ಆ್ಯಪ್ನಗರ

ಚಿರತೆ ಪ್ರತ್ಯಕ್ಷ , ಗ್ರಾಮಸ್ಥರ ಆತಂಕ

ತಾಲೂಕಿನ ಕಾನಗೊಂಡನಹಳ್ಳಿ ಸಮೀಪದ ಗುಡ್ಡದಹಟ್ಟಿಯಲ್ಲಿ ಗುರುವಾರ ಸಂಜೆ ಚಿರತೆ ಪ್ರತ್ಯಕ್ಷ ವಾಗಿದ್ದು, ಸುತ್ತಮುತ್ತಲಿನ ಗಾಮಸ್ಥರು ಆತಂಕಗೊಂಡಿದ್ದಾರೆ.

Vijaya Karnataka 29 Mar 2019, 9:20 pm
ಕಡೂರು : ತಾಲೂಕಿನ ಕಾನಗೊಂಡನಹಳ್ಳಿ ಸಮೀಪದ ಗುಡ್ಡದಹಟ್ಟಿಯಲ್ಲಿ ಗುರುವಾರ ಸಂಜೆ ಚಿರತೆ ಪ್ರತ್ಯಕ್ಷ ವಾಗಿದ್ದು, ಸುತ್ತಮುತ್ತಲಿನ ಗಾಮಸ್ಥರು ಆತಂಕಗೊಂಡಿದ್ದಾರೆ.
Vijaya Karnataka Web leopard looks villagers anxiety
ಚಿರತೆ ಪ್ರತ್ಯಕ್ಷ , ಗ್ರಾಮಸ್ಥರ ಆತಂಕ


ಗುಡ್ಡದಹಟ್ಟಿಯ ಮೂರ್ತಣ್ಣ, ಆಕಾಶ್‌ ಮತ್ತಿತರರು ಬೆಳಗ್ಗೆ ಚಿರತೆಯನ್ನು ನೋಡಿರುವುದಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ ಅರಣ್ಯಾಧಿಕಾರಿ ಹಾಗೂ ಅವರ ವಾಹÜನವನ್ನು ಲೋಕಸಭೆ ಚುನಾವಣೆ ಪ್ರಕ್ರಿಯೆಗೆ ಪಡೆದಿರುವುದರಿಂದ, ಗ್ರಾಮಕ್ಕೆ ತೆರಳಲು ವಾಹನವಿಲ್ಲದೆ ಸಂಜೆ ವೇಳೆಗೆ ಗ್ರಾಮಕ್ಕೆ ತೆರಳಿ ಬೋನು ಇಡಲಾಗಿದೆ. ಚಿರತೆಯ ಹೆಜ್ಜೆ ಗುರುತುಗಳನ್ನು ಗುರುತಿಸಲಾಗಿದೆ, ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಅರಣ್ಯಾಧಿಕಾರಿ ಪಾಲಕ್ಷ ಪ್ಪ ತಿಳಿಸಿದರು.

ಅರಣ್ಯಾಧಿಕಾರಿಗಳನ್ನು ಹಾಗೂ ಇಲಾಖೆ ವಾಹನವನ್ನು ಚುನಾವಣೆಗೆ ಬಳಸಿಕೊಂಡಿರುವುದರಿಂದ ಸಮಸ್ಯೆಯಾಗಿದೆ. ಈ ರೀತಿ ಅಧಿಕಾರಿಗಳನ್ನು ಚುನಾವಣೆಗೆ ಬಳಿಸಿಕೊಳ್ಳಬಾರದು ಎಂದು ಗ್ರಾಮಸ್ಥರು ಚುನಾವಣೆ ಆಯೋಗಕ್ಕೆ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ