ಆ್ಯಪ್ನಗರ

ಪ್ಯಾರಾಲಿಂಪಿಕ್ಸ್‌ ಅರ್ಹತಾ ಸುತ್ತಿಗೆ ಬಾಳೂರಿನ ರಕ್ಷಿತಾ ಆಯ್ಕೆ

ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಅಥ್ಲೆಟಿಕ್‌ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದಿದ್ದ ಬಾಳೂರು ಹೋಬಳಿಯ ಗುಡ್ನಳ್ಳಿ ಗ್ರಾಮದ ರಕ್ಷಿತಾರಾಜು, 2020ರಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾಳೆ.

Vijaya Karnataka 21 May 2019, 5:00 am
ಕೊಟ್ಟಿಗೆಹಾರ : ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಅಥ್ಲೆಟಿಕ್‌ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದಿದ್ದ ಬಾಳೂರು ಹೋಬಳಿಯ ಗುಡ್ನಳ್ಳಿ ಗ್ರಾಮದ ರಕ್ಷಿತಾರಾಜು, 2020ರಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾಳೆ.
Vijaya Karnataka Web CKM-20KTG5


ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ರಕ್ಷಿತಾ ಅವರ ಕೋಚ್‌ ರಾಹುಲ್‌, ಬೆಂಗಳೂರಿನಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ ಅರ್ಹತಾ ಸುತ್ತಿನಲ್ಲಿ ರಕ್ಷಿತಾ ಹಾಗೂ ರಾಧಾ ಆಯ್ಕೆಯಾಗಿದ್ದು ಟೋಕಿಯೋದಲ್ಲಿ ನಡೆಯುವ 2020ರ ಪ್ಯಾರಾಲಿಂಪಿಕ್ಸ್‌ನಲ್ಲಿ ರಕ್ಷಿತಾ ಭಾರತವನ್ನು ಪ್ರತಿನಿಧಿಸುತ್ತಿದ್ದು ಈ ಬಾರಿ ಚಿನ್ನಕ್ಕೆ ಕೊರಳೊಡ್ಡುವುದು ಖಚಿತ ಎಂದು ತಿಳಿಸಿದ್ದಾರೆ.

ಜುಲೈ 28ರಿಂದ ಆಗಸ್ಟ್‌ 7ರ ವರೆಗೆ ಸ್ವಿಜರ್‌ಲ್ಯಾಂಡ್‌ನಲ್ಲಿ ನಡೆಯುವ ಜೂನಿಯರ್‌ ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ರಕ್ಷಿತಾ ದುಬೈನಲ್ಲಿ ನಡೆಯುವ ಸೀನಿಯರ್‌ ವಿಶ್ವ ಚಾಂಪಿಯನ್‌ ಶಿಪ್‌ಗೂ ಆಯ್ಕೆಯಾಗಿದ್ದಾಳೆ.

ಹುಟ್ಟೂರಿನಲ್ಲಿ ಸಂಭ್ರಮದ ವಾತಾವರಣ : 2018ರಲ್ಲಿ ರಕ್ಷಿತಾ ಮೂರನೇ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ 1500 ಮೀ. ಓಟವನ್ನು 5.40 ನಿಮಿಷದಲ್ಲಿ ಕ್ರಮಿಸಿ ಚಿನ್ನದ ಪದಕ ಪಡೆದಿದ್ದರು. ಈಗ ಮತ್ತೆ 2020ರಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ಗೆ ಆಯ್ಕೆಯಾಗಿರುವುದು ರಕ್ಷಿತಾ ಅವರ ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಕ್ಷಿತಾಳ ಕುಟುಂಬ ಸದಸ್ಯರಾದ ಲಲಿತಮ್ಮ, ಇಂದ್ರ, ರವಿ, ಸಂಧ್ಯಾ, ಸುಬ್ಬರಾಯಗೌಡ, ಪಾರ್ವತಮ್ಮ, ನಾಗೇಶ್‌ಗೌಡ, ಪ್ರಾಪ್ತಿ, ಮಂಜುನಾಥ್‌ ಹಾಗೂ ಬಾಳೂರು ಗ್ರಾಮಸ್ಥರು ರಕ್ಷಿತಾ ಭಾರತಕ್ಕೆ ಚಿನ್ನದ ಪದಕ ಗೆದ್ದು ತರಲಿ ಎಂದು ಆಶಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ