ಆ್ಯಪ್ನಗರ

ನೆರೆಪೀಡಿತ ಪ್ರದೇಶಗಳಿಗೆ ಸಚಿವರ ಭೇಟಿ

ನೆರೆಪೀಡಿತ ಪ್ರದೇಶವಾದ ಸಬ್ಲಿಸಮೀಪದ ಚನ್ನಡ್ಲುಗ್ರಾಮಕ್ಕೆ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 20 Sep 2019, 5:00 am
ಕೊಟ್ಟಿಗೆಹಾರ: ನೆರೆಪೀಡಿತ ಪ್ರದೇಶವಾದ ಸಬ್ಲಿಸಮೀಪದ ಚನ್ನಡ್ಲುಗ್ರಾಮಕ್ಕೆ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web minister visits to flood areas
ನೆರೆಪೀಡಿತ ಪ್ರದೇಶಗಳಿಗೆ ಸಚಿವರ ಭೇಟಿ


ನೆರೆಯಿಂದ ಹಾನಿಯಾದ ಕಿರುಸೇತುವೆ, ಕಾಫಿತೋಟವನ್ನು ವೀಕ್ಷಿಸಿದರು. ಅಲ್ಲಿಂದ ಬಾಳೂರು, ಹರವಿನಕೆರೆ, ಜಾವಳಿ, ಮಧುಗುಂಡಿ, ಬಲಿಗೆ, ಕಿರಗಲಮನೆ, ಮರಸಣಿಗೆ, ಹಿರೇಬೈಲ್‌ ಸಮೀಪದ ಚನ್ನಡ್ಲುಗ್ರಾಮಕ್ಕೆ ಭೇಟಿ ನೀಡಿ ಹಾನಿಯಾದ ಪ್ರದೇಶಗಳನ್ನು ವೀಕ್ಷಿಸಿ ಚಿಕ್ಕಮಗಳೂರಿಗೆ ತೆರಳಿದರು.

ಸಚಿವರು ಬರುತ್ತಾರೆಂದು ಮಲೆಮನೆಯ ನಿರಾಶ್ರಿತರು ಜಾವಳಿ ರಸ್ತೆಯ ಬಳಿ ಮಧ್ಯಾಹ್ನದಿಂದ ಕಾಯುತ್ತಾ ಕುಳಿತಿದ್ದರು. ಅತಿಹೆಚ್ಚು ಹಾನಿಯಾಗಿರುವ ಮಲೆಮನೆ ಗ್ರಾಮಕ್ಕೆ ಸಚಿವರು ಬರುತ್ತಾರೆಂದು ನಿರೀಕ್ಷಿಸಿದ್ದ ಮಲೆಮನೆ ಗ್ರಾಮಸ್ಥರಿಗೆ, ಸಮಯದ ಅಭಾವದಿಂದ ಸಚಿವರು ಗ್ರಾಮಕ್ಕೆ ಬರುವುದಿಲ್ಲಎಂಬ ಮಾಹಿತಿ ತಲುಪಿತು. ಆದರೂ ಸಂಜೆ 5 ಗಂಟೆ ವರೆಗೆ ಕಾದಿದ್ದರು. ಸಂಜೆ ವೇಳೆಗೆ ಮಾರ್ಗ ಮಧ್ಯದಲ್ಲೇ ಸಚಿವರನ್ನು ಎದುರುಗೊಂಡು ಅಳಲು ತೋಡಿಕೊಂಡರು. ಸಚಿವರಿಗಾಗಿ ಕಾದುಕುಳಿತಿದ್ದ ದುರ್ಗದಹಳ್ಳಿ ಗ್ರಾಮಸ್ಥರು ಸಂಜೆ ವೇಳೆಗೆ ನಿರಾಸೆಯಿಂದ ಮನೆಗೆ ಹಿಂದಿರುಗಿದರು.

ಈ ಸಂದರ್ಭದಲ್ಲಿಶಾಸಕ ಎಂ.ಪಿ ಕುಮಾರಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಎಂ.ಕೆ ಪ್ರಾಣೇಶ್‌, ಬಿಜೆಪಿ ಜಿಲ್ಲಾಧ್ಯಕ್ಷ ಜೀವರಾಜ್‌, ಜಿ.ಪಂ ಅಧ್ಯಕ್ಷೆ ಸುಜಾತಕೃಷ್ಣಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ದುಂಡುಗ ಪ್ರಮೋದ್‌, ಜಿಲ್ಲಾಧಿಕಾರಿ ಬಗಾದಿ ಗೌತಮ್‌, ಜಿ.ಪಂ ಸಿಇಒ ಅಶ್ವತಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ