರನ್ನು ಉಳಿಸಿ ಬೆಳೆಸಬೇಕು. ಇದರಿಂದ ಉತ್ತಮ ಹವಾಮಾನದ ಜತೆಗೆ ಆರೋಗ್ಯವನ್ನು ಪಡೆದುಕೊಳ್ಳಬಹುದು. 2030ನೇ ವರ್ಷಕ್ಕೆ ದೇಶವನ್ನು ಕ್ಷ ಯ ಮುಕ್ತವಾಗಿಸುತ್ತೇವೆ ಎಂದು ಸರಕಾರ ಪಣ ತೊಟ್ಟಿದೆ. ಇದನ್ನು ನೆರವೇರಿಸಲು ಪ್ರತಿಯೊಬ್ಬ ಜನಸಾಮಾನ್ಯರು ಸಹಕರಿಸಿ ಕ್ಷ ಯ ಮುಕ್ತ ರಾಷ್ಟ್ರ ನಿರ್ಮಾಣ ಮಾಡುವುದಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಕ್ಷ ಯ ರೋಗಕ್ಕೆ 1882ರಲ್ಲೇ ಔಷಧಿ ಕಂಡುಹಿಡಿದರೂ ಸುಧಾರಿಸುವಲ್ಲಿ ಯಶಸ್ವಿ ಕಾಣುತ್ತಿಲ್ಲ. ಆದರೆ, ಇಂದು ಸರಕಾರ ಇಂತಹ ರೋಗಗಳನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕ್ಷ ಯರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

2019ರ ಸಾರ್ವತ್ರಿಕ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಪ್ರತಿಯೊಬ್ಬರು ಮತದಾನ ಮಾಡಿ ತಪ್ಪದೇ ತಮ್ಮ ಕರ್ತವ್ಯ ನಿಭಾಯಿಸಿ ಎಂದು ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.

ಡಾ.ಮೋಹನ್‌ ಮಾತನಾಡಿ, ಉಗಿಯುವ ಸಂಸ್ಕೃತಿಯನ್ನು ದೇಶದಲ್ಲಿ ಹೊಗಲಾಡಿಸಿದರೆ ಸುಮಾರು ಶೇ.50ರಷ್ಟು ರೋಗ ತಡೆಗಟ್ಟಬಹುದು. ಆರೋಗ್ಯ ಕಾಪಾಡುವುದು ತಮ್ಮಲ್ಲಿಯೇ ಇದೆ. ಅದನ್ನು ಕಂಡುಕೊಳ್ಳುವಲ್ಲಿ ನಾವುಗಳು ವಿಫಲರಾಗಿದ್ದೇವೆ ಎಂದು ವಿಷಾದಿಸಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಡಾಕ್ಟರ್‌ಗಳಿದ್ದು ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ. ಇಂತಹ ರೋಗಿಗಳಿಗೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಔಷಧಿ ದೊರೆಯುತ್ತದೆ. ಆದಷ್ಟು ಸರಕಾರಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಿ ಎಂದು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ರಾಜೇಶ್‌ ಮಾತನಾಡಿದರು. ಜಿಲ್ಲಾ ಕ್ಷ ಯ ರೋಗ ತಜ್ಞ ಡಾ.ಬಾಲಕೃಷ್ಣ ಅಧ್ಯಕ್ಷ ತೆ ವಹಿಸಿದ್ದರು. ಈ ಸಂದರ್ಭ ಇಬ್ಬರು ಕ್ಷ ಯ ರೋಗಿಗಳಿಗೆ ಜೆಸಿಐನಿಂದ ನ್ಯೂಟ್ರಿಷಿಯನ್‌ ಔಷಧಿ ನೀಡಲಾಯಿತು.

ಜೆಸಿಐ ಅಧ್ಯಕ್ಷ ರಘುನಂದನ್‌, ಸದಸ್ಯರಾದ ಚೈತ್ರ, ಶ್ವೇತ ಆನಂದ್‌ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ