ಆ್ಯಪ್ನಗರ

ಮೌಲ್ಯಯುತ ಮಾರ್ಗ ಯುವಕರ ಗುರಿಯಾಗಲಿ

ಯಾವ ವ್ಯವಸ್ಥೆ ನಮ್ಮ ಬೆಳೆಸಿದೆಯೋ ಆ ವ್ಯವಸ್ಥೆಗೆ ನಾವು ಋುಣಿಯಾಗಿರಬೇಕು ಎಂದು ಬೆಂಗಳೂರಿನ ಕರ್ನಾಟಕ ಸರ್ವೋದಯ ಮಂಡಳಿ ರಾಜ್ಯಾಧ್ಯಕ್ಷ ಡಾ.ನರಸಿಂಹಯ್ಯ ಹೇಳಿದರು.

Vijaya Karnataka 1 Sep 2019, 5:00 am
ಕಳಸ: ಯಾವ ವ್ಯವಸ್ಥೆ ನಮ್ಮ ಬೆಳೆಸಿದೆಯೋ ಆ ವ್ಯವಸ್ಥೆಗೆ ನಾವು ಋುಣಿಯಾಗಿರಬೇಕು ಎಂದು ಬೆಂಗಳೂರಿನ ಕರ್ನಾಟಕ ಸರ್ವೋದಯ ಮಂಡಳಿ ರಾಜ್ಯಾಧ್ಯಕ್ಷ ಡಾ.ನರಸಿಂಹಯ್ಯ ಹೇಳಿದರು.
Vijaya Karnataka Web CKM-31KLS1


ಇಲ್ಲಿಯ ಪ್ರಥಮ ದರ್ಜೆ ಕಾಲೇಜಿನಲ್ಲಿಶುಕ್ರವಾರ ಯುವ ಸಬಲೀಕರಣ ಕ್ರೀಡಾ ಇಲಾಖೆ, ಕರ್ನಾಟಕ ಸರ್ವೋದಯ ಮಂಡಳಿ, ಯುವ ಸ್ಪಂದನ ಮತ್ತು ಜನಪದ ಕಲಾ ಸಂಘ ಮೂಡಿಗೆರೆ ಇವರ ಸಹಯೋಗದಲ್ಲಿಏರ್ಪಡಿಸಿದ್ದ ಯುವ ಕಾರ್ಯಾಗಾರದಲ್ಲಿಮಾತನಾಡಿದರು.

ಮಾರ್ಗ ಮತ್ತು ಮೌಲ್ಯಗಳಿಂದ ಗಾಂಧೀಜಿ ವಿಶ್ವವನ್ನೆ ಗೆದ್ದಿದ್ದಾರೆ. ಸಾಮಾನ್ಯ ಜನರ ನಡುವೆ ಸಾಮಾನ್ಯರಾಗಿ ಬದುಕಿದ್ದಾರೆ. ಅವರ ವ್ಯಕ್ತಿತ್ವವನ್ನು ಯುವ ಜನತೆ ಬೆಳೆಸಿಕೊಳ್ಳಬೇಕು. ಸರಳ ಜೀವನ ಬೆಳೆಸಿಕೊಂಡರೆ ಲೋಕಪಾಲ್‌ ವಿಲ್‌ ಬೇಕಾಗಿಲ್ಲ. ಮೌಲ್ಯಯುತವಾದ ಮಾತು ಮತ್ತು ಶಾಶ್ವತವಾದ ಗುರಿಯನ್ನು ಯುವ ಜನತೆ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಯುವ ಸಬಲೀಕರಣ ಕ್ರೀಡಾ ಇಲಾಖೆಯ ಸಹ ನಿರ್ದೇಶಕ ಡಾ.ಮಂಜುಳಾ ಹಳ್ಳುಹಳ್ಳಿ ಮಾತನಾಡಿ, ಪ್ರವಾಹ ಪೀಡಿತ ಕುಟುಂಬಗಳಿಗೆ ಸಾಂತ್ವನ ಹೇಳುವ ಸಲುವಾಗಿ ಜಿಲ್ಲೆಯ ಎಲ್ಲಾಕಾಲೇಜುಗಳ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ಮೂಲಕ ಪ್ರವಾಹ ಪೀಡಿತ ಪ್ರದೇಶಗಳಲ್ಲಿಶಿಬಿರಗಳನ್ನು ನಡೆಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಹೇಳಿದರು.

ಮೂಡಿಗೆರೆ ಜನಪದ ಕಲಾ ಸಂಘದ ಅಧ್ಯಕ್ಷ ಬಕ್ಕಿ ಮಂಜುನಾಥ್‌ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಗೆ ಮೊರೆ ಹೋಗುತ್ತಿರುವ ಇಂದಿನ ವಿದ್ಯಾಮಾನದಲ್ಲಿಜನಪದದ ಸೊಗಡುಗಳು ಮರೆಯಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿಕಾಲೇಜು ಪ್ರಾಂಶುಪಾಲ ವಿನಯ್‌ ಕುಮಾರ್‌ ಶೆಟ್ಟಿ, ಕಳಸ ತಾಲೂಕು ಜನಪದ ಪರಿಷತ್‌ ಅಧ್ಯಕ್ಷ ಕಿರಣ್‌ ಶೆಟ್ಟಿ, ಯುವ ಪರಿವರ್ತಕ ಸಂಪತ್‌, ಪ್ರಕಾಶ್‌, ರಮೇಶ್‌, ಉಪನ್ಯಾಸಕರಾದ ಅದಿತ್ಯ ಅಡಿಗ, ವಿಶುಕುಮಾರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ