ಆ್ಯಪ್ನಗರ

ಗ್ರಾಮೀಣ ಮಹಿಳೆಯರಿಗೆ ಸವಾಲು ಅನೇಕ

ಆಧುನಿಕ ಯುಗದಲ್ಲಿ ಮಹಿಳೆಯ ಪಾತ್ರ ಅಪಾರವಾಗಿದ್ದು, ಅದರಲ್ಲೂ ಗ್ರಾಮೀಣ ಮಹಿಳೆಯರು ಅನೇಕ ಸವಾಲು ಎದುರಿಸಬೇಕಾಗಿದೆ,ಅಂತರ್ಜಾಲ ಬಳಸುವುದನ್ನು ಕಲಿಯುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಎಂದು ಜೆಡಿಎಸ್‌ ತಾಲೂಕು ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

Vijaya Karnataka 5 Jun 2019, 5:00 am
ಕಡೂರು: ಆಧುನಿಕ ಯುಗದಲ್ಲಿ ಮಹಿಳೆಯ ಪಾತ್ರ ಅಪಾರವಾಗಿದ್ದು, ಅದರಲ್ಲೂ ಗ್ರಾಮೀಣ ಮಹಿಳೆಯರು ಅನೇಕ ಸವಾಲು ಎದುರಿಸಬೇಕಾಗಿದೆ,ಅಂತರ್ಜಾಲ ಬಳಸುವುದನ್ನು ಕಲಿಯುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಎಂದು ಜೆಡಿಎಸ್‌ ತಾಲೂಕು ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.
Vijaya Karnataka Web CKM-3KDR2


ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಟಾಟಾ ಸಂಸ್ಥೆ ಮತ್ತು ಗೂಗಲ್‌ ಸಂಸ್ಥೆಗಳ ಸಹಕಾರದೊಂದಿಗೆ ಹಾಸನದ ಹರ್ಷಿತಾ ಸಂಸ್ಥೆ ಗ್ರಾಮೀಣ ಮಹಿಳೆಯರಿಗೆ ಅಂತರ್ಜಾಲ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿರುವ ಮಹಿಳೆಯರಿಗೆ ಅಂತರ್ಜಾಲ ಬಳಸುವ ಕುರಿತು ನೂರಾರು ಸಂಘ, ಸಂಸ್ಥೆಗಳು ಅರಿವು ಮೂಡಿಸಲು ಮುಂದೆ ಬಂದಿದ್ದು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಮಹಿಳೆಯರಿಗೆ ಕರೆ ನೀಡಿದರು.

ಅಧ್ಯಕ್ಷ ತೆ ವಹಿಸಿದ್ದ ಹಾಸನ ಹರ್ಷಿತಾ ಸಂಸ್ಥೆಯ ಅಧ್ಯಕ್ಷ ನಂಜಪ್ಪ ಶೆಟ್ಟಿ ಮಾತನಾಡಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರ ನಡುವಿನ ಅಂತರವನ್ನು ದೂರ ಮಾಡುವ ಉದ್ದೇಶದಿಂದ ಅಂತರ್ಜಾಲ ತರಬೇತಿ ಸಹಕಾರವಾಗಲಿದೆ. ಅಂತರ್ಜಾಲ ಬಳಸುವ ಕುರಿತು ಈಗಾಗಲೇ 45ಕ್ಕೂ ಹೆಚ್ಚಿನ (ಇಂಟರ್‌ನೆಟ್‌ ಸಾಥಿ) ಸ್ವಯಂ ಸೇವಕರಿಗೆ ತರಬೇತಿ ನೀಡಲಾಗುತ್ತಿದ್ದು. ಓರ್ವ ಸಾಥಿ ಕನಿಷ್ಠ ನಾಲ್ಕು ಹಳ್ಳಿಗಳಲ್ಲಿನ ಮಹಿಳೆಯರಿಗೆ ಇದರ ಬಗ್ಗೆ ಅರಿವು ಮೂಡಿಸಿ ಅಂತರ್ಜಾಲ ಬಳಕೆಯ ಬಗ್ಗೆ ತರಬೇತಿ ನೀಡಲಿದ್ದಾರೆ ಎಂದರು. ತಾಲೂಕು ಪಂಚಾಯಿತಿಯ ಅಧಿಕಾರಿ ನಯನ, ವಿಜಯಕುಮಾರ್‌ ಮತ್ತು ನವೀನ್‌, ನೇತ್ರಾವತಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ