ಆ್ಯಪ್ನಗರ

ಚಾರ್ಮಾಡಿ ಘಾಟ್‌: ಪೋಲಿಸರ ಕಣ್ತಪ್ಪಿಸಿ ಖಾಸಗಿ ಬಸ್ ಟ್ರಿಪ್, ಕೆಎಸ್‌ಆರ್‌ಟಿಸಿ ಸಂಚಾರಕ್ಕೆ ಆಗ್ರಹ

ಕೊಟ್ಟಿಗೆಹಾರ ಚಾರ್ಮಾಡಿ ಘಾಟ್‌ನಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧವಿದ್ದರೂ ಸೋಮವಾರ ಪೋಲಿಸರ ಕಣ್ತಪ್ಪಿಸಿ ಚಾರ್ಮಾಡಿ ಘಾಟ್‌ನಲ್ಲಿಖಾಸಗಿ ಬಸ್‌ ಸಂಚರಿಸಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Vijaya Karnataka Web 26 Nov 2019, 9:11 am
ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್‌ನಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧವಿದ್ದರೂ ಸೋಮವಾರ ಪೋಲಿಸರ ಕಣ್ತಪ್ಪಿಸಿ ಚಾರ್ಮಾಡಿ ಘಾಟ್‌ನಲ್ಲಿ ಖಾಸಗಿ ಬಸ್‌ ಸಂಚರಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.
Vijaya Karnataka Web charmadi ghat


ಸೋಮವಾರ ಬೆಳಗ್ಗೆ ಕೇರಳ ಮೂಲದ ಬಸ್ಸೊಂದು ಮಂಗಳೂರು ಕಡೆಯಿಂದ ಚಾರ್ಮಾಡಿ ಘಾಟ್‌ ಮೂಲಕ ಕೊಟ್ಟಿಗೆಹಾರಕ್ಕೆ ಬಂದಿದೆ. ಮಧ್ಯಾಹ್ನ ತಮಿಳುನಾಡು ಮೂಲದ ಬಸ್ಸೊಂದು ಕೊಟ್ಟಿಗೆಹಾರದ ಚೆಕ್‌ಪೋಸ್ಟ್‌ನಲ್ಲಿ ಪೋಲಿಸರ ಕಣ್ತಪ್ಪಿಸಿ ಚಾರ್ಮಾಡಿ ಘಾಟ್‌ ಮಾರ್ಗವಾಗಿ ಚಾರ್ಮಾಡಿ ಗ್ರಾಮದವರೆಗೂ ಸಂಚರಿಸಿದ್ದು, ಬಣಕಲ್‌ ಪೊಲೀಸರು ಚಾರ್ಮಾಡಿಯಲ್ಲಿ ಬಸ್‌ನ್ನು ತಡೆದು ಹಿಂದಕ್ಕೆ ಕಳಿಸಿದ್ದಾರೆ.

ಸರಕಾರಿ ಬಸ್‌ ಸಂಚಾರ ಆರಂಭಿಸಲು ಹಿಂದೇಟು ಹಾಕುವ ಅಧಿಕಾರಿಗಳು ಖಾಸಗಿ ಬಸ್‌ ಸಂಚರಿಸುವಾಗ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ಸಂಚರಿಸಿದ ಬಸ್ಸುಗಳು ಚಾರ್ಮಾಡಿ ಗ್ರಾಮದ ಗಡಿಯವರೆಗೂ ಸುರಕ್ಷಿತವಾಗಿ ತಲುಪಿದ್ದು, ಸರಕಾರಿ ಬಸ್ಸುಗಳು ಕೂಡ ಘಾಟ್‌ನಲ್ಲಿ ಸುಗಮವಾಗಿ ಸಂಚರಿಸಬಹುದು.

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಪ್ರಾರಂಭವಾಗಿದ್ದು, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿದೆ. ಆದ್ದರಿಂದ ಈ ಮಾರ್ಗದಲ್ಲಿ ಸರಕಾರಿ ಬಸ್‌ ಸಂಚಾರ ಆರಂಭಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ