ಆ್ಯಪ್ನಗರ

ಚುನಾವಣಾ ಕರ್ತವ್ಯ ಅಚ್ಚುಕಟ್ಟಾಗಿ ನಿರ್ವಹಿಸಿ

ಚುನಾವಣಾ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ತಾ.ಪಂ. ಇಓ ಕೆ.ಹೊಂಗಯ್ಯ ಅಧಿಕಾರಿಗಳಿಗೆ ಸೂಚಿಸಿದರು.

Vijaya Karnataka 8 Mar 2019, 5:00 am
ನರಸಿಂಹರಾಜಪುರ : ಚುನಾವಣಾ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ತಾ.ಪಂ. ಇಓ ಕೆ.ಹೊಂಗಯ್ಯ ಅಧಿಕಾರಿಗಳಿಗೆ ಸೂಚಿಸಿದರು.
Vijaya Karnataka Web manage electoral duty neatly
ಚುನಾವಣಾ ಕರ್ತವ್ಯ ಅಚ್ಚುಕಟ್ಟಾಗಿ ನಿರ್ವಹಿಸಿ


ತಾ.ಪಂ. ಸಾಮರ್ಥ್ಯ‌ಸೌಧದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಸ್ವೀಪ್‌ ಸಮಿತಿ ಸಭೆಯ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಎಲ್ಲ ಇಲಾಖೆಗಳು ತಮ್ಮ ಇಲಾಖೆ ವತಿಯಿಂದ ದಿನಾಂಕ ನಿಗದಿ ಪಡಿಸಿ,ಅದರಂತೆ ಕಾರ್ಯಕ್ರಮಗಳನ್ನು ನಡೆಸಿ ವರದಿ ನೀಡುವಂತೆ ಸೂಚಿಸಿದರು.

ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷ ಕ ಪ್ರಭಾಕರ್‌ ಮಾತನಾಡಿ, ಮಾ.10 ರಿಂದ 12ರವರೆಗೆ ಪಲ್ಸ್‌ ಪೋಲಿಯೊ ಕಾರ್ಯಕ್ರಮ ನಡೆಯಲಿದ್ದು, ಇಲಾಖೆ ವತಿಯಿಂದ ಮಾ. 9 ರಂದು ಜಾಥಾ ಆಯೋಜಿಸಲಾಗಿದೆ ಎಂದರು.

ಸ್ವೀಪ್‌ ಸಮಿತಿ ನೋಡೆಲ್‌ ಅಧಿಕಾರಿ ಎನ್‌.ಎಲ್‌.ಮನೀಷ್‌ ಮಾತನಾಡಿ, ಆ ಜಾಥಾದೊಂದಿಗೆ ಮತದಾನದ ಬಗ್ಗೆಯೂ ಪ್ರಚಾರ ಮಾಡಬಹುದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬಹುದಾಗಿದೆ ಎಂದರು.

ಇಓ ಕೆ.ಹೊಂಗಯ್ಯ ಮಾತನಾಡಿ, ಯಾವ ಬೂತ್‌ಗಳಲ್ಲಿ ಎಷ್ಟೆಷ್ಟು ವಿಕಲ ಚೇತನ ಮತದಾರರಿದ್ದಾರೆ, ಎಷ್ಟು ವೀಲ್‌ಛೇರ್‌ಗಳು ಬೇಕಾಗಬಹುದು, ಎಲ್ಲ ಬೂತ್‌ಗಳಲ್ಲೂ ರಾರ‍ಯಂಪ್‌ ವ್ಯವಸ್ಥೆ ಇದೆಯೇ, ವಿದ್ಯುತ್‌, ಕುಡಿಯುವ ನೀರು ಶೌಚಾಲಯಗಳು ಇವೆಯೇ ಎಂದು ಸ್ಪಷ್ಟವಾದ ಮಾಹಿತಿಯನ್ನು ಬೂತ್‌ಗಳಿಗೆ ಭೇಟಿ ನೀಡಿ ನೀಡುವಂತೆ ಸೂಚಿಸಿದರು.

ನೋಡಲ್‌ ಅಧಿಕಾರಿ ಎನ್‌.ಎಲ್‌.ಮನೀಷ್‌ ಮಾತನಾಡಿದರು. ತಹಸೀಲ್ದಾರ್‌ ಚಂದ್ರಶೇಖರ್‌ ನಾಯ್ಕ್‌, ಶಿರಸ್ತೇದಾರ್‌ ನಾಗೇಂದ್ರನಾಯ್ಕ್‌, ಗ್ರಾಮಲೆಕ್ಕಿಗ ಮಂಜುನಾಥ್‌, ಕೃಷಿ ಸಹಾಯಕ ನಿರ್ದೆಶಕ ಪರಮೇಶ್ವರ, ಆರೋಗ್ಯ ಹಿರಿಯ ನಿರೀಕ್ಷ ಕ ಪ್ರಭಾಕರ್‌, ಬಿಸಿಎಂ ಇಲಾಖೆ ಅಧಿಕಾರಿ ಧರ್ಮರಾಜ್‌, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅಶ್ವಥ್‌ರೆಡ್ಡಿ, ಕಛೇರಿ ವ್ಯವಸ್ಥಾಪಕಿ ಎಚ್‌.ಪಿ.ಮೀನಾಕ್ಷಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ