ಆ್ಯಪ್ನಗರ

ಮಾನಸಿಕ ಒತ್ತಡವೆ ಸರ್ವ ಕಾಯಿಲೆಗೆ ಮೂಲ

ಮಾನಸಿಕ ಒತ್ತಡವೆ ಸರ್ವ ಕಾಯಿಲೆಗೆ ಮೂಲವಾಗಿದೆ ಎಂದು ಶಿವಮೊಗ್ಗದ ಮನೋವೈದ್ಯೆ ಡಾ.ಕೆ.ಎಸ್‌.ಪವಿತ್ರ ಹೇಳಿದರು.

Vijaya Karnataka 24 Feb 2019, 5:00 am
ಕೊಪ್ಪ: ಮಾನಸಿಕ ಒತ್ತಡವೆ ಸರ್ವ ಕಾಯಿಲೆಗೆ ಮೂಲವಾಗಿದೆ ಎಂದು ಶಿವಮೊಗ್ಗದ ಮನೋವೈದ್ಯೆ ಡಾ.ಕೆ.ಎಸ್‌.ಪವಿತ್ರ ಹೇಳಿದರು.
Vijaya Karnataka Web CKM-23kph4


ಪುರಭವನದಲ್ಲಿ ಜೆಸಿಐ, ರೋಟರಿ ಕ್ಲಬ್‌ ಕೊಪ್ಪ ಮಲ್ನಾಢ್‌, ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭ ಮತ್ತಿತರ ಸಂಸ್ಥೆ ವತಿಯಿಂದ ಶನಿವಾರ ಆಯೋಜಿಸಿದ್ದ ಮನಸ್ಸು-ಹೃದಯ, ಆರೋಗ್ಯ ಅರಿವು ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾನಸಿಕ ಒತ್ತಡವು ಹೃದಯಾಘಾತ ಮತ್ತು ಪಾಶ್ರ್ವವಾಯು, ಮಧುಮೇಹ, ಅಸ್ತಮ, ಕ್ಯಾನ್ಸರ್‌, ರಕ್ತದೊತ್ತಡದಂತಹ ಕಾಯಿಲೆಗೆ ಒಂದು ಕಾರಣವಾಗಿದೆ ಎಂದು ವೈಜ್ಞಾನಿಕವಾಗಿ ನಿರೂಪಿಸಲಾಗಿದೆ. ದೇಶದಲ್ಲಿ ಇತ್ತೀಚಿನ ವರದಿ ಪ್ರಕಾರ ಶೇ.34ರಷ್ಟು ಹೃದಯಾಘಾತ ಸಾವು ಏರಿಕೆಯಾಗಿದೆ. ನಮ್ಮ ಜೀವನ ಶೈಲಿ ಬದಲಾಗಿದೆ. ವಯಸ್ಸು 35ರ ನಂತರ ಎಲ್ಲರೂ ವರ್ಷಕ್ಕೊಮ್ಮೆಯಾದರೂ ಸಕ್ಕರೆ ಅಂಶ ಮತ್ತು ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಬೇಕು. ಹೃದಯಾಘಾತ ಆಕಸ್ಮಿಕವಲ್ಲ. ಅದರ ಹಿಂದೆ ಸಂಬಂಧಿಸಿದ ಅಪಾಯಕಾರಿ ಅಂಶವು ನಮ್ಮನ್ನು ಹಿಂಬಾಲಿಸಿಕೊಂಡು ಬಂದಿರುತ್ತದೆ. ಅದು ಹಲವಾರು ವರ್ಷದಿಂದ ಬೆಳೆಯುತ್ತಾ ಬಂದಿರುತ್ತದೆ. ವಯಸ್ಸು ಮತ್ತು ಕುಟುಂಬದಲ್ಲಿ ಅನುವಂಶೀಯವಾಗಿ ಹೃದಯ ಸಂಬಂಧಿ ಕಾಯಿಲೆಯಿದ್ದರೆ ಅದನ್ನು ನಿಯಂತ್ರಿಸುವುದು ಕಷ್ಟಕರ. ಆದರೆ ಸೂಕ್ತ ಆಹಾರ ಕ್ರಮ, ವ್ಯಾಯಾಮದಿಂದ ಹಲವು ಕಾಯಿಲೆಯನ್ನು ನಿಯಂತ್ರಿಸಬಹುದು ಎಂದರು.

ಅವರು ಹೃದಯಾಘಾತ ಮತ್ತು ಮನಸ್ಸಿಗೆ ಇರುವ ಸಂಬಂಧವನ್ನು ವಿವರಿಸಿದರು.

ನಂತರ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ನಿವೃತ್ತ ವೈದ್ಯಾಧಿಕಾರಿ ಡಾ.ಕೋದಂಡರಾಮ್‌ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕಾಶ್ಮೀರದಲ್ಲಿ ಹತರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಆಶಾ ಮತ್ತು ಪ್ರಮೀಳಾ ಪ್ರಾರ್ಥಿಸಿ, ಸತ್ಯನಾರಾಯಣ ಸ್ವಾಗತಿಸಿ, ರಾಘವೇಂದ್ರ ಕೆಸವೆ ಪ್ರಾಸ್ತಾವಿಕ ನುಡಿದು, ಅರವಿಂದ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ