ಆ್ಯಪ್ನಗರ

ಚಿಕ್ಕಮಗಳೂರು: ಗ್ರಾಮ ಪಂ. ಚುನಾವಣೆ ಬಹಿಷ್ಕಾರಕ್ಕೆ ದೃಢ ನಿರ್ಧಾರ, ಸಂಧಾನಕ್ಕೂ ಜಗ್ಗದ ಮತದಾರರಿಂದ ಸರಕಾರಕ್ಕೆ ಠಕ್ಕರ್‌!

​​ಸರಕಾರವು ಈ ಯೋಜನೆಗಳನ್ನು ಹಿಂಪಡೆಯುವವರೆಗೂ ಮತದಾನ ಬಹಿಷ್ಕಾರ, ಹೋರಾಟ, ಆಂದೋಲನಗಳನ್ನು ನಿಲ್ಲಿಸದಂತೆ ಗ್ರಾಮಸ್ಥರು ದೃಢ ಸಂಕಲ್ಪ ಮಾಡಿದ್ದಾರೆ. ಇನ್ನು ಇದಕ್ಕೆ ಎಲ್ಲಾ ಪಕ್ಷದ ಅಧ್ಯಕ್ಷರುಗಳು ಕೂಡ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಈ ಬಾರಿ ಚಿಕ್ಕಮಗಳೂರಿನ ಗ್ರಾಮ ಪಂಚಾಯತ್ ಚುನಾವಣೆ ಭಾರೀ ಕುತೂಹಲ ಮೂಡಿದೆ.

Vijaya Karnataka Web 4 Dec 2020, 8:38 am
ಬಾಳೆಹೊನ್ನೂರು: ಮಲೆನಾಡಿನ ರೈತ ಸಮೂಹಕ್ಕೆ ಮರಣ ಶಾಸನವಾಗಿರುವ ಹುಲಿ ಯೋಜನೆ, ಕಸ್ತೂರಿ ರಂಗನ್‌ ವರದಿ, ಪರಿಸರ ಸೂಕ್ಷ್ಮ ವಲಯ, ಬಫರ್‌ ಝೋನ್‌ ಯೋಜನೆಗಳನ್ನು ವಿರೋಧಿಸಿ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಲು ಖಾಂಡ್ಯ ನಾಗರಿಕ ರಕ್ಷಣಾ ವೇದಿಕೆ ವತಿಯಿಂದ ಗುರುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಂಗಮೇಶ್ವರಪೇಟೆಯ ಪ್ರೌಢಶಾಲೆ ಸಮುದಾಯ ಭವನದಲ್ಲಿ ನಡೆದ ಸಭೆಗೆ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಗ್ರಾಮಸ್ಥರು, ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
Vijaya Karnataka Web chikkamagaluru


ಸರಕಾರವು ಈ ಯೋಜನೆಗಳನ್ನು ಹಿಂಪಡೆಯುವವರೆಗೂ ಮತದಾನ ಬಹಿಷ್ಕಾರ, ಹೋರಾಟ, ಆಂದೋಲನಗಳನ್ನು ನಿಲ್ಲಿಸದಂತೆ ಒಕ್ಕೊರಲ ತೀರ್ಮಾನಕ್ಕೆ ಬರಲಾಯಿತು. ಡಿ.7ರಿಂದ 11ರವರೆಗೆ ನಾಮಪತ್ರ ಸಲ್ಲಿಕೆಯ ದಿನವಾಗಿದ್ದು, ಪಕ್ಷೇತರರು ಸೇರಿದಂತೆ ಯಾವ ಪಕ್ಷದ ಅಭ್ಯರ್ಥಿಗಳೂ ಆಯಾ ಕೇಂದ್ರಕ್ಕೆ ಬರುವಂತಿಲ್ಲ. ಈ ಕುರಿತು ಜನರಿಗೆ ಅರಿವು ಮೂಡಿಸಲು ಎಲ್ಲ ಪಕ್ಷದ ಭೂತ್‌ ಮಟ್ಟದ ಅಧ್ಯಕ್ಷರು, ರೈತಪರ ಸಂಘಟನೆಗಳು ಸಕ್ರಿಯವಾಗಿ ಕೆಲಸ ಮಾಡುತ್ತೇವೆ.

ಆ ದಿನದಂದು ನಾಮಪತ್ರ ಸಲ್ಲಿಕೆಯ ಕೇಂದ್ರಕ್ಕೆ ಬೀಗ ಜಡಿಯಲಾಗುವುದು ಎಂದು ಘೋಷಿಸಿದರು. ಸಭೆಗೆ ತಹಸೀಲ್ದಾರ್‌ ಕಾಂತರಾಜ್‌, ತಾ.ಪಂ. ಸಿಇಒ ರೇವಣ್ಣ, ಆರ್‌ಐ ಸಂತೋಷ್‌, ಉಪ ತಹಸೀಲ್ದಾರ್‌ ಸುಜಾತಾ ಆಗಮಿಸಿದ್ದು, ಚುನಾವಣೆ ಬಹಿಷ್ಕರಿಸದಂತೆ ಮನವಿ ಮಾಡಿದರೂ ಗ್ರಾಮಸ್ಥರು ಜಗ್ಗಲಿಲ್ಲ. ತಮ್ಮ ನಿಲುವು ಸ್ಥಿರವಾಗಿದ್ದು, ಯಾವುದೇ ಬದಲಾವಣೆಗಳಿಲ್ಲಎಂದು ಸ್ಪಷ್ಟಪಡಿಸಿದರು.

ಚಿಕ್ಕಮಗಳೂರು: ಪ್ರೀತಿಗೆ ಒಪ್ಪದ ಮಹಿಳೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ!

ಹುಲಿ ಯೋಜನೆಯನ್ನು ಖಾಂಡ್ಯಕ್ಕೆ ತಂದ ಸರಕಾರದ ತಪ್ಪು ಧೋರಣೆ ಖಂಡನೀಯವಾಗಿದೆ. ನಮ್ಮ ಸಮಸ್ಯೆಗಳನ್ನು ಅರಿತು ಅಧಿಕಾರಿಗಳು ಸ್ಪಂದಿಸಿದಲ್ಲಿ ಡಿ. 7 ರಿಂದ 11ರವರೆಗೆ ನಡೆಯುವ ನಾಮಪತ್ರ ಸಲ್ಲಿಕೆಯಲ್ಲಿ ಸಕ್ರಿಯ ಸಹಕಾರ ನೀಡುತ್ತೇವೆ. ಸೂಕ್ತ ಸ್ಪಂದನೆ ದೊರೆಯದೇ ಇದ್ದಲ್ಲಿ ಮುಂದಿನ ಎಲ್ಲ ಚುನಾವಣೆಗೂ ಇದೇ ನಿಲುವು ಅನ್ವಯಿಸುತ್ತದೆ.
ಸೋಮೇಶ್‌, ಕಾಂಗ್ರೆಸ್‌ ಅಧ್ಯಕ್ಷರು, ಖಾಂಡ್ಯ ಹೋಬಳಿ

ಬಯಲುಸೀಮೆ ಪ್ರಾಂತ್ಯಗಳಲ್ಲಿಇಂತಹಾ ಯೋಜನೆಗಳನ್ನು ಹಮ್ಮಿಕೊಳ್ಳುವುದನ್ನು ಬಿಟ್ಟು ಮಲೆನಾಡನ್ನು ಆಯ್ಕೆ ಮಾಡಿ ಕೊಂಡಿರುವುದು ದುರಂತವಾಗಿದೆ. ಯೋಜನೆಯ ಹೋರಾಟದಲ್ಲಿ ಪ್ರಾಣ ಹೋದರೂ ಲೆಕ್ಕಿಸುವುದಿಲ್ಲ.
- ಎಚ್‌.ಎಸ್‌.ರವಿ, ಬಿಜೆಪಿ ಅಧ್ಯಕ್ಷರು, ಖಾಂಡ್ಯ ಹೋಬಳಿ.

ಮಲೆನಾಡಿಗರ ಬದುಕು ನಾಶ ಮಾಡುವ ಹುಲಿ ಯೋಜನೆಯ ವಿರುದ್ಧ ವ್ಯಾಪಕವಾಗಿ ಬೆಂಬಲ ವ್ಯಕ್ತವಾಗಿದ್ದು, ಕೇಂದ್ರದವರೆಗೂ ನಮ್ಮ ಕೂಗು ಕೇಳಿಸಬೇಕು. ಅಲ್ಲಿಯವರೆಗೆ ಹೋರಾಟ ನಿರಂತರವಾಗಿರುತ್ತದೆ.
-ಡಿ.ಎಚ್‌.ಜಯರಾಂ, ಜೆಡಿಎಸ್‌ ಅಧ್ಯಕ್ಷರು, ಖಾಂಡ್ಯ ಹೋಬಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ