ಆ್ಯಪ್ನಗರ

ಮಹಾಪುರುಷರ ಜೀವನ, ಆದರ್ಶ ಅರಿಯೋಣ

ಮಹಾಪುರುಷರ ಜೀವನ ಮತ್ತು ಹೋರಾಟವನ್ನು ಅರಿತು ಅವರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದು ನಾರಾಯಣಗುರು ಸಮಾಜ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಪ್ರವೀಣ್‌ ಪೂಜಾರಿ ಹೇಳಿದರು.

Vijaya Karnataka 23 Jun 2019, 5:00 am
ಕೊಟ್ಟಿಗೆಹಾರ : ಮಹಾಪುರುಷರ ಜೀವನ ಮತ್ತು ಹೋರಾಟವನ್ನು ಅರಿತು ಅವರ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದು ನಾರಾಯಣಗುರು ಸಮಾಜ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಪ್ರವೀಣ್‌ ಪೂಜಾರಿ ಹೇಳಿದರು.
Vijaya Karnataka Web CKM-22KTG6


ಚೇಗು ಗ್ರಾಮದ ಸಮುದಾಯಭವನದಲ್ಲಿ ನಡೆದ ಬ್ರಹ್ಮ ಶ್ರೀ ನಾರಾಯಣಗುರು ಪೂಜೆ ಮತ್ತು ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆಯ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜೀವನದ ಸಂಸ್ಕಾರ, ಸಂಸ್ಕೃತಿಗಳ ಹರಿಕಾರರಾಗಿ, ಸಮಾಜದಲ್ಲಿ ಅವತಾರ ಪುರುಷರೆನಿಸಿ ಜಾತಿ ಮತ ಬೇದವಿಲ್ಲದೇ ಎಲ್ಲರ ಅಭ್ಯುದಯಕ್ಕೆ ಕಾರಣರಾದವರು ನಾರಾಯಣಗುರುಗಳು. ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಳುವಳಿಯ ಮೂಲಕ ಅನಿಷ್ಟ ಪದ್ಧತಿಗಳನ್ನು ಕೊನೆಗಾಣಿಸಿದ ನಾರಾಯಣಗುರುಗಳ ತತ್ವ ಆದರ್ಶ ಮನೆಮನೆಗೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದರು. ತಾಲೂಕು ಉಪಾಧ್ಯಕ್ಷ ರವಿ ಪೂಜಾರಿ, ಕಾರ್ಯದರ್ಶಿ ತಾರು ಪೂಜಾರಿ, ಸಂಘಟನಾ ಕಾರ್ಯದರ್ಶಿ ಅರುಣ್‌ ಪೂಜಾರಿ, ಬಣಕಲ್‌ ಹೋಬಳಿ ಘಟಕ ಅಧ್ಯಕ್ಷ ಸುರೇಶ್‌ ಪೂಜಾರಿ, ಬಿಳುಗುಳ ಘಟಕದ ಅಧ್ಯಕ್ಷ ವಿಶ್ವನಾಥ್‌ ಪೂಜಾರಿ, ನಗರ ಅಧ್ಯಕ್ಷ ರಾಜಶೇಖರ್‌ ಪೂಜಾರಿ, ಸದಸ್ಯರಾದ ಸುಂದರ್‌ ಜಾರ್ಗಲ್‌, ಯುವವಾಹಿನಿ ಸಂಚಾಲಕ ಸಾಗರ್‌ ಪೂಜಾರಿ, ನಾಗರಾಜ್‌ ಪೂಜಾರಿ, ಜಗದೀಶ್‌ ಟೈಲರ್‌ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ