ಆ್ಯಪ್ನಗರ

ಪ್ರಕೃತಿ ಪೋಷಣೆ ನಿತ್ಯದ ಕಾರ್ಯವಾಗಲಿ

ಪ್ರಕೃತಿ ಪೋಷಣೆ ಪ್ರತಿ ವಿದ್ಯಾರ್ಥಿಯ ದಿನನಿತ್ಯದ ಕಾರ್ಯವಾಗಬೇಕು ಎಂದು ನಮ್ಮ ಪ್ರಶಮನಿ ಮಕ್ಕಳ ಕೂಟದ ಸಂಚಾಲಕ ವಿದ್ಯಾರ್ಥಿ ಪ್ರತ್ಯುಷ್‌ ಯು.ರಾವ್‌ ಹೇಳಿದರು.

Vijaya Karnataka 17 Jun 2019, 5:00 am
ಕೊಪ್ಪ : ಪ್ರಕೃತಿ ಪೋಷಣೆ ಪ್ರತಿ ವಿದ್ಯಾರ್ಥಿಯ ದಿನನಿತ್ಯದ ಕಾರ್ಯವಾಗಬೇಕು ಎಂದು ನಮ್ಮ ಪ್ರಶಮನಿ ಮಕ್ಕಳ ಕೂಟದ ಸಂಚಾಲಕ ವಿದ್ಯಾರ್ಥಿ ಪ್ರತ್ಯುಷ್‌ ಯು.ರಾವ್‌ ಹೇಳಿದರು.
Vijaya Karnataka Web CKM-16KPH1


ಪಟ್ಟಣದ ಪ್ರಶಮನಿ ಆಸ್ಪತ್ರೆ ಹಿಂಭಾಗದಲ್ಲಿ ಶನಿವಾರ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಹಣ್ಣಿನ ಗಿಡ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗೆ ಮನೆಗೆಲಸದಂತೆ ಗಿಡದ ಪೋಷಣೆ ಜವಾಬ್ದಾರಿ ಇರಬೇಕು. ಪರಿಸರಕ್ಕೂ ನಮ್ಮ ಜೀವನಕ್ಕೆ ಪರಸ್ಪರ ಸಂಬಂಧವಿದೆ ಎಂಬ ಅಂಶವನ್ನು ಅವರಿಗೆ ಮನದಟ್ಟು ಮಾಡಿಕೊಡಬೇಕು. ಅವರು ಗಿಡವನ್ನು ತಮ್ಮ ಬಳಗದಂತೆ ಪ್ರೀತಿಸುವಂತಾಗಬೇಕು. ಆಗ ಮಾತ್ರ ನಿಜವಾದ ಪರಿಸರ ಪ್ರೇಮ ಬೆಳೆಯುತ್ತದೆ ಎಂದರು.

ಅವರು ನಮ್ಮ ಪ್ರಶಮನಿ ಮಕ್ಕಳ ಕೂಟದ ಸದಸ್ಯ ಮಕ್ಕಳಿಗೆ ಒಂದೊಂದು ಹಣ್ಣಿನ ಗಿಡ ವಿತರಿಸಿ ಅದರ ಪೋಷಣೆ ಜವಾಬ್ದಾರಿ ವಹಿಸಿದರು.

ಅಲ್ಲಿ ಲಿಚ್ಚಿ, ಬೆಣ್ಣೆ ಹಣ್ಣು, ಮಲಯನ್‌ ಸೇಬು ಮತ್ತಿತರ ವಿಶಿಷ್ಟ ತಳಿಯ ಹತ್ತಾರು ಸಸಿ ನೆಡಲಾಯಿತು.

ಪ್ರಶಮನಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಉದಯಶಂಕರ್‌, ಆಡಳಿತಾಧಿಕಾರಿ ರೇಖಾ ಯು.ಶಂಕರ್‌ ಮತ್ತು ಸಿಬ್ಬಂದಿ ಸಹಕರಿಸಿದರು. ಅವರು ಗಿಡಕ್ಕೆ ರಕ್ಷ ಣಾ ಕವಚ ತೊಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ