ಆ್ಯಪ್ನಗರ

ಕರ್ನಾಟಕ ಬಾಲಕಾರ್ಮಿಕ ಮುಕ್ತ ರಾಜ್ಯವಾಗಲಿ

ರಾಜ್ಯದಲ್ಲಿ ಬಹುತೇಕ ಮಕ್ಕಳು ನಾನಾ ಕಾರಣದಿಂದ ಶಿಕ್ಷ ಣದಿಂದ ವಂಚಿತರಾಗುತ್ತಿದ್ದಾರೆ. ಅಂತಹ ಮಕ್ಕಳು ಕಂಡು ಬಂದರೆ ಕೂಡಲೇ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿ ಶಾಲೆಗೆ ಕರೆ ತಂದು ಶಿಕ್ಷ ಣ ದೊರಕಿಸಿ ಬಾಲ ಕಾರ್ಮಿಕ ಪದ್ಧತಿಯನ್ನು ರಾಜ್ಯದಿಂದಲೇ ಕಿತ್ತೊಗೆಯಬೇಕೆಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ಎಂ.ಎಸ್‌.ಶಶಿಕಲಾ ಹೇಳಿದರು.

Vijaya Karnataka 13 Jun 2019, 5:00 am
ಮೂಡಿಗೆರೆ : ರಾಜ್ಯದಲ್ಲಿ ಬಹುತೇಕ ಮಕ್ಕಳು ನಾನಾ ಕಾರಣದಿಂದ ಶಿಕ್ಷ ಣದಿಂದ ವಂಚಿತರಾಗುತ್ತಿದ್ದಾರೆ. ಅಂತಹ ಮಕ್ಕಳು ಕಂಡು ಬಂದರೆ ಕೂಡಲೇ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿ ಶಾಲೆಗೆ ಕರೆ ತಂದು ಶಿಕ್ಷ ಣ ದೊರಕಿಸಿ ಬಾಲ ಕಾರ್ಮಿಕ ಪದ್ಧತಿಯನ್ನು ರಾಜ್ಯದಿಂದಲೇ ಕಿತ್ತೊಗೆಯಬೇಕೆಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ಎಂ.ಎಸ್‌.ಶಶಿಕಲಾ ಹೇಳಿದರು.
Vijaya Karnataka Web CKM-12MDG-P1


ಅವರು ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಜೇಸಿಐ ಸಂಸ್ಥೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮಾಜದಲ್ಲಿ ಬಹುತೇಕ ಮಕ್ಕಳು ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ವಲಸೆ ಬಂದ ಜನರು ತಮ್ಮ ಮಕ್ಕಳಿಗೆ ಶಿಕ್ಷ ಣ ದೊರಕಿಸದೇ ಹಿಂದೇಟು ಹಾಕುತ್ತಿರುವ ಪ್ರಸಂಗಗಳು ನಡೆಯುತ್ತಿದೆ. ಅಂತಹ ಮಕ್ಕಳು ಕಂಡು ಬಂದರೆ ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಸೇರಿಸಬೇಕೆಂದು ಮನವಿ ಮಾಡಿದರು.

ನಂತರ ಶಾಲೆ ಮಕ್ಕಳೊಂದಿಗೆ ಮೂಡಿಗೆರೆ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಕೆ.ಎಂ.ಹರೀಶ್‌, ಪ್ರಧಾನ ಸಿವಿಲ್‌ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣ್‌ಪುರ್‌, ಜೇಸಿಐ ಅಧ್ಯಕ್ಷ ಎಚ್‌.ಕೆ.ಯೋಗೇಶ್‌, ಕಾರ್ಯದರ್ಶಿ ಜಿ.ಟಿ.ರಾಜೇಶ್‌, ವಕೀಲರ ಸಂಘದ ಅಧ್ಯಕ್ಷ ಎಂ.ಎಸ್‌.ಮಹೇಶ್‌, ಕಾರ್ಯದರ್ಶಿ ಎಂ.ಎಂ.ರಾಘವೇಂದ್ರ, ಸಹಾಯಕ ಸರಕಾರಿ ಅಭಿಯೋಜಕ ಸುನೀಲ್‌ ಪಾಟೀಲ್‌, ಕಾರ್ಮಿಕ ಇಲಾಖೆಯ ರೂಪ, ಶಿಕ್ಷ ಕರಾದ ರವಿಕುಮಾರ್‌, ತೇಜುಮೂರ್ತಿ, ಜೂನಿಯರ್‌ ಕಾಲೇಜು ಹಾಗೂ ಸೆಂಟ್‌ ಮಾರ್ಥಾಸ್‌ ಶಾಲೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ