ಆ್ಯಪ್ನಗರ

ಕಟ್ಟುಕತೆ ಬಿಡಿ, ವಾಸ್ತವ ವರದಿ ನೀಡಿ

ಅಧಿಕಾರಿಗಳು ಕುಳಿತಲ್ಲಿಯೇ ಕಟ್ಟುಕತೆ ಕಟ್ಟುವುದನ್ನು ಬಿಟ್ಟು ನೆರೆ ಸಂತ್ರಸ್ತರ ಮನೆ ಬಾಗಿಲಿಗೆ ಹೋಗಿ ವಾಸ್ತವ ವರದಿ ತಯಾರು ಮಾಡಬೇಕು.ಆಗಿರುವ ನಷ್ಟ ಎಷ್ಟು ಎಂದು ಅಂದಾಜು ಮಾಡಿ ರೈತನಿಗೆ ಸಮಾಧಾನ ಆಗುವಂತ ಪರಿಹಾರ ನೀಡಬೇಕು ಎಂದು ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದರಶೇಖರ್‌ ಆಗ್ರಹಿಸಿದರು.

Vijaya Karnataka 20 Sep 2019, 5:00 am
ಚಿಕ್ಕಮಗಳೂರು : ಅಧಿಕಾರಿಗಳು ಕುಳಿತಲ್ಲಿಯೇ ಕಟ್ಟುಕತೆ ಕಟ್ಟುವುದನ್ನು ಬಿಟ್ಟು ನೆರೆ ಸಂತ್ರಸ್ತರ ಮನೆ ಬಾಗಿಲಿಗೆ ಹೋಗಿ ವಾಸ್ತವ ವರದಿ ತಯಾರು ಮಾಡಬೇಕು.ಆಗಿರುವ ನಷ್ಟ ಎಷ್ಟು ಎಂದು ಅಂದಾಜು ಮಾಡಿ ರೈತನಿಗೆ ಸಮಾಧಾನ ಆಗುವಂತ ಪರಿಹಾರ ನೀಡಬೇಕು ಎಂದು ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದರಶೇಖರ್‌ ಆಗ್ರಹಿಸಿದರು.
Vijaya Karnataka Web leave the fabrication and issue a factual report
ಕಟ್ಟುಕತೆ ಬಿಡಿ, ವಾಸ್ತವ ವರದಿ ನೀಡಿ


ಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಅತಿವೃಷ್ಟಿ ಪ್ರದೇಶದ ಕೆಲವು ಗ್ರಾಮಗಳಿಗೆ ಇನ್ನೂ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ.ಸ್ಥಳಕ್ಕೆ ಬಂದ ರಾಜಕಾರಣಿ ಮತ್ತು ಮೇಲಧಿಕಾರಿಗಳಿಗೆ ಕಟ್ಟುಕತೆಯ ವರದಿ ನೀಡುತ್ತಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನೆ ಹೇಗಿತ್ತು,ಈಗ ಹೇಗಾಗಿದೆ ಎಂಬ ಪರಿಕಲ್ಪನೆಯೇ ಇಲ್ಲ. ವಾಸ್ತವವಾಗಿ ಮನೆ ಬಳಿ ಹೋದಾಗ ಸಮಸ್ಯೆಯ ಆಳ, ಅಗಲ ತಿಳಿಯಲಿದೆ.ಇತ್ತೀಚೆಗೆ ಮೃತಪಟ್ಟ ರೈತ ಚನ್ನಪ್ಪಗೌಡರ ಮನೆಗೆ ಈವರೆಗೂ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ. ಒಟ್ಟಾರೆ ನೆರೆ ಸಮೀಕ್ಷೆ ಕಾರ್ಯ ಹಿನ್ನೆಡೆಯಾಗಿದೆ ಎಂದು ದೂರಿದರು.

ನೆರೆ ಸಂತ್ರಸ್ತರ ಹಳ್ಳಿಗಳಿಗೆ ಜಿಲ್ಲಾಉಸ್ತುವಾರಿ ಸಚಿವರು ತಮ್ಮ ತಂಡ ಕರೆದುಕೊಂಡು ಹೋಗಲಿ ಅಥವಾ ಜಿಲ್ಲಾಧಿಕಾರಿಗಳು ಅಧಿಕಾರಿಗಳ ತಂಡ ದೊಂದಿಗೆ ಸ್ಥಳಪರಿಶೀಲಿಸಿ ಸರಕಾರಕ್ಕೆ ನೈಜ ವರದಿ ನೀಡಬೇಕು ಎಂದು ಆಗ್ರಹಿಸಿದರು.ಮೂಡಿಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ್ದಾಗ ಅಲ್ಲಿದ್ದ ನೆರೆ ಸಂತ್ರಸ್ತರು ನಮಗೆ ಸರಕಾರದಿಂದ ಚೆಕ್‌ ನೀಡಿದ್ದಾರೆ. ಆದರೆ, ಬ್ಯಾಂಕಿನಲ್ಲಿಚೆಕ್‌ ಪಾಸಾಗುತ್ತಿಲ್ಲಎಂದು ಅಳಲು ತೋಡಿಕೊಂಡಿದ್ದಾರೆ. ಇಂತಹ ಅವ್ಯವಸ್ಥೆ ಮುಂದುವರಿದಿದೆ. ಈ ಬಗ್ಗೆ ಜಿಲ್ಲಾಡಳಿತ ಶೀಘ್ರ ಉತ್ತರ ಕೊಡಬೇಕಿತ್ತು ಕೊಟ್ಟಿಲ್ಲಎಂದರು.

ಪರಿಹಾರ ಕಾರ್ಯಕ್ರಮಗಳು ತಕ್ಷಣ ಆಗಬೇಕು.ಹಳ್ಳಿಗಳಲ್ಲಿನಾಶವಾಗಿರುವ ಜಮೀನಿಗೆ ಪರಾರ‍ಯಯವಾಗಿ ಭೂಮಿ ನೀಡಲು ರಾಜ್ಯ ಸರಕಾರ ತೀರ್ಮಾನ ತೆಗೆದುಕೊಳ್ಳಬೇಕು.ಸಂಪೂರ್ಣ ಮನೆ ಕಳೆದುಕೊಂಡವರಿಗೆ ಕೂಡಲೇ ಪರಾರ‍ಯಯ ವ್ಯವಸ್ಥೆ ಶೀಘ್ರದಲ್ಲಿಕಲ್ಪಿಸಬೇಕು. ಸಣ್ಣ ರೈತರು ತಮ್ಮ ಹಿಡುವಳಿ ಜಮೀನಿನ ಪಕ್ಕದಲ್ಲಿದ್ದ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಮಾಡಿಕೊಂಡಿದ್ದಾರೆ. ವಿವಿಧ ನಮೂನೆಯಲ್ಲಿಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನು ಸರಕಾರ ಪರಿಗಣಿಸಬೇಕು ಎಂದು ಒತ್ತಾಯಿಸಿದರು.ಒಂದು ವೇಳೆ ಸರಕಾರ ಸಣ್ಣ ರೈತರ ಸಮಸ್ಯೆಯಿಂದ ದೂರ ಉಳಿಯುವ ಪ್ರಯತ್ನ ಮಾಡಿದರೆ ನಾವೇ ಖದ್ದಾಗಿ ನಿಂತು ಸಂತ್ರಸ್ತರಿಗೆ ಭೂಮಿ ಗುರುತು ಮಾಡಿಕೊಡಲಿದ್ದೇವೆ ಎಂದು ಎಚ್ಚರಿಸಿದರು.

ಚನ್ನಪ್ಪಗೌಡ ಒಕ್ಕಲಿಗರಲ್ಲವೆ ?: ವರ್ಗ, ಜಾತಿ ಎಂದು ಬೆಂಗಳೂರಲ್ಲಿಪ್ರತಿಭಟನೆ ನಡೆಸುವ ಒಕ್ಕಲಿಗರು ಚನ್ನಪ್ಪಗೌಡ ಅವರನ್ನು ತಮ್ಮವರು ಎಂದು ಏಕೆ ಭಾವಿಸಲಿಲ್ಲ? ಚನ್ನಪ್ಪಗೌಡರ ಸಾವು ನಿಮಗೆ ಅನ್ಯಾಯ ಅಂತ ಕಾಣಲಿಲ್ಲವೇ ಎಂದು ಪ್ರಶ್ನಿಸಿ ಒಂದೇ ಒಂದು ಒಕ್ಕಲಿಗ ಸಂಘಟನೆಗಳ ಮುಖಂಡರು ಈವರೆಗೂ ಚನ್ನಪ್ಪಗೌಡರ ಮನೆಗೆ ಬಂದು ಸಾಂತ್ವನ ಹೇಳಲಿಲ್ಲ. ಇದು ಆ ಸಮುದಾಯ ನಾಚಿಕೆ ಪಡುವಂತಹ ಸಂಗತಿ. ಇನ್ನಾದರೂ ಸಮುದಾಯದ ಆಧಾರದಲ್ಲಿಕಷ್ಟಕ್ಕೆ ಸ್ಪಂದಿಸುವಂತ ಧೋರಣೆ ನಿಮ್ಮದಾಗಲಿ ಎಂದು ಹೇಳಿದರು.ರೈತ ಮುಖಂಡರಾದ ದುಗ್ಗಪ್ಪಗೌಡ, ಶಿವಪ್ಪ, ನಾಗಣ್ಣ, ಬೈರೇಗೌಡ, ದಯಾಕರ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ