ಆ್ಯಪ್ನಗರ

ಇನಾಂ ದತ್ತಪೀಠದಲ್ಲಿ ನಿರ್ಬಂಧದ ಆದೇಶ ಉಲ್ಲಂಘಿಸಿದ ಸಚಿವ ರವಿ

ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ಸಚಿವ ಸಿಟಿರವಿ ನಿರ್ಬಂಧದ ಆದೇಶ ಉಲ್ಲಂಘಿಸಿದ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲದಲ್ಲಿ ಹಾಕಿದ ಫೋಟೋ ಡಿಲೀಟ್ ಮಾಡಲಾಗಿದೆ.

Vijaya Karnataka Web 29 Sep 2020, 1:16 pm
ಚಿಕ್ಕಮಗಳೂರು: ತಾಲೂಕಿನ ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿ ಸಚಿವ ಸಿ.ಟಿ.ರವಿ ನಿರ್ಬಂಧದ ಆದೇಶ ಉಲ್ಲಂಘಿಸಿದ ಘಟನೆ ನಡೆದಿದೆ.
Vijaya Karnataka Web CT Ravi


ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸೋಮವಾರ ತಮ್ಮ ಬೆಂಬಲಿಗರು, ಮುಜರಾಯಿ ಇಲಾಖೆ ಅಧಿಕಾರಿಗಳೊಂದಿಗೆ ತೆರಳಿ ದತ್ತಪಾದುಕೆ ದರ್ಶನ ಪಡೆದಿದ್ದು, ಈ ಸಂದರ್ಭ ಕೋರ್ಟ್‌ ಆದೇಶ ಉಲ್ಲಂಘಿಸಿ ಫೋಟೊ ತೆಗೆಯಲಾಗಿದೆ.

ಇನಾಂ ದತ್ತಪೀಠದ ಗುಹೆಯೊಳಗೆ ಯಾವುದೇ ಹೊಸ ಆಚರಣೆಗಳಿಗೆ ಅವಕಾಶವಿಲ್ಲ. ಗುಹೆಯೊಳಗೆ ಫೋಟೊ, ವಿಡಿಯೊ ಚಿತ್ರೀಕರಣ ನಿರ್ಬಂಧಿಸಲಾಗಿದೆ. ಆದರೆ, ಸಚಿವ ಸಿ.ಟಿ.ರವಿ ದತ್ತಪಾದುಕೆ ದರ್ಶನ ಪಡೆಯುವ ಸಂದರ್ಭ ಫೋಟೊ ತೆಗೆದಿದ್ದಲ್ಲದೆ ಅದನ್ನು ಸಾಮಾಜಿಕ ಜಾಲತಾಣಕ್ಕೂ ಹಾಕಿ ನಂತರ ಡಿಲಿಟ್‌ ಮಾಡಲಾಗಿದೆ.

ಮುಜರಾಯಿ ಇಲಾಖೆ, ಪೊಲೀಸ್‌ ಇಲಾಖೆ ಅಧಿಕಾರಿಗಳು ಜತೆಯಲ್ಲಿರುವಾಗಲೇ ನಿರ್ಬಂಧ ಉಲ್ಲಂಘಿಸಿ ಫೋಟೊ ತೆಗೆದಿರುವ ಬಗ್ಗೆ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಸಚಿವರಿಗೆ ನಿರ್ಬಂಧ ಅನ್ವಯಿಸುವುದಿಲ್ಲವೆ? ಇನ್ನು ಮುಂದೆ ದತ್ತಗುಹೆ ಒಳಗೆ ಎಲ್ಲರಿಗೂ ಫೋಟೊ, ವಿಡಿಯೊ ಚಿತ್ರೀಕರಣಕ್ಕೆ ಮುಕ್ತ ಅವಕಾಶ ನೀಡಲಾಗುವುದೇ ಎಂದು ಪ್ರಶ್ನಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ