ಆ್ಯಪ್ನಗರ

‘ಮತ್ತೆ ಕಲ್ಯಾಣ’ದ ಯಶಸ್ಸಿಗೆ ಶ್ರಮಿಸೋಣ

ಆಗಸ್ಟ್‌ 1 ರಂದು ಪಟ್ಟಣದ ಅಕ್ಕನಾಗಲಾಂಬಿಕೆ ಗದ್ದುಗೆಯಲ್ಲಿ ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶ್ರೀಗಳ ಸಾನಿಧ್ಯದಲ್ಲಿ ನಡೆಯುವ 'ಮತ್ತೆ ಕಲ್ಯಾಣ' ಕಾರ್ಯಕ್ರಮದ ಪೂರ್ವಭಾವಿ ಸಭೆ ಶನಿವಾರ ಅಂಬೇಡ್ಕರ್‌ ಭವನದಲ್ಲಿ ನಡೆಯಿತು.

Vijaya Karnataka 9 Jun 2019, 10:11 pm
ತರೀಕೆರೆ : ಆಗಸ್ಟ್‌ 1 ರಂದು ಪಟ್ಟಣದ ಅಕ್ಕನಾಗಲಾಂಬಿಕೆ ಗದ್ದುಗೆಯಲ್ಲಿ ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶ್ರೀಗಳ ಸಾನಿಧ್ಯದಲ್ಲಿ ನಡೆಯುವ 'ಮತ್ತೆ ಕಲ್ಯಾಣ' ಕಾರ್ಯಕ್ರಮದ ಪೂರ್ವಭಾವಿ ಸಭೆ ಶನಿವಾರ ಅಂಬೇಡ್ಕರ್‌ ಭವನದಲ್ಲಿ ನಡೆಯಿತು.
Vijaya Karnataka Web CKM-8TARIKERE1


ಶಾಸಕ ಡಿ.ಎಸ್‌.ಸುರೇಶ್‌ ಮಾತನಾಡಿ, ಶ್ರಾವಣ ಸಂಜೆ ಕಾರ್ಯಕ್ರಮದ ಬದಲಾಗಿ ಮತ್ತೆ ಕಲ್ಯಾಣ ಎನ್ನುವ ಆಗಸ್ಟ್‌ ತಿಂಗಳು 30 ದಿನ ಪ್ರತೀ ಜಿಲ್ಲೆಯಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮ ನಡೆಸಲು ಶ್ರೀಗಳ ನಿರ್ದೇಶನ ಇದೆ. ಶಿವಶರಣರ ವಿಚಾರಧಾರೆಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಶರಣರ ಚಿಂತನೆಗಳನ್ನು ಜನರಿಗೆ ತಿಳಿಸುವುದಾಗಿದೆ. ಪಕ್ಷಾತೀತ, ರಾಜಕಿಯೇತರ ಕಾರ್ಯಕ್ರಮ ಇದಾಗಿದ್ದು, ಎಲ್ಲಾ ಸಮುದಾಯದವರು ಒಗ್ಗಟ್ಟಾಗಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸೋಣ ಎಂದರು.

ಸಾಹಿತಿ ಚಟ್ನಹಳ್ಳಿ ಮಹೇಶ್‌ ಮಾತನಾಡಿ, ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ತರೀಕೆರೆ ಪಟ್ಟಣದಲ್ಲಿ ಏರ್ಪಡಿಸಿರುವುದರಿಂದ ಎಲ್ಲ ತಾಲೂಕಿನ ಮುಖಂಡರು ಸಮಿತಿಯಲ್ಲಿರಬೇಕು. ಸುಮಾರು ಹತ್ತು ಸಾವಿರ ಜನರನ್ನು ಸೇರಿಸಿ, ಬದ್ಧತೆಯಿಂದ ಕಾರ್ಯಕ್ರಮ ನಡೆಸಲು ಉದ್ದೇಶಿಸಿರುವುದರಿಂದ ಶಾಸಕರೊಂದಿಗೆ ಪಕ್ಷಾತೀತವಾಗಿ ಎಲ್ಲರೂ ಸಹಕರಿಸಬೇಕು ಎಂದರು.

ಕಾರ್ಯಕ್ರಮದ ಪ್ರಯುಕ್ತ ಸಮಿತಿಗಳನ್ನು ರಚಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷ ರಾಗಿ ಶಾಸಕ ಡಿ.ಎಸ್‌.ಸುರೇಶ್‌, ಹಣಕಾಸು ಸಮಿತಿಯ ಅಧ್ಯಕ್ಷ ರಾಗಿ ಜಿ.ಪಂ.ಉಪಾಧ್ಯಕ್ಷ ಕೆ.ಆರ್‌.ಆನಂದಪ್ಪ, ದಾಸೋಹ ಸಮಿತಿ ಅಧ್ಯಕ್ಷ ರಾಗಿ ದೋರನಾಳು ಪರಮೇಶ್‌, ವೇದಿಕೆ ಸಮಿತಿ ಅಧ್ಯಕ್ಷ ರಾಗಿ ಎ.ಸಿ.ಚಂದ್ರಪ್ಪ, ಮೆರವಣಿಗೆ ಸಮಿತಿ ಅಧ್ಯಕ್ಷ ರಾಗಿ ಗೊಲ್ಲರಹಳ್ಳಿ ರಂಗಪ್ಪ, ಮಹಿಳಾ ಸಮಿತಿ ಅಧ್ಯಕ್ಷ ರಾಗಿ ಶ್ಯಾಮಲ ಮಂಜುನಾಥ್‌, ಪ್ರಚಾರ ಸಮಿತಿ ಅಧ್ಯಕ್ಷ ರಾಗಿ ಅನಂತನಾಡಿಗ್‌, ಸಂವಾದ ಸಮಿತಿ ಅಧ್ಯಕ್ಷ ರಾಗಿ ಎನ್‌.ವೀರಭದ್ರಪ್ಪ, ಆರೋಗ್ಯ ಮತ್ತು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಾಗಿ ಕೆ.ಆರ್‌.ಧೃವಕುಮಾರ್‌ ಇವರನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷ ತೆಯನ್ನು ಸಮಾಜದ ಹಿರಿಯ ಮುಖಂಡ ಗಂಗಾಧರಪ್ಪ ವಹಿಸಿದ್ದರು. ಜಿ.ಪಂ.ಸದಸ್ಯೆ ರಾಧಾ ಶಿವಕುಮಾರ್‌, ಮುಖಂಡರಾದ ಕಲ್ಮುರುಡಪ್ಪ, ತಮ್ಮಯ್ಯ, ಏಕೋರಾಮಸ್ವಾಮಿ, ಮಿಲ್ಟ್ರೀ ಶ್ರೀನಿವಾಸ್‌, ದಲಿತ ಮುಖಂಡ ಕೆ.ನಾಗರಾಜ್‌, ಶ್ರೀಕಂಠಮೂರ್ತಿ, ಉಮಾಪ್ರಕಾಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ