ಆ್ಯಪ್ನಗರ

ಗೌಡಸಾರಸ್ವತ ಬ್ರಾಹ್ಮಣ ಸಮುದಾಯದಿಂದ ಖೇಳ್ಯಾ-ಮೇಳ್ಯಾ

ನಗರದ ಗೌಡಸಾರಸ್ವತ ಬ್ರಾಹ್ಮಣ ಸಮುದಾಯ ಪ್ರತಿ ವರ್ಷ ಸಂಕ್ರಾಂತಿ ಹಬ್ಬದಲ್ಲಿ ಆಚರಿಸುವ ಖೇಳ್ಯಾ-ಮೇಳ್ಯಾ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.

Vijaya Karnataka 14 Jan 2019, 5:00 am
ಚಿಕ್ಕಮಗಳೂರು : ನಗರದ ಗೌಡಸಾರಸ್ವತ ಬ್ರಾಹ್ಮಣ ಸಮುದಾಯ ಪ್ರತಿ ವರ್ಷ ಸಂಕ್ರಾಂತಿ ಹಬ್ಬದಲ್ಲಿ ಆಚರಿಸುವ ಖೇಳ್ಯಾ-ಮೇಳ್ಯಾ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.
Vijaya Karnataka Web CKM-13rudrap7


ನಗರದ ಶ್ರೀರಾಮಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಸ್ಪರ್ಧಾ ಕಾರ್ಯಕ್ರಮದಲ್ಲಿ ಗೌಡಸಾರಸ್ವತ ಬ್ರಾಹ್ಮಣ ಸಮುದಾಯ ಪುರುಷರು, ಮಹಿಳೆಯರು, ಮಕ್ಕಳು ವಯೋವೃದ್ಧರಾದಿಯಾಗಿ ಭಾಗವಹಿಸಿ ಆನಂದಿಸಿದರು. ಯುವಕರಿಗೆ ಕ್ರಿಕೆಟ್‌, ವಾಲೀಬಾಲ್‌ ಆಡಿಸಿದರೆ, ವಯಸ್ಸಾದವರಿಗೆ ಪಾಸಿಂಗ್‌ ದ ಬಾಲ್‌, ಬಾಂಬ್‌ ಇನ್‌ ದ ಸಿಟಿ, ಓಟದ ಸ್ಪರ್ಧೆ ನಡೆಸಲಾಯಿತು. ಮಹಿಳೆಯರಿಗೆ ಜ್ಞಾಪಕ ಶಕ್ತಿ ವೃದ್ಧಿಯ ಸ್ಪರ್ಧೆ,ಪುರುಷರಿಗೆ ಷಟಲ್‌ಬ್ಯಾಡ್ಮಿಂಟನ್‌ , ಮಹಿಳೆಯರಿಗೆ ಮ್ಯೂಜಿಕಲ್‌ ಚೇರ್‌ ಮತ್ತಿತರೆ ಆಟಗಳನ್ನು ಸಮುದಾಯದ ಯುವಕ, ಯುವತಿಯರು, ಮಕ್ಕಳು ಆಡಿ ಸಂತೋಷಪಟ್ಟರು.

ಜ.14 ಸಂಕ್ರಾಂತಿಯಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದು ಅಂದು ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಗುವುದು. ಕಳೆದ 18 ವರ್ಷದಿಂದ ನಮ್ಮ ಸಮುದಾಯ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದು ಹಬ್ಬಕ್ಕೂ ಹಿಂದಿನ ದಿನ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸುತ್ತೇವೆ. ಗೌಡಸಾರಸ್ವತ ಸಮುದಾಯ ಒಗ್ಗಟ್ಟಿನಿಂದ ಇದ್ದೇವೆ ಎಂಬುದನ್ನು ಸಾಂಕೇತಿಕವಾಗಿ ತೋರ್ಪಡಿಸವ ಉದ್ದೇಶದಿಂದ ಖೇಳ್ಯಾ ಮೇಳ್ಯಾ ಕಾರ್ಯಕ್ರಮ ಪ್ರತಿ ವರ್ಷ ನಡೆಸುತ್ತಿದ್ದೇವೆ ಎಂದು ಕಾರ್ಯಕ್ರಮ ಆಯೋಜಕ ರಾಯ್‌ನಾಯಕ್‌ ಹೇಳುತ್ತಾರೆ.ಸಮುದಾಯದ ಮುಖಂಡರಾದ ಪ್ರಕಾಶ್‌ಪೈ, ವೆಂಕಟೇಶ್‌ಪೈ, ಸತ್ಯನಾರಾಯಣ ಕಾಮತ್‌, ತಾರಾನಾಥಕಾಮತ್‌, ಅರಣ್‌ಪೈ, ಜ್ಯೋತಿಪೈ, ಪ್ರತಿಮಾಪೈ, ಶೋಭಾಹೆಗ್ಡೆ, ಜಯಾಪ್ರಭು, ವಿಶ್ವನಾಥ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ