ಆ್ಯಪ್ನಗರ

ಮಕ್ಕಳಿಗೆ ಹಾಲು ಕೊಡುವುದು ಪಂಚಮಿಗೆ ಸೀಮಿತವಾಗಬಾರದು: ರಂಭಾಪುರೀ ಶ್ರೀಗಳು

ಕಲ್ಲ ನಾಗರನಿಗೆ ಹಾಲೆರೆಯುವ ಬದಲು ಮಕ್ಕಳಿಗೆ ಕೊಡಿ ಎಂಬ ಮಾತು ಒಪ್ಪುವಂತಹುದೇ. ಆದರೆ, ದೇವರಲ್ಲಿ ನಂಬಿಕೆ ಶ್ರದ್ಧೆಯುಳ್ಳವರು ಮಾಡಿಕೊಂಡೇ ಬರುತ್ತಾರೆ. ಯಾವತ್ತೋ ಒಂದು ದಿನ ಮಕ್ಕಳಿಗೆ ಹಾಲು ಕೊಡುವವರು ನಿತ್ಯ ಕೊಟ್ಟರೆ ಇನ್ನಷ್ಟು ಪುಣ್ಯ ಅವರಿಗೆ ಪ್ರಾಪ್ತವಾಗುತ್ತದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

Vijaya Karnataka 6 Aug 2019, 5:00 am
ಬಾಳೆಹೊನ್ನೂರು (ಚಿಕ್ಕಮಗಳೂರು) : ಕಲ್ಲ ನಾಗರನಿಗೆ ಹಾಲೆರೆಯುವ ಬದಲು ಮಕ್ಕಳಿಗೆ ಕೊಡಿ ಎಂಬ ಮಾತು ಒಪ್ಪುವಂತಹುದೇ. ಆದರೆ, ದೇವರಲ್ಲಿ ನಂಬಿಕೆ ಶ್ರದ್ಧೆಯುಳ್ಳವರು ಮಾಡಿಕೊಂಡೇ ಬರುತ್ತಾರೆ. ಯಾವತ್ತೋ ಒಂದು ದಿನ ಮಕ್ಕಳಿಗೆ ಹಾಲು ಕೊಡುವವರು ನಿತ್ಯ ಕೊಟ್ಟರೆ ಇನ್ನಷ್ಟು ಪುಣ್ಯ ಅವರಿಗೆ ಪ್ರಾಪ್ತವಾಗುತ್ತದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
Vijaya Karnataka Web CKM-5BHR6


ಅವರು ಸೋಮವಾರ ರಂಭಾಪುರೀ ಪೀಠದಲ್ಲಿ ನಾಗರ ಪಂಚಮಿ ಅಂಗವಾಗಿ ನಾಗರಕಟ್ಟೆಗೆ ಸಂಪ್ರದಾಯಕವಾಗಿ ಹಾಲೆರೆದು ಪೂಜಿಸಿದ ನಂತರ ನಡೆದ ಚಿಂತನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಆಸ್ತಿಕ ಮತ್ತು ನಾಸ್ತಿಕರ ಮಧ್ಯೆ ಯಾವಾಗಲೂ ವಾದ ವಿವಾದಗಳು ನಡೆಯುತ್ತಲೇ ಬಂದಿವೆ. ಆದರೆ, ಕೊನೆಯಲ್ಲಿ ಆ ನಾಸ್ತಿಕರು ಸಹ ದೇವರಲ್ಲಿ ಶರಣಾಗಿದ್ದನ್ನು ಕಾಣುತ್ತೇವೆ. ಅತಿಯಾದ ವೈಚಾರಿಕತೆಯಿಂದ ಅಶಾಂತಿ, ಅಸಮಾಧಾನ ಹೆಚ್ಚಾಗುವುದೇ ವಿನಃ ನೆಮ್ಮದಿ ಕಾಣದು. ಅವರವರ ನಂಬಿಕೆ, ವಿಶ್ವಾಸಗಳನ್ನು ಇನ್ನೊಬ್ಬರು ನಾಶ ಮಾಡುವುದು ಸಲ್ಲದು. ಶ್ರದ್ಧೆಯಿಂದ ಧರ್ಮ ಸಂಸ್ಕೃತಿ ಉಳಿದು ಬೆಳೆದು ಬರಲು ಸಾಧ್ಯ. ದೇವರು ಮತ್ತು ಧರ್ಮದಲ್ಲಿ ನಂಬಿಕೆಯಿಟ್ಟು ನಡೆದರೆ ಗುರಿ ತಲುಪಲು ಸಾಧ್ಯವಾಗುವುದೆಂದರು.

ಹಂಪಸಾಗರ ಹಿರೇಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ವೇ.ಮೋಕ್ಷ ನಾಥಯ್ಯ ಶಾಸ್ತ್ರಿ, ವೇದವಿದ್ವಾನ್‌ ದಾರುಕಾರಾಧ್ಯ ಶಾಸ್ತ್ರಿ ಮತ್ತು ವೈದಿಕ ಶಿವಪ್ರಕಾಶ ಶಾಸ್ತ್ರಿ ಹಿರೇಮಠ ಮತ್ತಿತರರು ಹಾಜರಿದ್ದರು. ಆಗಮಿಸಿದ್ದ ಭಕ್ತರಿಗೆ ಅನ್ನ ದಾಸೋಹ ನೆರವೇರಿಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ