ಆ್ಯಪ್ನಗರ

ಸಂಘವನ್ನು ಜವಾಬ್ದಾರಿಯಿಂದ ಮುನ್ನಡೆಸಿ

ಸಹಕಾರ ಸಂಘದಲ್ಲಿಪಾಲ್ಗೊಳ್ಳುವ ಮೂಲಕ ಸಾಲ ಪಡೆದು ಅದನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿ ಆರ್ಥಿಕವಾಗಿ ಸಬಲರಾಗಬೇಕೆಂದು ಮಾಜಿ ಸಚಿವೆ ಹಾಗೂ ಚೈತನ್ಯ ಪರಿಶಿಷ್ಟ ಜಾತಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಮೋಟಮ್ಮ ಹೇಳಿದರು.

Vijaya Karnataka 24 Sep 2019, 5:00 am
ಮೂಡಿಗೆರೆ : ಸಹಕಾರ ಸಂಘದಲ್ಲಿಪಾಲ್ಗೊಳ್ಳುವ ಮೂಲಕ ಸಾಲ ಪಡೆದು ಅದನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿ ಆರ್ಥಿಕವಾಗಿ ಸಬಲರಾಗಬೇಕೆಂದು ಮಾಜಿ ಸಚಿವೆ ಹಾಗೂ ಚೈತನ್ಯ ಪರಿಶಿಷ್ಟ ಜಾತಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಮೋಟಮ್ಮ ಹೇಳಿದರು.
Vijaya Karnataka Web lead the association responsibly
ಸಂಘವನ್ನು ಜವಾಬ್ದಾರಿಯಿಂದ ಮುನ್ನಡೆಸಿ


ಅವರು ಪಟ್ಟಣದ ಜೇಸಿ ಭವನದಲ್ಲಿಭಾನುವಾರ ಹಮ್ಮಿಕೊಂಡಿದ್ದ ಚೈತನ್ಯ ಪರಿಶಿಷ್ಟ ಜಾತಿ ಮಹಿಳಾ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇವಲ 13 ಲಕ್ಷ ರೂ.ನಲ್ಲಿಪ್ರಾರಂಭವಾದ ಸಂಘವು ಪ್ರಸ್ತುತ 1 ಕೋಟಿಯಷ್ಟು ವ್ಯವಹಾರ ಮಾಡಲಾಗಿದೆ. ಇದು ಮೋಟಮ್ಮ ಅವರ ಹಣವಲ್ಲ. ನಿಮ್ಮೆಲ್ಲರ ಹಣ. ಸಂಘದಲ್ಲಿಸಾಲ ಪಡೆದು ಸಮರ್ಪಕವಾಗಿ ಹಿಂತಿರುಗಿಸಿದರೆ ಎಲ್ಲರಿಗೂ ಸಾಲ ಕೊಡಲು ಸಹಕಾರಿಯಾಗುತ್ತದೆ. ರಾಜ್ಯದಲ್ಲಿಯೇ ಅತ್ಯುತ್ತಮ ಸಂಘವೆಂಬ ಹೆಗ್ಗಳಿಕೆ ಪಡೆದು ಸೇವಾರತ್ನ ಪ್ರಶಸ್ತಿ ಪಡೆಯಲು ಶ್ರಮಿಶಬೇಕೆಂದು ಹೇಳಿದರು.

ಬೆಂಗಳೂರು ಸಹಕಾರ ಸಂಘದ ಜಂಟಿ ನಿಬಂಧಕ ಎಚ್‌.ಸಿ.ಜೋಷಿ ಮಾತನಾಡಿ, ಎಲ್ಲಾಮಹಿಳೆಯರು ಸಂಘದ ಚಟುವಟಿಕೆಯಲ್ಲಿಪಾಲ್ಗೊಳ್ಳುವ ಮೂಲಕ ನಾಯಕತ್ವದ ಗುಣ ಬೆಳೆಸಿಕೊಂಡು ಉನ್ನತ ಸ್ಥಾನಕ್ಕೇರಲು ಶ್ರಮಿಸಬೇಕೆಂದು ಸಲಹೆ ನೀಡಿದರು.

ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಯೋಗೇಶ್‌ ಮಾತನಾಡಿ, 1038 ಸದಸ್ಯರನ್ನು ಹೊಂದಿದ ನಮ್ಮ ಸಂಘವು 1,07,37787 ರೂ ವಹಿವಾಟು ನಡೆಸಿದೆ. ಸುಮಾರು 25 ಲಕ್ಷ ಠೇವಣಿ ಮಾಡಿದ್ದಾರೆ. ಸಂಘದ 113 ಸದಸ್ಯರು ಮಾಡಿಕೊಂಡಿರುವ ಸ್ವ ಸಹಾಯ ಸಂಘಕ್ಕೆ 20,36,768 ರೂ. ಸಾಲ ನೀಡಲಾಗಿದೆ ಎಂದು ವಿವರಿಸಿದರು.

ಅತ್ಯುತ್ತಮ ವ್ಯವಹಾರ ಮಾಡಿದ ಸ್ವ ಸಹಾಯ ಸಂಘ, ಶಿಕ್ಷಣ ಮತ್ತು ಕ್ರೀಡೆಯಲ್ಲಿಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.

ಸಂಘದ ಉಪಾಧ್ಯಕ್ಷೆ ಎಚ್‌.ಎಂ.ಜಯಲಕ್ಷಿತ್ರ್ಮ, ನಿರ್ದೇಶಕರಾದ ಎಂ.ಎಚ್‌.ಸೀತಮ್ಮ, ಲಕ್ಷಿತ್ರ್ಮೕರಾಮಯ್ಯ, ನೀಲಾ ಅನಂತ್‌, ಜಾನಕಿ ರಮೇಶ್‌, ಪುಷ್ಪ ಕೇಸರಕಿ, ರುಕ್ಮಿಣಿ ದೇವರಾಜ್‌, ಸಿ.ಎಂ.ಮಂಜುಳ, ಸರೋಜ ಚಂದ್ರು, ನೀಲಯ್ಯ ಬ್ರಹ್ಮದೇವ್‌, ಜಯಂತಿ ರಮೇಶ್‌, ರತ್ನ ರಮೇಶ್‌, ಸರಸ್ವತಿ ಸಾಗರ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ