ಆ್ಯಪ್ನಗರ

ಕುವೆಂಪು ವಿವಿ ಚೆಸ್‌ ಪಂದ್ಯಾವಳಿ

ಕುವೆಂಪು ವಿವಿ ಅಂತರ ಕಾಲೇಜು ಚೆಸ್‌ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಸಾಗರದ ಎಲ್‌ಬಿಎಸ್‌ಬಿಎಸ್‌ ಮತ್ತು ಮಹಿಳೆಯರ ವಿಭಾಗದಲ್ಲಿ ಶೃಂಗೇರಿಯ ಜೆಸಿಬಿಎಂ ಕಾಲೇಜು ಪ್ರಥಮ ಸ್ಥಾನಕ್ಕೆ ಭಾಜನವಾಗಿದೆ.

Vijaya Karnataka 10 Aug 2019, 9:21 pm
ಚಿಕ್ಕಮಗಳೂರು : ಕುವೆಂಪು ವಿವಿ ಅಂತರ ಕಾಲೇಜು ಚೆಸ್‌ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಸಾಗರದ ಎಲ್‌ಬಿಎಸ್‌ಬಿಎಸ್‌ ಮತ್ತು ಮಹಿಳೆಯರ ವಿಭಾಗದಲ್ಲಿ ಶೃಂಗೇರಿಯ ಜೆಸಿಬಿಎಂ ಕಾಲೇಜು ಪ್ರಥಮ ಸ್ಥಾನಕ್ಕೆ ಭಾಜನವಾಗಿದೆ.
Vijaya Karnataka Web kuvempu vv chess tournament
ಕುವೆಂಪು ವಿವಿ ಚೆಸ್‌ ಪಂದ್ಯಾವಳಿ


ಕುವೆಂಪು ವಿ.ವಿ.ಕಾಲೇಜು ಶಿಕ್ಷ ಣ ಇಲಾಖೆ ಮತ್ತು ಐಡಿಎಸ್‌ಜಿ ಸರಕಾರಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಮಲ್ಲೇಗೌಡ ಸಭಾಂಗಣದಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಚೆಸ್‌ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಒಂಬತ್ತು ಅಂಕಗಳನ್ನು ಗಳಿಸಿದ ಸಾಗರದ ಲಾಲ್‌ಬಹದ್ದೂರ್‌ಶಾಸ್ತ್ರಿ ಸ್ಮಾರಕ ಪದವಿ ಕಾಲೇಜಿನ ಅಕ್ಷ ಯಹೆಗ್ಡೆ, ಕೆ.ಎಂ.ವಿಕ್ರಮ್‌, ಕೆ.ಅಕ್ಷ ಯ ಮತ್ತು ಎಂ.ಜಿ.ಪವನ್‌ರನ್ನೊಳಗೊಂಡ ತಂಡ ಪುರುಷರ ವಿಭಾಗದ ಪ್ರಥಮಸ್ಥಾನ ಗಳಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ದೀಪಕ್‌, ಧನುಷ್‌ಚೌಹಾಣ್‌, ದರ್ಶನ್‌ ಮತ್ತು ಜೈಹಿಂದ್‌ರನ್ನೊಳಗೊಂಡ ಭದ್ರಾವತಿಯ ಸರ್‌.ಎಂ.ವಿ.ವಿಜ್ಞಾನಕಾಲೇಜಿನ ತಂಡ 8ಅಂಕಗಳಿಸುವ ಮೂಲಕ ದ್ವಿತೀಯ ಬಹುಮಾನ ಗಳಿಸಿತು. ಶಿವಮೊಗ್ಗದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಶೇಖರ್‌ನಾಯಕ್‌, ವಿನಯಕುಮಾರ, ಸುರೇಶ್‌ ಮತ್ತು ಕಿರಣ್‌ರನ್ನೊಳಗೊಂಡ ತಂಡ 7ಅಂಕಗಳಿಸುವ ಮೂಲಕ 3ನೇಸ್ಥಾನಕ್ಕೆ ತಳ್ಳಲ್ಪಟ್ಟಿತು.

ಮಹಿಳೆಯರ ವಿಭಾಗದಲ್ಲಿ ಶೃಂಗೇರಿಯ ಜೆಸಿಬಿಎಂ ಪದವಿ ಕಾಲೇಜಿನ ಲಕ್ಷ್ಮಿಪಾಟೀಲ, ಪ್ರೇಕ್ಷಾ, ಅನು ಮತ್ತು ಡಿ.ಸಿ.ಚಂದನಾರನ್ನೊಳಗೊಂಡ ತಂಡ 9ಅಂಕಗಳ ಮೂಲಕ ಅಗ್ರಸ್ಥಾನಕ್ಕೇರಿ ಪ್ರಥಮ ಬಹುಮಾನದೊಂದಿಗೆ ಟ್ರೋಫಿ ತನ್ನದಾಗಿಸಿಕೊಂಡಿತು. 8ಅಂಕ ಪಡೆದ ಎಚ್‌.ಜಿ.ವೀಣಾ, ಎಂ.ಎಲ್‌.ಗೀತಾ, ಅನೂಷಾ ಮತ್ತು ನಯನಾರ ಶಿಕಾರಿಪುರದ ಸರಕಾರಿ ಪ್ರಥಮದರ್ಜೆ ಕಾಲೇಜು ತಂಡ ದ್ವಿತೀಯ ಬಹುಮಾನ , ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಆಷಿಯಾ, ಮೇಧಿನಿ, ಸ್ವರ್ಣ ಮತ್ತು ಬಿ.ಶ್ರೀನಿಧಿ ಅವರ ತಂಡ 6ಅಂಕಗಳಿಸಿ 3ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ರಾಷ್ಟ್ರೀಯ ಯುವಪ್ರಶಸ್ತಿ ಪುರಸ್ಕೃತ ಎಚ್‌.ಎಸ್‌.ಪುಟ್ಟಸ್ವಾಮಿ, ಕುವೆಂಪು ವಿ.ವಿ.ದೈಹಿಕಶಿಕ್ಷ ಣ ನಿರ್ದೇಶಕ ಡಾ.ಎಸ್‌.ಎಂ.ಪ್ರಕಾಶ್‌ ಬಹುಮಾನ ವಿತರಿಸಿದರು. ಐಡಿಎಸ್‌ಜಿ ಕಾಲೇಜು ಪ್ರಾಂಶುಪಾಲ ಡಾ.ಎಸ್‌.ಇ.ನಟರಾಜ್‌ ಮುಕ್ತಾಯ ಸಮಾರಂಭದ ಅಧ್ಯಕ್ಷ ತೆ ವಹಿಸಿದ್ದರು. ರಾಷ್ಟ್ರೀಯ ಚೆಸ್‌ ತೀರ್ಪುಗಾರ ಎ.ಜೆ.ನವೀನ್‌, ಮುಖ್ಯಸಂಯೋಜಕ ಎಸ್‌.ವಿ.ನಾಗರಾಜ್‌, ಪಂದ್ಯಾವಳಿಯ ಸಂಚಾಲಕ ಬಿ.ಯೋಗೀಶ್‌ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ